ವೀಕೆಂಡ್ ವಿಥ್ ರಮೇಶ ಕಾರ್ಯಕ್ರಮ ಬಹು ನೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ರಾಜ್ಯದ ಸಾಧಕರ ಮನದಾಳ, ನಡೆದು ಬಂದು ದಾರಿ ಹಂಚಿಕೊಳ್ಳುವ ಈ ಕಾರ್ಯಕ್ರಮವನ್ನ ನಟ ರಮೇಶ ಅರವಿಂದ ಅದ್ಭುತ ವಾಗಿ ನಡೆಸಿಕೊಡುತ್ತಾರೆ. ಈಗಾಗಲೇ ನಾಲ್ಕು ಸೀಸನ್ ಮುಗಿಸಿ ಐದನೇ ಸೀಸನ್ ಗೆ ಕಾಲಿಟ್ಟಿರುವ ಕಾರ್ಯಕ್ರಮಕ್ಕೆ ಯಾರಾಗಲಿದ್ದಾರೆ ಈ ಬಾರಿಯ ಸಾಧಕರು ಎಂಬ ಕುತೂಹಲ ಗಳು ಸಾಕಷ್ಟು ಮೂಡಿವೆ.

 

 

ಅದರಲ್ಲೂ ದೊಡ್ಡಮನೆ ಅಶ್ವಿನಿ ಪುನಿತ್ ರಾಜಕುಮಾರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಅದಾದ ಮೇಲೆ ಈಗ ಅವರ ಅತ್ತಿಗೆ ನಟ ಶಿವರಾಜಕುಮಾರ ಅವರ ಪತ್ನಿ ಗೀತಾ ಶಿವರಾಜಕುಮಾರ ಹೆಸರು ಕೇಳಿ ಬರುತ್ತಿದ್ದು, ಅವರು ಸಾಧಕರ ಸೀಟನಲ್ಲಿ ಕೂರಬೇಕು ಎಂಬುದು ಬಹುತೇಕ ಅಭಿಮಾನಿಗಳ ಆಶಯವಾಗಿದೆ.

ನಟ ಶಿವರಾಜಕುಮಾರ ತಮ್ಮ ಚಲನಚಿತ್ರ ವೃತ್ತಿಜೀವನದ ಹೊರತಾಗಿ, ಶಿವರಾಜ್ ಕುಮಾರ್ ಅವರು ತಮ್ಮ ದಾನ ಕಾರ್ಯಗಳು ಮತ್ತು ಧಾರ್ಮಿಕ ನಂಬಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಪ್ರದರ್ಶನದಲ್ಲಿ ಕಾಣಿಸಿಕೊಂಡ ಹಣವನ್ನು ಬಡ ಮಕ್ಕಳಿಗಾಗಿ ಮೀಸಲಿಡಲಾಯಿತು, ಅಗತ್ಯವಿರುವವರಿಗೆ ಸಹಾಯ ಮಾಡುವ ಅವರ ಬದ್ಧತೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ. ಅವರ ಎಲ್ಲ ಕಾರ್ಯಗಳಲ್ಲಿ ಜೊತೆಯಾಗಿ, ಈ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತವರು ಗೀತಾ ಶಿವರಾಜಕುಮಾರ. ದಂಪತಿಗೆ ನಿವೇದಿತಾ ಮತ್ತು ನಿರುಪಮಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಇಬ್ಬರೂ ತಮ್ಮ ವೈಯಕ್ತಿಕ ಜೀವನದಲ್ಲಿ ನಿರತರಾಗಿದ್ದಾರೆ.

 

 

ನಿರ್ಮಾಪಕಿಯಾಗಿರುವ ಗೀತಾ ಶಿವರಾಜಕುಮಾರ ಇತ್ತೀಚೆಗೆ ವೇದ ಚಿತ್ರ ನಿರ್ಮಾಣ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಜೊತೆಗೆ ಹಲವಾರು ಯುವ ಕಲಾವಿದರಿಗೆ ಹೊಸ ಜೀವನ ರೂಪಿಸಿಕೊಟ್ಟಿದ್ದಾರೆ. ಇಂತಹ ಗೀತಾ ಶಿವರಾಜಕುಮಾರ ಸಿನಿಮಾ ರಂಗವಲ್ಲದೆ, ಸಾಮಾಜಿಕ ರಂಗದಲ್ಲೂ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿಯಾಗಿರುವ ಗೀತಾ ಶಿವರಾಜಕುಮಾರ ರಾಜಕೀಯ ರಂಗದಲ್ಲೂ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ನಲ್ಲಿ ಇವರ ಹೆಸರು ಮುಂಚೂಣಿಯಲ್ಲಿತ್ತು. ಈಗ ಮತ್ತೆ ಕಾಂಗ್ರೆಸ್ ಪರ ಒಲವು ತೋರಿಸಿದ್ದಾರೆ ಎನ್ನಲಾಗಿದೆ.

 

 

ಏನೇ ಆಗಲಿ ದೊಡ್ಮನೆ ಕುಟುಂಬದ ಇಬ್ಬರು ಪ್ರಮುಖರು ವೀಕೆಂಡ್ ವಿಥ್ ರಮೇಶ ಕಾರ್ಯಕ್ರಮಕ್ಕೆ ಬರಬೇಕು ಎಂಬುದು ವಿಶೇಷವಾಗಿದ್ದು, ಗೀತಾ ಶಿವರಾಜಕುಮಾರ ಮತ್ತು ಅಶ್ವಿನಿ ಪುನಿತ್ ರಾಜಕುಮಾರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Leave a comment

Your email address will not be published. Required fields are marked *