ಹೊಸಪೇಟೆಯಲ್ಲಿ ನಡೆದ ಘಟನೆಯಿಂದ ದರ್ಶನ್ ಅಭಿಮಾನಿಗಳು(D Boss Darshan fans) ಬೇಜಾರಾಗಿದ್ದಾರೆ. ಈ ಘಟನೆಯಿಂದ ಬೇಸಿತ್ತು ದರ್ಶನ್(Darshan) ರವರಿಗೆ ಬೆಂಬಲವನ್ನು ಸೂಚಿಸಿ ಹಲವಾರು ಸಂಘಟನೆಗಳನ್ನು ನಡೆಸಿ ಹೋರಾಟವನ್ನು ಕೂಡ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್(kiccha Sudeep) ಕೂಡ ದರ್ಶನ್ ರವರಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆದಿರುವ ವಿಚಾರದ ಕುರಿತು ದೀರ್ಘ ಪತ್ರವನ್ನು ಬರೆದು ಬೆಂಬಲವನ್ನು ಸೂಚಿಸಿದ್ದರು ಇದಕ್ಕೆ ದರ್ಶನ್ ಕೂಡ ಧನ್ಯವಾದಗಳು ಎಂದು ರಿಪ್ಲೈ ಮಾಡಿದ್ದರು ಇದರಿಂದ ಅಭಿಮಾನಿಗಳು ಕೂಡ ಖುಷಿಪಟ್ಟು ದಚ್ಚು ಕಿಚ್ಚ ಇಬ್ಬರೂ ಒಂದಾಗಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ.
ಕ್ರಾಂತಿ ಸಿನಿಮಾದ ಸಂದರ್ಶನ ಒಂದರಲ್ಲಿ ಡಿ ಬಾಸ್(D Boss Darshan) ದರ್ಶನ್ ಕಿಚ್ಚ ಸುದೀಪ್ ಹೆಸರನ್ನು ಹೇಳಿದ್ದ ಕಾರಣ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು ಇದಾದ ನಂತರ ಕಿಚ್ಚ ಸುದೀಪ್ ಹಾಗೂ ಡಿ ಬಾಸ್ ದರ್ಶನ್ ರವರ ಆಡಿಯೋ ಕಾಲ್ ರೆಕಾರ್ಡಿಂಗ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಆಡಿಯೋ ಸಿಕ್ಕಾಪಟ್ಟೆ ಸದ್ದು ಮಾಡಿತ್ತು ಹೊಸಪೇಟೆಯ ಘಟನೆಗೆ ಕಿಚ್ಚ ಸುದೀಪ್ ಬೆಂಬಲವನ್ನು ಸೂಚಿಸಿದ್ದಾರೆ ಇದಕ್ಕೆ ದರ್ಶನ್ ಕೂಡ ಪ್ರತಿಕ್ರಿಯಿಸಿದ್ದಾರೆ ಅಷ್ಟೇ ಅಲ್ಲದೆ ಅಭಿಮಾನಿಗಳು ಕೂಡ ಇದರಿಂದ ಸಂತೋಷ ಪಟ್ಟಿದ್ದು ಕಿಚ್ಚ ಸುದೀಪ್ ಹಾಗೂ ಡಿ ಬಾಸ್ ದರ್ಶನ್ ರವರು ಒಟ್ಟಿಗೆ ಸಿನಿಮಾ ಮಾಡಲಿ ಎಂದು ಆಸೆ ಪಡುತ್ತಿದ್ದಾರೆ.
ನಟ ದರ್ಶನ್ ಹಾಗೂ ಸುದೀಪ್ ರವರು ಒಂದು ಕಾಲದಲ್ಲಿ ಕುಚುಕು ಗೆಳೆಯರಾಗಿದ್ದರು ದಚ್ಚು ಚಿನ್ನ ಎಂದು ಮಾತನಾಡುವಂತಹ ಗಟ್ಟಿಯಾದ ಸ್ನೇಹವನ್ನು ಹೊಂದಿದ್ದರು ಈ ಇಬ್ಬರನ್ನು ಕಂಡು ಚಂದನವನದಲ್ಲಿ ಅಂದು ಅಂಬರೀಶ್ ಹಾಗೂ ವಿಷ್ಣುವರ್ಧನ್ ರೀತಿ ಈಗ ದರ್ಶನ್ ಹಾಗೂ ಸುದೀಪ್ ರವರು ಒಳ್ಳೆಯ ಸ್ನೇಹಿತರು ಎಂದು ಸಿನೀ ರಸಿಕರು ಹೋಲಿಕೆ ಮಾಡುತ್ತಿದ್ದರು ಮೆಜೆಸ್ಟಿಕ್ ವಿಚಾರವಾಗಿ ಮಾಡಿದ ಚರ್ಚೆಯಿಂದ ಇವರಿಬ್ಬರ ಸ್ನೇಹ ಮುರಿದುಬಿತ್ತು.
ಈ ಕುರಿತು ಪೋಸ್ಟ್ ಹಾಕಿದ ಡಿ ಬಾಸ್ ದರ್ಶನ್ ನಾನು ಸುದೀಪ್ ಇಬ್ಬರು ಚಂದನವನದ ನಟರಷ್ಟೇ ನನಗೂ ಆತನಿಗೆ ಯಾವುದೇ ರೀತಿಯ ಸ್ನೇಹವಿಲ್ಲ ಎಂದು ಬರೆದುಬಿಟ್ಟರು ತದನಂತರ ಇವರಿಬ್ಬರೂ ದೂರವಾದರೂ ನಂತರ ಎಲ್ಲಿಯೂ ಕೂಡ ದರ್ಶನ್ ಸುದೀಪ್ ಬಗ್ಗೆ ಮಾತನಾಡಿರಲಿಲ್ಲ ಅವರ ಹೆಸರನ್ನು ಕೂಡ ಹೇಳಿಕೊಂಡಿರಲಿಲ್ಲ.ತಮ್ಮ ಕ್ರಾಂತಿ ಸಿನಿಮಾದ ಬಿಡುಗಡೆಯ ವೇಳೆ ಸಂದರ್ಶನಗಳಲ್ಲಿ ಭಾಗವಹಿಸಿದ ಡಿ ಬಾಸ್ ದರ್ಶನ್ ಯೌಟ್ಯೂಬ್ ಚಾನೆಲ್ ಒಂದರಲ್ಲಿ ಮೊದಲ ಬಾರಿಗೆ ಸುದೀಪ್ ರವರ ಬಗ್ಗೆ ಮಾತನಾಡಿದ್ದರು.
ಅಂಬಿ ಮಗ ದಚ್ಚು ವಿಷ್ಣು ಮಗ ಸುದೀಪ್ ಇವರಿಬ್ಬರು ಒಂದಾಗಬೇಕು ಎಂದು ಅಭಿಮಾನಿಗಳು ಹಠ ಮಾಡಿ ಚಳುವಳಿಗಳನ್ನು ನಡೆಸುತ್ತಿದ್ದಾರೆ. ದರ್ಶನ್ ಹಾಗೂ ಕಿಚ್ಚ ಸುದೀಪ್ ಯಾವುದೋ ಕಾರಣಗಳಿಂದ ದೂರವಾಗಿದ್ದರು ಇದೀಗ ಅವರಿಬ್ಬರೂ ಮತ್ತೆ ಒಂದಾಗಬೇಕು ಎಂದು ದರ್ಶನ್ ಹಾಗೂ ಕಿಚ್ಚ ಅಭಿಮಾನಿಗಳು(kiccha Sudeep fans) ಒತ್ತಾಯ ಪಡಿಸುತ್ತಿದ್ದಾರೆ. ದರ್ಶನ್ ರವರು ಕಿಚ್ಚ ಅವರ ಮೇಲಿರುವ ಭಿನ್ನಾಭಿಪ್ರಾಯವನ್ನು ಬಿಟ್ಟು ಇವರಿಬ್ಬರೂ ಒಂದಾಗಿ ಮತ್ತೆ ಸಿನಿಮಾಗಳನ್ನು ಮಾಡಬೇಕು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.