ಮುಂಬೈಯಿಂದ ಕೊಲ್ಕತ್ತಾ ಗೆ ಹೋಗುವ ರಸ್ತೆಯಲ್ಲಿ ಪ್ರತಿದಿನ ವಿಚಿತ್ರಗಳು ನಡೆಯುತ್ತಿದ್ದವು ಈ ವಿಚಿತ್ರ ಘಟನೆಗಳು ರಾತ್ರಿ ಸಮಯದಲ್ಲೇ ನಡೆಯುತ್ತಿದ್ದು ಎನ್ಎಚ್4 ರೋಡಿನಲ್ಲಿ ಅಚ್ಕಾರಿ ಎನ್ನುವ ಹಳ್ಳಿಯ ಬಳಿ ಒಂದು ಸ್ಮಶಾನವಿದೆ ಎನ್ ಹೆಚ್ ಫೋರ್ ಕೂಡ ಆ ಸ್ಮಶಾನಕ್ಕೆ ಅಂಟಿಕೊಂಡ ರೀತಿಯಲ್ಲಿ ಇದೆ. ಅಲ್ಲಿ ದೆವ್ವ ಭೂತಗಳ ಚೇಷ್ಟೆ ನಡೆಯುತ್ತದೆ. ರಾತ್ರಿ ಸಮಯದಲ್ಲಿ ಓಡಾಡುವಾಗ ಗಾಡಿಗಳಿಗೆ ಅಡ್ಡವಾಗಿ ಬೂತಾ ದೆವ್ವಗಳು ಬಂದು ಕಾಟ ನೀಡುತ್ತವೆ ಹಾಗೂ ಅಪಘಾತಗಳು ಸಂಭವಿಸುತ್ತವೆ ಎಂದು ಜನರು ಹೇಳುತ್ತಾರೆ.
ಅಷ್ಟೇ ಅಲ್ಲದೆ ಈ ಜಾಗದಲ್ಲಿ ಪ್ರತಿನಿತ್ಯ ಈ ರೀತಿಯ ತೊಂದರೆಯನ್ನು ಎದುರಿಸುವುದು ಸರ್ವೇಸಾಮಾನ್ಯವಾಗಿದೆ. ಈ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಬರುವ ಅದೆಷ್ಟೋ ಜನರು ಬೂತಗಳ ಕಾಟದಿಂದ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದಲೇ ರಾತ್ರಿ ಸಮಯದಲ್ಲಿ ಅಲ್ಲಿಗೆ ಜನರು ಹೋಗಲು ಹೆದರುತ್ತಾರೆ. ಆ ಊರಿನ ಅಕ್ಕ ಪಕ್ಕದ ಜನರು ಸಾಮಾನ್ಯವಾಗಿ ರಾತ್ರಿ ಹೊತ್ತು ಓಡಾಡುವುದಿಲ್ಲ ಬದಲಾಗಿ ಹೊಸಬರು ಮಾತ್ರ ಈ ರಸ್ತೆಯ ಬಗ್ಗೆ ಗೊತ್ತಿಲ್ಲದೆ ಓಡಾಡಿ ಪ್ರತಿನಿತ್ಯ ಸಾವನ್ನಪ್ಪುತ್ತಿದ್ದಾರೆ.
ಈ ರಸ್ತೆಯಲ್ಲಿ ಒಮ್ಮೆ ಈ ರಸ್ತೆಯ ಬಗ್ಗೆ ಗೊತ್ತಿಲ್ಲದ ವಿನಾಯಕ್ ಎನ್ನುವ ಹೊಸ ವ್ಯಕ್ತಿ ಒಂದು ದಿನ ರಾತ್ರಿಯಲ್ಲಿ ಆ ರಸ್ತೆಯಲ್ಲಿ ಹಾದು ಹೋಗುತ್ತಿರುತ್ತಾನೆ. ಈ ವಿನಾಯಕ್ ಎನ್ನುವ ವ್ಯಕ್ತಿಯು ಆಂಜನೇಯ ಸ್ವಾಮಿಯ ಪರಮ ಭಕ್ತನಾಗಿದ್ದು ಪ್ರತಿದಿನ ತಮ್ಮ ಮನೆ ದೇವರ ಆಂಜನೇಯನ ಫೋಟೋಗೆ ಪೂಜೆಯನ್ನು ಮಾಡಿ ಪಕ್ಕದ ದೇವಾಲಯಗಳಿಗೆ ಭೇಟಿ ನೀಡಿ ನಂತರ ತನ್ನ ಕೆಲಸವನ್ನು ಪ್ರಾರಂಭಿಸುತ್ತಿದ್ದ.
ಅದೇ ರೀತಿ ಆತ ಆ ದಾರಿಯಲ್ಲಿ ಹೋಗುವ ಸಮಯದಲ್ಲಿ ಆತ ದಿನನಿತ್ಯದಂತೆ ಹನುಮಂತನಿಗೆ ಪೂಜೆಯನ್ನು ಸಲ್ಲಿಸಿ ಹೋಗುತ್ತಿದ್ದ ಈ ವೇಳೆ ವಿನಾಯಕ್ ಕಾರನ್ನು ಓಡಿಸಿಕೊಂಡು ಹೋಗುತ್ತಿರುವ ವೇಳೆ ಎಷ್ಟೇ ಪ್ರಯತ್ನ ಪಟ್ಟರು ಕೂಡ ದೆವ್ವಗಳು ಅವನನ್ನು ಬಿಡಲಿಲ್ಲ ಕಾರಿನ ಸುತ್ತ ಅಡ್ಡಗಟ್ಟಿ ನಿಂತಿದ್ದವು ವಿನಾಯಕ ಗೆ ಈ ದೆವ್ವಗಳು ನನ್ನನ್ನು ಬಿಡುವುದಿಲ್ಲ ಸಾಯಿಸುತ್ತವೆ ಎನ್ನುವುದು ಅರ್ಥವಾದ ನಂತರ ಕಾರಿನಲ್ಲಿ ಕುಳಿತಿದ್ದ ವಿನಾಯಕ್ ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸಲು ಶುರು ಮಾಡಿದ.
ಮನಸ್ಸಿನಲ್ಲಿ ಹನುಮಾನ್ ಚಾಲೀಸವನ್ನು ಸ್ಮರಿಸಿ ದೇವರೇ ನನ್ನನ್ನು ಹೇಗಾದರೂ ಮಾಡಿ ಕಾಪಾಡು ಎಂದು ಕೇಳಿಕೊಂಡ ತನ್ನ ಭಕ್ತನ ಕೂಗನ್ನು ಕೇಳಿಸಿಕೊಂಡ ಹನುಮಂತ ಕೆಲವೇ ಕ್ಷಣದಲ್ಲಿ ಪ್ರತ್ಯಕ್ಷನಾದ ದೇವರನ್ನು ನೋಡಿದ ತಕ್ಷಣ ದೇವ ಬಳಿ ಕೂಡ ಕಿರುಚಾಡುವುದನ್ನು ನಿಲ್ಲಿಸಿದರು ತನ್ನ ಭಕ್ತನಿಗೆ ಕಾಟ ಕೊಡುತ್ತಿದ್ದ ದೆವ್ವಗಳಿಗೆ ಹನುಮಂತ ಚೆನ್ನಾಗಿ ಪಾಠವನ್ನು ಕಲಿಸಿದ ಹನುಮಂತ ಗದೆಯಿಂದ ಕೊಟ್ಟ ಏಟಿಗೆ ದೆವ್ವಗಳು ಹೆದರಿಕೊಂಡು ಅಲ್ಲಿಂದ ಓಡಿ ಹೋದವು ವಿನಾಯಕ್ ಹನುಮಂತನ ರೂಪವನ್ನು ಕಾರಿನಲ್ಲಿ ಕುಳಿತು ನೋಡುತ್ತಿದ್ದ ದೆವ್ವಗಳು ಓಡಿ ಹೋದ ನಂತರ ಹನುಮಂತನ ಪವಾಡ ನೋಡಿ ವಿನಾಯಕ್ ದೇವರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡನು