ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಾಲ್ ಮದುವೆಗೆ ನಟ ದರ್ಶನ್ ಕಾರಣ. ನಿರೀಕ್ಷೆಯಂತೆ ಆಗಿದ್ದರೆ ಈ ಜೋಡಿಯ ಮದುವೆಗೆ ದರ್ಶನ್ ಮುಂದೆ ನಿಲ್ಲಬೇಕಿತ್ತು. ಇವರಿಬ್ಬರ ಮದುವೆ ಫಿಕ್ಸ್ ಆದ ನಂತರ ದರ್ಶನ್ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ದರ್ಶನ್ ಈ ಮದುವೆಗೆ ಬರುತ್ತಾರೆ ಎಂಬ ಮಾತು ಸುಳ್ಳಾಗಿದ್ದು, ಅವರ ಗೈರುಹಾಜರಿ ಬೇಸರ ತಂದಿದೆ ಎಂದು ತರುಣ್ ಸುಧೀರ್ ಹೇಳಿದ್ದಾರೆ.
ಈ ವಿವಾಹ ಮಹೋತ್ಸವದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ತರುಣ್, `ಹೊಸ ಜೀವನ, ಹೊಸ ಹುರುಪು. ಇಷ್ಟು ದಿನ ಕಾಯುತ್ತಿದ್ದರೂ ದೇವರು ಒಳ್ಳೆಯದನ್ನೇ ಕೊಟ್ಟಿದ್ದಾನೆ. ಸಾಕಷ್ಟು ಜನ ಬಂದು ವಿಶ್ ಮಾಡಿದ್ದು, ಎಲ್ಲರೂ ಅವರ ಕುಟುಂಬದವರು ಬಂದು ವಿಶ್ ಮಾಡಿದ್ದಾರೆ ಎಂದರು.
ದರ್ಶನ್ ಗೈರುಹಾಜರಿಯ ಕುರಿತು ಮಾತನಾಡಿದ ತರುಣ್, `ಲಗ್ನ ಪತ್ರಿಕೆ ಬರೆಯುವ ಮುನ್ನವೇ ದಿನಾಂಕವನ್ನು ದೃಢಪಡಿಸಲಾಗಿತ್ತು. ಡೇಟ್ ಚೇಂಜ್ ಮಾಡ್ಬೇಡಿ ಅಂದ್ರು ದರ್ಶನ್. ನೀವು ಆಗಸ್ಟ್ 11 ರಂದು ದಿನಾಂಕವನ್ನು ನೀಡಿದ್ದೀರಿ. ಅವರು ಹೇಳಿದಂತೆ ನಾವು ಮದುವೆಯಾದೆವು. ದರ್ಶನ್ ಇಲ್ಲದಿರುವುದು ಬೇಸರ ತಂದಿದೆ’ ಎಂದು ದರ್ಶನ್ ಬಗ್ಗೆ ಮಾತನಾಡುತ್ತಾ ತರುಣ್ ಸುಧೀರ್ ಭಾವುಕರಾದರು.
ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮದುವೆ ಇಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್ ನಲ್ಲಿ ನೆರವೇರಿತು. ಹಲವು ಚಿತ್ರರಂಗದ ದಿಗ್ಗಜರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ದಂಪತಿ ಹೊಸ ಜೀವನಕ್ಕೆ ಕಾಲಿಟ್ಟರು. ತಾಳಿ ಕಟ್ಟೋ ಸಂದರ್ಭದಲ್ಲಿ ನಟಿ ಸೋನಾಲ್ ಭಾವುಕರಾದರು.
ಅದ್ದೂರಿ ಧಾರೆ ಮಂಟಪದಲ್ಲಿ ತರುಣ್-ಸೋನಾಲ್ ಮದುವೆ ಸಜ್ಜಾಗಿದೆ. ಕಲ್ಯಾಣ ಮಂಟಪವನ್ನು ದಕ್ಷಿಣ ಭಾರತದ ಶೈಲಿಯಲ್ಲಿ ಅಲಂಕರಿಸಲಾಗಿದೆ. ಮಹಾದ್ವಾರದಂತೆ ಮಹಾದ್ವಾರವನ್ನು ಅಲಂಕರಿಸಲಾಗಿತ್ತು. ವಿಷ್ಣುವಿನ ದಶಾವತಾರಗಳ ಮಧ್ಯದಲ್ಲಿ ಕಮಲದ ಮಂಟಪ ಸಿದ್ಧಗೊಂಡಿದ್ದು ವಿಶೇಷವಾಗಿತ್ತು.
ಸದ್ಯ ದರ್ಶನ್ ಜೈಲಿನಲ್ಲಿದ್ದಾರೆ. ಆದರೂ ಮನೆಗೆ ಹೋಗಿ ಅತ್ತಿಗೆ ವಿಜಯಲಕ್ಷ್ಮಿಗೆ ಮದುವೆಯ ಮೊದಲ ಇನ್ವಿಟೇಶನ್ ಕೊಟ್ಟಿದರು ತರುಣ್ ಸುಧೀರ್..ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದು ತರುಣ್ ಸುಧೀರ್ ಹೇಳಿದ್ದಾರೆ. ರಾತ್ರೋರಾತ್ರಿ ಬಂದ ವಿಜಯಲಕ್ಷ್ಮಿ ತರುಣ್ ಸೋನಾಲ್ ಗೆ ವಿಶೇಷವಾದ ಡೈಮಂಡ್ ರಿಂಗ್ ಅನ್ನು ಕೊಟ್ಟಿದಾರೆ ಎನ್ನಲಾಗಿದೆ. ಇದನ್ನ ದರ್ಶನ ಅವರೇ ಕೊಡಲು ಹೇಳಿದ್ದರಂತೆ. ತರುಣ್ ಸುಧೀರ್ ಮೇಲೆ ದರ್ಶನ್ ಗೆ ಅಪಾರ ಪ್ರೀತಿ, ಗೌರವ ಇದೆ. ಡೈಮಂಡ್ ರಿಂಗ್ ನೋಡಿ ತರುಣ್ ಸುಧೀರ್ ಸೋನಲ್ ಮಂಥೆರೊ ಶಾಕ್ ಆಗಿದ್ದಾರೆ.