ಸಿನಿಮಾ ನೋಡಿ ನಾನು ಮೂಕ ವಿಸ್ಮಿತನಾದೆ. ಅಪ್ಪು ನಡೆದಾಡುವ ದೇವರು ಕಣ್ಣಂಚಲ್ಲಿ ನೀರು ಬರುವ ಹಾಗೆಯೇ ಇದೆ: ದಾಸ

ಪ್ರತಿದಿನ ಪ್ರತಿಕ್ಷಣ ನೆನಪಿಸಿ ಮಾಡಿಕೊಳ್ಳಬೇಕಾದ ದೇವರು ಎಂದರೆ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾತ್ರ. ಕರ್ನಾಟಕದಲ್ಲಿ ಎಲ್ಲೆಡೆ ಅವರ ಅಭಿಮಾನಿಗಳು ಅಪ್ಪುವನ್ನು ದೇವರಂತೆ ಕಾಣುತ್ತಿದ್ದಾರೆ. ಅಪ್ಪುರವರ ಗಂಧದ ಗುಡಿ ಸಿನಿಮಾ ರಿಲೀಸ್ ಆಗಿದ್ದು ಆ ಚಿತ್ರವನ್ನು ನೋಡಿದ ಅಭಿಮಾನಿಗಳೆಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಗಂಧದ ಗುಡಿ ಸಿನಿಮಾದ ಬಗ್ಗೆ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅಪ್ಪುವಿನ ಗಂಧದಗುಡಿ ಚಿತ್ರವನ್ನು ನೋಡಿ ಆ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಹಾಗೂ ಅಪ್ಪು ಒಳ್ಳೆಯ ಸ್ನೇಹಿತರು ದರ್ಶನ್ ಗೆ ಅಪ್ಪುವನ್ನು ಕಂಡರೆ ತುಂಬಾ ಪ್ರೀತಿ ದರ್ಶನ್ ಗೆ ಕೂಡ ಪ್ರಾಣಿ-ಪಕ್ಷಿಗಳೆಂದರೆ ತುಂಬಾ ಪ್ರೀತಿ ಗಂಧದಗುಡಿ ಸಿನಿಮಾ ನೋಡಿ ಸಂತೋಷಕ್ಕೆ ದರ್ಶನ್ ಕಣ್ಣಿನಲ್ಲಿ ಕೂಡ ಕಣ್ಣೀರು ಬಂತಂತೆ.

 

 

ಗಂಧದ ಗುಡಿ ಸಿನಿಮಾ ಕುರಿತು ಮಾತನಾಡಿದ ದರ್ಶನ್ ಈ ಸಿನಿಮಾ ನೋಡಿ ನಾನು ಮೂಕ ವಿಸ್ಮಿತನಾದೆ. ಈ ಸಿನಿಮಾದ ಬಗ್ಗೆ ಮಾತನಾಡಲು ಮಾತುಗಳೇ ಬರುತ್ತಿಲ್ಲ. ಅಷ್ಟು ಚೆನ್ನಾಗಿದೆ ಸಿನಿಮಾ ಎಲ್ಲರ ಕಣ್ಣಂಚಲ್ಲಿ ನೀರು ಬರುವ ಹಾಗೆಯೇ ಸಿನಿಮಾ ಕೂಡ ಇದೆ.

 

ಅಪ್ಪೂರವರು ಗಂಧದ ಗುಡಿ ಸಿನಿಮಾದಲ್ಲಿ ನಾನು ಹೆಂಡ್ತಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬಂದಿದ್ದೇನೆ ನಾನು ಸೇಫಾಗಿದ್ದೇನೆ ಎಂದು ಹಲವಾರು ಸಂದರ್ಭಗಳಲ್ಲಿ ಹಲವಾರು ಸಾರಿ ಹೇಳಿದ್ದಾರೆ ಇದನ್ನು ಕೇಳಿದಾಗ ಎಂತವರ ಕಣ್ಣಿನಲ್ಲೂ ಕೂಡ ಕಣ್ಣೀರು ಬಂದೇ ಬರುತ್ತದೆ. ಅಪ್ಪುವಿಗೆ ನಾನು ಮುಂದೆ ಇರುವುದಿಲ್ಲ ಎಂದು ಗೊತ್ತಾಗಿ ಈ ಮಾತನ್ನು ಹೇಳಿದರು ಏನೋ ಎನಿಸುತ್ತದೆ. ಅಪ್ಪುವನ್ನು ನಡೆದಾಡುವ ದೇವರು ಎಂದು ದರ್ಶನ್ ಹೇಳಿದರು ಈ ಮಾತುಗಳನ್ನು ಕೇಳಿದ ಅಶ್ವಿನಿ ಪುನೀತ್ ಕಣ್ಣೀರು ಹಾಕಿದ್ದಾರೆ.

Be the first to comment

Leave a Reply

Your email address will not be published.


*