ಇತ್ತೀಚೆಗಷ್ಟೆ ಗಟ್ಟಿಮೇಳ ನಟಿ ಅದಿತಿ ಹಾಗೂ ಪಾರು ಧಾರವಾಹಿಯ ನಟ ಸಿದ್ದು ಮೂಲಿಮನೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ನಂತರ ಪಾರು ಧಾರವಾಹಿಯ ನಟ ಶರತ್ ಪದ್ಮನಾಭ ಕೂಡ ತಾವು ಪ್ರೀತಿಸಿದ ಹುಡುಗಿಯ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಇನ್ನು ಹತ್ತು ಹಲವು ಕಿರುತೆರೆಯ ನಟ ನಟಿಯರು ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ ಸ್ಯಾಂಡಲ್ ಅಭಿಷೇಕ್ ಅಂಬರೀಶ ಹಾಗೂ ಅವಿವ ಬಿದ್ದಪ್ಪ ಕೂಡ ಭಾನುವಾರ ತಮ್ಮ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದೇ ಸಾಲಿಗೆ ಕನ್ನಡತಿ ಧಾರವಾಹಿ ಖ್ಯಾತ ನಟಿ ಹರ್ಷಿತ ರಾಮಚಂದ್ರ ಕೂಡ ಸೇರಿಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೆಚ್ಚು ಪ್ರಖ್ಯಾತಿಯನ್ನು ಹೊಂದಿರುವ ಕನ್ನಡತಿ ಧಾರವಾಹಿಯ ನಟಿ ಹರ್ಷಿತಾ ರಾಮಚಂದ್ರಪ್ಪ ಕೂಡ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಕನ್ನಡತಿ ದಾರವಾಹಿಯಲ್ಲಿ ರಂಜನಿ ರಾಘವನ್ ಹಾಗೂ ಕಿರಣ್ ರಾಜ್ ರವರು ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದು ಕನ್ನಡತಿ ಧಾರವಾಹಿ ಅದ್ಬುತವಾಗಿ ಮೂಡಿ ಬರುತ್ತಿದೆ. ಕನ್ನಡತಿ ಧಾರವಾಹಿಯಲ್ಲಿ ಹರ್ಷಿತಾ ರಾಮಚಂದ್ರ ಕೂಡ ಪೂಜಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹರ್ಷಿತ ರಾಮಚಂದ್ರಪ್ಪನವರ ಪೂಜಾ ಪಾತ್ರವು ಕನ್ನಡತಿ ಧಾರವಾಹಿ ಮೊದಲಿಗೆ ಶುರುವಾದಾಗ ಅಮ್ಮಮ್ಮ ಅಲಿಯಾಸ್ ಚಿತ್ಕಲಾ ಬಿರಾದರ್ ಅವರ ವಿರೋಧವನ್ನು ಮಾಡುವಂತಹ ಪಾತ್ರವಾಗಿತ್ತು ಆದರೆ ಕೊನೆಯಲ್ಲಿ ಸತ್ಯವನ್ನು ಹೊರ ಹಾಕುವ ಪಾಸಿಟಿವ್ ಪಾತ್ರ ವಾಗಿ ಬದಲಾಗಿದೆ ಹರ್ಷಿತ ರಾಮಚಂದ್ರಪ್ಪ ರವರು ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಕನ್ನಡತಿ ಧಾರವಾಹಿಯ ಪೂಜಾ ಪಾತ್ರ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಇಂದು ಹರ್ಷಿತಾ ರಾಮಚಂದ್ರಪ್ಪರವರು ಅಭಿ ದಕ್ಷ ಗೌಡ ಎನ್ನುವವರ ಜೊತೆ ತಮ್ಮ ಎಂಗೇಜ್ಮೆಂಟನ್ನು ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಎಂಗೇಜ್ಮೆಂಟ್ನ ಫೋಟೋಗಳನ್ನು ಹರ್ಷಿತ ರಾಮಚಂದ್ರಪ್ಪ ರವರು ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ತಮ್ಮ instagram ಖಾತೆಯಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿ “ಹಳ್ಳಕ್ಕೆ ಬಿದ್ವಿ” ಎಂದು ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ. ಹರ್ಷಿತ ರಾಮಚಂದ್ರಪ್ಪ ಹವ್ಯಾಸಕ್ಕಾಗಿ ನಟನೆಯನ್ನು ಮಾಡುತ್ತಿದ್ದು ಹರ್ಷಿತಾ ರವರ ಭಾವಿ ಪತಿ ಅಭಿ ದಕ್ಷ ಗೌಡ ರವರು ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹರ್ಷಿತಾ ರವರು ವೃತ್ತಿ ಜೀವನದಲ್ಲಿ ಇಂಜಿನಿಯರ್ ಆಗಿದ್ದು ನಿರೂಪಕಿಯಾಗಿ ಕೂಡ ಕೆಲಸ ಮಾಡುತ್ತಿದ್ದಾರೆ.