ನಾನು ಡ್ರೋನ್ ಕಂಡು ಹಿಡಿದಿದ್ದೇನೆ ಎಂದು ಹೇಳಿ ಇಡೀ ಭಾರತಕ್ಕೆ ಕಾಗೆ ಹಾರಿಸಿದ್ದ ಡ್ರೋನ್ ಪ್ರತಾಪ ಇಷ್ಟು ದಿನಗಳವರೆಗೂ ಎಲ್ಲು ಕೂಡ ಕಾಣುತ್ತಿರಲಿಲ್ಲ ಹಾಗಾಗಿ ಜನರಲ್ಲಿ ಡ್ರೋನ್ ಪ್ರತಾಪ ಎಲ್ಲಿದ್ದಾನೆ? ಎಂದು ಹುಡುಕುತ್ತಿದ್ದರು ಮೊನ್ನೆಯಷ್ಟೇ ಡ್ರೋನ್ ಪ್ರತಾಪ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾನು ಏನೋ ಕಂಡುಹಿಡಿಯುವ ರೀತಿಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದನು ಇಂದು ಲೈವ್ ಬಂದು ತನ್ನ ಡ್ರೋನ್ ಬಗ್ಗೆ ಮಾತನಾಡಿದ್ದಾನೆ. ಇನ್ಸ್ಟ ಗ್ರಾಮಿನಲ್ಲಿ ನಾನು ಅಗ್ರಿಕಲ್ಚರ್ ಡ್ರೋನ್ ಜೊತೆ ಒಂದು ಫೋಟೋ ತೆಗೆದು ಪೋಸ್ಟ್ ಮಾಡಿದ್ದೆ ಈ ಪೋಸ್ಟ್ ಮಾಡಿದ ನಂತರ ಆ ಪೋಸ್ಟ್ ಗೆ ಕಮೆಂಟ್ಗಳು ಕೂಡ ಬಂದಿದ್ದವು ಈ ಡ್ರೋನ್ ಈತನದಲ್ಲ ಗ್ಲುಕೋ ರೋಬೋಟಿಕ್ ಕಂಪನಿಗೆ ಸೇರಿದ್ದು ಅದನ್ನು ಡ್ರೋನ್ ಪ್ರತಾಪ ಖರೀದಿಸಿ ಸೇಲ್ಸ್ ಮೆನ್ ರೀತಿ ಸೇಲ್ ಮಾಡುತ್ತಿದ್ದಾನೆ ಎಂದು ಹಲವಾರು ಜನರು ಕಮೆಂಟ್ ಹಾಕಿದ್ದರು.

 

 

ನಾನು ಯಾವುದಾದರೂ ಡ್ರೋನ್ ಅನ್ನು ಯಾವುದಾದರು ಕಂಪನಿಯಿಂದ ಖರೀದಿಸಿದ್ದಲ್ಲಿ ನನ್ನ instagram ಅಕೌಂಟ್ ಹಾಗು ನಾನು ಡ್ರೋನ್ ಅನ್ನು ಮಾಡುವುದನ್ನು ಕೂಡ ನಿಲ್ಲಿಸಿ ಬಿಡುತ್ತೇನೆ ನಾನು ಕೂಡ ಇದನ್ನೆಲ್ಲಾ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಷ್ಟು ಬಾರಿ ಸಹಿಸಿಕೊಳ್ಳಲು ಸಾಧ್ಯ ಇದೀಗಾಗಲೇ ನನ್ನ ಮೇಲೆ ಹಲವಾರು ಅಟ್ಯಾಕ್ ಗಳು ನಡೆದಿವೆ. ನಾನು ಯಾವುದಾದರು ಕಂಪನಿಯಲ್ಲಿ ಡ್ರೋನ್ ಖರೀದಿಸಿದ್ದೇನೆ ಎಂಬುದು ನೀವು ಹೇಳುತ್ತಿದ್ದೀರಿ ಆಗಾದರೆ ಆ ಕಂಪನಿಯಿಂದ ವಿಡಿಯೋ ಮಾಡಿ ಆಗ ನಾನು ನಂಬುತ್ತೇನೆ ಎಂದು ಡ್ರೋನ್ ಪ್ರತಾಪ ಕಣ್ಣೀರು ಹಾಕುತ್ತ ಮಾತನಾಡಿದ್ದಾರೆ.

 

 

ಯಾವುದಾದರೂ ಡ್ರೋನ್ ತಯಾರಿ ಮಾಡಲು ಕಂಪನಿಯಿಂದ ಪಾರ್ಟ್ಸ್ ಗಳನ್ನು ಪರ್ಚೇಸ್ ಮಾಡಲೇಬೇಕಾಗುತ್ತದೆ. ನನ್ನ ಮೇಲೆ ಇಷ್ಟೆಲ್ಲಾ ಅಟ್ಯಾಕ್ ಮಾಡುತ್ತೀರಿ ಹಾಗೆ ನನ್ನನ್ನು ಟ್ರೋಲ್ ಕೂಡ ಮಾಡುತ್ತಿದ್ದೀರಿ ನಾನು ಸಾಕಷ್ಟು ದುಡ್ಡು ಮಾಡಿ ಇಟ್ಟುಕೊಂಡಿದ್ದೇನೆ ಎಂದು ಕೂಡ ಎಲ್ಲರೂ ಆರೋಪಿಸುತ್ತಿದ್ದಾರೆ. ನಾನು ಮೋಸ ಮಾಡಿ ದುಡ್ಡು ಸಂಪಾದನೆ ಮಾಡಿದ್ದಲ್ಲಿ ಹೋಗಿ ಪೊಲೀಸ್ ಕಂಪ್ಲೇಂಟ್ ಕೊಡಿ ಎಂದು ಡ್ರೋನ್ ಪ್ರತಾಪ ಲೈವ್ ನಲ್ಲಿ ಓಪನ್ ಚಾಲೆಂಜ್ ಎಸೆದಿದ್ದಾರೆ.

 

 

ನಾನು ತಪ್ಪು ಮಾಡಿದ್ದಲ್ಲಿ ನನ್ನ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ನನ್ನನ್ನು ಜೈಲಿಗೆ ಹಾಕಿಸಬೇಕು ಅದರ ಬದಲು ನೀವೆಲ್ಲೋ ಕುಳಿತುಕೊಂಡು ಕೆಟ್ಟ ಕೆಟ್ಟದಾಗಿ ಕಮೆಂಟ್ ಮಾಡುವುದನ್ನು ಬಿಟ್ಟುಬಿಡಿ ಕುಳಿತಲ್ಲಿಂದಲೇ ನನ್ನ ಮಾನಹರಣವನ್ನು ಯಾಕೆ ಮಾಡುತ್ತಿದ್ದೀರಿ ಮೊದಲು ನೀವು ಹೋಗಿ ಪೊಲೀಸ್ ಕಂಪ್ಲೇಂಟ್ ಕೊಡಿ ಯಾರನ್ನಾದರೂ ಹಣಕ್ಕಾಗಿ ನಾನು ಮೋಸ ಮಾಡಿದ್ದಲ್ಲಿ ಕಂಪ್ಲೇಂಟ್ ಕೊಡಿ ನಾನು ನನ್ನ ಜೀವನದಲ್ಲಿ ಯಾರಿಗೂ ಕೂಡ ಒಂದು ರೂಪಾಯಿ ಮೋಸ ಮಾಡಿ ತೆಗೆದುಕೊಂಡಿಲ್ಲ ಎಂದು ಡ್ರೋನ್ ಪ್ರತಾಪ ಗರಂ ಆಗಿ ಮಾತನಾಡಿದರು.

 

 

ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗ ಒಂದು ಕಂಪನಿಯನ್ನು ನಡೆಸಿ ನಾಲ್ಕು ಜನಕ್ಕೆ ಕೆಲಸ ಕೊಟ್ಟಿದ್ದಾರೆ ಎಂದರೆ ನೀವೆಲ್ಲರೂ ಅದಕ್ಕೆ ಖುಷಿ ಪಡಬೇಕು ಬದಲಾಗಿ ಹೀಗೆ ಮಾಡಿದ್ದಕ್ಕೆ ನನ್ನನ್ನು ಟ್ರೋಲ್ ಮಾಡುತ್ತಿದ್ದೀರಿ ನಿಮ್ಮ ಕೈನಲ್ಲಿ ಆದರೆ ಇಂತಹ ಸಾಧನೆಗಳನ್ನು ಮಾಡಿ ಆಗಲಿಲ್ಲವೆಂದರೆ ನನ್ನನ್ನಾದರೂ ಮಾಡಲು ಬಿಡಿ ನೀವು ಮತ್ತೊಮ್ಮೆ ಈ ರೀತಿ ಕೆಟ್ಟ ಕೆಟ್ಟದಾಗಿ ಕಾಮೆಂಟ್ಗಳನ್ನು ಮಾಡಿದ್ದಲ್ಲಿ ನಾನು ನಿಮ್ಮ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡಬೇಕಾಗುತ್ತೆ ಇನ್ನೊಮ್ಮೆ ಯಾರಾದರೂ ನನ್ನ ಜೀವನವನ್ನು ಹಾಳು ಮಾಡಲು ಬಂದರೆ ನಾನೇನು ಮಾಡುತ್ತೇನೆ ಎಂಬುದನ್ನು ಯಾರಿಗೂ ಕೂಡ ಹೇಳಲು ಸಾಧ್ಯವಿಲ್ಲ ನಿಮ್ಮ ಎಲ್ಲಾ ಕನ್ನಡಿಗರಿಗೂ ಧನ್ಯವಾದಗಳು ಎಂದು ಕೈ ಎತ್ತಿ ಮುಗಿದು ಡ್ರೋನ್ ಪ್ರತಾಪ್ ತಮ್ಮ ಲೈವ್ ವಿಡಿಯೋವನ್ನು ಆಫ್ ಮಾಡಿಕೊಂಡಿದ್ದಾರೆ.

Leave a comment

Your email address will not be published. Required fields are marked *