ಕರ್ನಾಟಕದ ಬಹು ಬೇಡಿಕೆ ನಟ ಡಿ ಬಾಸ್ ದರ್ಶನ್(D boss Darshan) ರವರು ಇದೀಗಾಗಲೇ ಹಲವಾರು ವಿಷಯಗಳ ಮೂಲಕ ಸುದ್ದಿಯಲ್ಲಿರುತ್ತಾರೆ ಇವರು ಸಿನಿಮಾಗಳ ವಿಷಯವಾಗಿ ಮಾತ್ರ ಸುದ್ದಿಯಲ್ಲಿರದೆ ಹಲವಾರು ವೈಯಕ್ತಿಕ ವಿಚಾರಗಳು ಹಾಗೂ ರಾಜಕೀಯದ ವಿಚಾರವಾಗಿಯೂ ಕೂಡ ಸುದ್ದಿಯಲ್ಲಿರುತ್ತಾರೆ. ಡಿ ಬಾಸ್ ದರ್ಶನ್ ರವರಿಗೆ ಸಿನಿಮಾ ರಂಗ ಮಾತ್ರವಲ್ಲದೇ ಇನ್ನೂ ರಾಜಕೀಯ ರಂಗ ಮತ್ತಿತರ ರಂಗಗಳಲ್ಲಿ ಕೂಡ ಸ್ನೇಹಿತರಿದ್ದಾರೆ. ಡಿ ಬಾಸ್ ದರ್ಶನ್ ಹಾಗೂ ಶಾಸಕ ಜಮೀರ್ ಅಹಮದ್(Zameer Ahmed) ರವರ ನಡುವೆ ಇರುವ ಸ್ನೇಹ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.
ಡಿ ಬಾಸ್ ದರ್ಶನ್ ಶಾಸಕ ಜಮೀರ್ ಅಹಮದ್ ರವರ ಪುತ್ರ ಜೈದ್ ಖಾನ್(zaid khan) ಹಾಗೂ ನಟಿ ಸೋನಲ್(Sonal) ರವರ ಬನಾರಸ್(Banaras) ಚಿತ್ರದ ಪ್ರೀ ರಿಲೀಸ್ ಇವೆಂಟ್ನಲ್ಲೂ ಕೂಡ ಭಾಗಿಯಾಗಿ ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಈ ಹಿಂದೆ ಶಾಸಕ ಜಮೀರ್ ಅಹ್ಮದ್ ಹಾಗೂ ಡಿ ಬಾಸ್ ದರ್ಶನ್ ಇನ್ನಿತರ ಸ್ನೇಹಿತರು ಎಲ್ಲರೂ ಸೇರಿಕೊಂಡು ಒಂದು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು ಈ ವೇಳೆ ನಡೆದ ಘಟನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ದೇವಸ್ಥಾನದಲ್ಲಿ ಪೂಜೆ ನಡೆದ ನಂತರ ದೇವಸ್ಥಾನದ ಪೂಜಾರಿ ಡಿ ಬಾಸ್ ದರ್ಶನ್ ರವರಿಗೆ ಪೇಟವನ್ನು ಹಾಕಲು ಬರುತ್ತಾರೆ. ತಕ್ಷಣವೇ ಡಿ ಬಾಸ್ ದರ್ಶನ್ ಅದನ್ನು ತಿರಸ್ಕರಿಸಿ ದೊಡ್ಡವರಿಗೆ ಮೊದಲು ಹಾಕಿ ಎಂದು ಹೇಳಿ ಜಮೀರ್ ಅಹ್ಮದ್ ಅವರಿಗೆ ಪೇಠವನ್ನು ಹಾಕಿಸಿ ನಂತರ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದೀಗ ಈ ವಿಡಿಯೋ ಎಲ್ಲಾ ಕಡೆ ವೈರಲ್ಲಾಗಿದ್ದು ಡಿ ಬಾಸ್ ದರ್ಶನ್ ರವರ ಅಭಿಮಾನಿಗಳು ಅವರ ದೊಡ್ಡ ಗುಣದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಡಿ ಬಾಸ್ ದರ್ಶನ್ ತಮ್ಮ ಕ್ರಾಂತಿ ಸಿನಿಮಾ ಜನವರಿ 26 ಕ್ಕೆ ರಿಲೀಸ್ ಆಗುತ್ತಿದ್ದು ಅದರ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಡಿ ಬಾಸ್ ದರ್ಶನ್ ಮಾಧ್ಯಮಗಳಿಂದ ಬ್ಯಾನ್ ಆಗಿದ್ದು ಅವರ ಅಭಿಮಾನಿಗಳು ತಮ್ಮ ವಾಹನಗಳ ಮೇಲೆ ಪೋಸ್ಟರ್ ಅಂಟಿಸುವ ಮೂಲಕ ಕೂಡ ಕ್ರಾಂತಿ ಸಿನಿಮಾದ ಪ್ರಚಾರವನ್ನು ಮಾಡುತ್ತಿದ್ದಾರೆ.
ಡಿ ಬಾಸ್ ದರ್ಶನ್ ಕೂಡ ತಮ್ಮ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುವುದಕ್ಕಾಗಿ ಹಲವಾರು ಯೂಟ್ಯೂಬ್ ಚಾನೆಲ್ ಗಳಲ್ಲಿ ಸಂದರ್ಶನವನ್ನು ನೀಡುತ್ತಿದ್ದಾರೆ.ಕ್ರಾಂತಿ ಸಿನಿಮಾವು ಪ್ಯಾನ್ ಇಂಡಿಯಾ(Pan India) ಮಟ್ಟದಲ್ಲಿ ರಿಲೀಸ್ ಆಗುತ್ತಿದ್ದು ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ. ಕ್ರಾಂತಿ ಸಿನಿಮಾದಲ್ಲಿ ನಾಯಕ ನಟಿಯಾಗಿ ರಚಿತಾ ರಾಮ್(rachita Ram) ರವರೂ ಕಾಣಿಸಿಕೊಂಡಿದ್ದು ಕ್ರಾಂತಿ ಸಿನಿಮಾವನ್ನು ಶೈಲಜಾ ನಾಗ ಹಾಗೂ ಬಿ ಸುರೇಶ್ ರವರು ನಿರ್ಮಾಣ ಮಾಡುತ್ತಿದ್ದಾರೆ. ಕ್ರಾಂತಿ ಸಿನಿಮಾವನ್ನು ವಿ ಹರಿಕೃಷ್ಣರವರು ನಿರ್ದೇಶನ ಮಾಡುತ್ತಿದ್ದು ಇದರ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಕ್ರಾಂತಿ ಸಿನಿಮಾ(Kranti cinema) ಮುಂದಿನ ವರ್ಷ ಜನವರಿ 26ರಂದು ರಿಲೀಸ್ ಆಗುತ್ತಿದ್ದು ಡಿ ಬಾಸ್ ದರ್ಶನ್ (D boss Darshan fans)ಅಭಿಮಾನಿಗಳು ಸಿನಿಮಾವನ್ನು ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.