ನಿನ್ನನ್ ಯಾರು ಮದುವೆ ಆಗ್ತಾರೆ ಎಂದವರಿಗೆ ಬ್ರಹ್ಮಗಂಟು ಖ್ಯಾತಿಯ ಗುಂಡಮ್ಮ ಭಾರತಿ ಭಟ್ ತಿರುಗೇಟು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರವಾಹಿ ಎಲ್ಲರಿಗೂ ಗೊತ್ತೇ ಇದೆ. ಅದರಲ್ಲಿ ಗುಂಡಮ್ಮ ಹೆಚ್ಚು ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿದ್ದರು. ಗುಂಡಮ್ಮನ ನಿಜವಾದ ಹೆಸರು ಭಾರತೀ ಭಟ್ ಆಗಿದ್ದು ಇವರು ಕನ್ನಡ ಕಿರುತೆರೆಗೆ ಬ್ರಹ್ಮಗಂಟು ಎನ್ನುವ ಧಾರಾವಾಹಿಯ ಮೂಲಕ ಪಾದಾರ್ಪಣೆಯನ್ನು ಮಾಡಿದರು. ಗುಂಡಮ್ಮ ಎಂದೇ ಪ್ರಖ್ಯಾತಿಯನ್ನು ಪಡೆದಿದ್ದ ಗೀತಾರವರು ಧಾರವಾಹಿ ಮುಗಿದ ನಂತರ ವರ್ಕೌಟ್ ಮಾಡುತ್ತಾ ತಮ್ಮ ವೇಟ್ ಲಾಸ್ ಮಾಡುವಲ್ಲಿ ನಿರತರಾಗಿದ್ದಾರೆ.

ಗುಂಡಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ವೇಟ್ ಲಾಸ್ ಜರ್ನಿ ಬಗ್ಗೆ ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಅಭಿಮಾನಿಗಳು ಕೂಡ ಗುಂಡಮ್ಮ ರವರ ವೇಟ್ ಲಾಸ್ ಜರ್ನಿಗೆ ಪ್ರೋತ್ಸಾಹವನ್ನು ನೀಡಿ ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ. ಆದರೆ ಕೆಲವೊಬ್ಬರು ನೆಗೆಟಿವ್ ಕಾಮೆಂಟ್ಗಳನ್ನು ಮಾಡುವ ಮೂಲಕ ಗುಂಡಮ್ಮ ರವರ ಉತ್ಸಾಹಕ್ಕೆ ಹುಳಿ ಹಿಂಡುತ್ತಿದ್ದಾರೆ. ಭಾರತಿ ಭಟ್ ರವರಿಗೆ ಮಾತ್ರವಲ್ಲದೆ ಹಲವಾರು ಜನರಿಗೆ ನೀವು ದಪ್ಪಗಿದ್ದೀರಿ ಸಣ್ಣಗೆ ಇದ್ದೀರಿ ಎಂದು ಬಾಡಿ ಶೇಮಿಂಗ್ ಮಾಡೋದು ತಪ್ಪು ಎಂದು ಗೊತ್ತಿದ್ದರೂ ಕೂಡ ಎಲ್ಲಾ ಕಡೆ ಅವರನ್ನು ಹೀಯಾಳಿಸುತ್ತಿರುತ್ತಾರೆ.

 

 

ಕೆಲವೊಬ್ಬರು ಇಂತಹವರಿಗೆ ಸಪೋರ್ಟ್ ಮಾಡುತ್ತಾರೆ ಇನ್ನೂ ಕೆಲವರು ಇವರನ್ನು ಕಿನ್ನತೆಗೆ ಗುರಿ ಮಾಡುತ್ತಾರೆ. ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್ ಇದೀಗ ತಮ್ಮ ವೇಟ್ ಲಾಸ್ ಜರ್ನಿಯಲ್ಲಿ ನಿರತರಾಗಿದ್ದು ಇವರ ಬಗ್ಗೆಯೂ ಕೂಡ ಹಲವರು ಬ್ಯಾಡ್ ಕಮೆಂಟ್ಗಳನ್ನು ಕೂಡ ಹಾಕುತ್ತಿರುತ್ತಾರೆ. ಭಾರತಿ ಭಟ್ ರವರು ಬ್ರಹ್ಮಗಂಟು ಧಾರವಾಹಿಯಲ್ಲಿ ಲಕ್ಕಿ ಎನ್ನುವವರ ಜೊತೆ ನಾಯಕ ನಟಿಯಾಗಲಿ ಕಾಣಿಸಿಕೊಂಡಿದ್ದರು ಇದಾದ ನಂತರ ಭಾರತೀ ಭಟ್ ಯಾವುದೇ ಧಾರವಾಹಿಗಳಲ್ಲು ಕೂಡ ನಟಿಸಿರಲಿಲ್ಲ.

ಬ್ರಹ್ಮಗಂಟು ಧಾರವಾಹಿಯಲ್ಲಿ ಗೀತ ಆಗಿ ಕನ್ನಡ ಜನತೆಯ ಮನೆಗೆದ್ದಿದ್ದ ಗುಂಡಮ್ಮ ಬಿಗ್ ಬಾಸ್ ನಲ್ಲಿಯೂ ಕೂಡ ಸ್ಪರ್ಧಿಸಿದ್ದರು. ಇದೀಗ ಮತ್ತೆ ಕಿರುತೆರೆಗೆ ಗೀತಾ ಭಾರತಿ ಭಟ್ ಮರಳಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ನಟಿ ಭಾರತಿ ಭಟ್ ಭಾವುಕರಾಗಿ ತಮ್ಮ ಜೀವನದ ಕಥೆಯನ್ನು ಹಂಚಿಕೊಂಡಿದ್ದಾರೆ. ಗೀತಾ ಕಿರುತೆರೆಗೆ ಲಗ್ಗೆ ಇಟ್ಟಿದ್ದು ಅನಿರೀಕ್ಷಿತವಾಗಿ ಇವರು ಎದುರಿಸಿದ ಅದೆಷ್ಟೋ ಕಷ್ಟಗಳು ಅದೆಷ್ಟೋ ಜನರಿಗೆ ಸ್ಪೂರ್ತಿ ಎಂದು ಹೇಳಬಹುದು ಅಂದು ದಪ್ಪಗಿದ್ದ ಗುಂಡಮ್ಮ ಎಂದು ಸಣ್ಣಗಾಗಿದ್ದಾರೆ.

 

 

ನೀನು ಇಷ್ಟು ದಪ್ಪಗಿದ್ದೀಯಾ ಎಂದು ಹೇಳಿ ಗೇಲಿ ಮಾಡಿದ ಗೆಳೆಯರಿಗೆ ಎಲ್ಲರಿಗೂ ಸೂಪರ್ ಕ್ವೀನ್ ವೇದಿಕೆ ಮೇಲೆ ಗುಂಡಮ್ಮ ಉತ್ತರ ನೀಡಿದ್ದಾರೆ. ಕಾಲೇಜು ಸ್ಕೂಲ್ ಗಳಲ್ಲಿ ನಾನು ಓದುತ್ತಿದ್ದಾಗ ನಾನು ಈ ರೀತಿ ದಪ್ಪ ಇರುವುದರಿಂದ ಎಲ್ಲರೂ ನನ್ನನ್ನು ಗೇಲಿ ಮಾಡುತ್ತಿದ್ದರು. ತುಂಬಾ ಜನ ನನ್ನ ನೋಡಿ ತಮಾಷೆ ಮಾಡುತ್ತಿದ್ದರು ಡುಮ್ಮಿ ಎಂದು ಕೂಡ ಕರೆಯುತ್ತಿದ್ದರು. ಯಾವ ದೇಶದ ಅಂಗಡಿಯ ಅಕ್ಕಿಯನ್ನು ನಿಮ್ಮ ಮಗಳಿಗೆ ತಿನ್ನಿಸುತ್ತೀರಾ ಎಂದು ನಮ್ಮ ತಂದೆ ತಾಯಿಯನ್ನು ಕೂಡ ಪ್ರಶ್ನಿಸುತ್ತಿದ್ದರು ನಿನ್ನನ್ನು ಯಾರು ಮದುವೆಯಾಗುತ್ತಾರೆ ಎಂದು ಪ್ರಶ್ನೆಗಳನ್ನು ಕೂಡ ಕೇಳುತ್ತಿದ್ದರು ಆಗ ನನ್ನ ಮನಸ್ಸಿಗೆ ಹಿಂಸೆಯಾಗುತ್ತಿತ್ತು.

ನನಗೆ ಕಿರುತೆರೆಯಲ್ಲಿ ಈ ರೀತಿ ಅವಕಾಶ ಸಿಗುತ್ತದೆ ಧಾರವಾಹಿಯಲ್ಲಿ ನಟಿಸುವ ಅವಕಾಶ ಸಿಗುತ್ತದೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪಾರ್ಟಿಸಿಪೇಟ್ ಮಾಡುವ ಅವಕಾಶ ಸಿಗುತ್ತದೆ ಎನ್ನುವ ಯಾವ ಭರವಸೆಯೂ ಕೂಡ ಇರಲಿಲ್ಲ ನಾನು ಕಿರುತೆರೆಯಲ್ಲಿ ಮಿಂಚುತ್ತೇನೆ ಎನ್ನುವ ಯಾವ ಕನಸು ಕೂಡ ನಾನು ಕಂಡಿರಲೇ ಇಲ್ಲ.

 

 

ನಾನು ಇಲ್ಲಿಯವರೆಗೂ ಬಂದಿದ್ದೇನೆ ನನ್ನ ಜರ್ನಿಯಲ್ಲಿ ಹಲವಾರು ವಿಷಯಗಳನ್ನು ಕಲಿತಿದ್ದೇನೆ ಕಲಿಯುತ್ತಲು ಕೂಡ ಇದ್ದೇನೆ. ನಾನು ಈಗಾಗಲೇ 30 ಕೆಜಿ ತೂಕವನ್ನು ಇಳಿಸಿದ್ದೇನೆ ಮತ್ತೆ 30 ಕೆಜಿ ತೂಕವನ್ನು ಇಳಿಸುವ ಗೋಲ್ ಇದೆ ಎಂದು ಹೇಳಿದ್ದಾರೆ. ಚಿಕ್ಕ ವಯಸ್ಸಿನಿಂದ ನನಗೆ ತಂದೆಯನ್ನು ಹಗ್ ಮಾಡಬೇಕು ಎಂದು ಆಸೆ ಇದೆ. ನಾನು ಇಲ್ಲಿಯವರೆಗೂ ನನ್ನ ಅಪ್ಪನನ್ನು ಒಂದು ಬಾರಿಯೂ ಕೂಡ ಹಗ್ ಮಾಡಿಲ್ಲ ಎಂದು ಸೂಪರ್ ಕ್ವೀನ್ ವೇದಿಕೆಯಲ್ಲಿ ತಮ್ಮ ತಂದೆಯನ್ನು ಹಗ್ ಮಾಡಿಕೊಂಡು ಭಾವುಕರಾಗಿದ್ದಾರೆ.

Be the first to comment

Leave a Reply

Your email address will not be published.


*