ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಳ್ಳುವಂತಹ ದೊಡ್ಡ ಕೆಲಸವೇನು ಮಾಡಿಲ್ಲ: ರಾಜ್ಯೋತ್ಸವ ಪ್ರಶಸ್ತಿ ಬ್ಯಾಡ ಅಂದ್ರು Dr ಬ್ರೋ

ಡಾಕ್ಟರ್ ಬ್ರೋ ಎನ್ನುವ ಹೆಸರು ಇದೀಗ youtube ನಲ್ಲಿ ಟ್ರೆಂಡಿಂಗ್ ಹಾಗೂ ರೋಮಾಂಚನವನ್ನುಂಟು ಮಾಡುವ ಯೂಟ್ಯೂಬ್ ಚಾನೆಲ್(Youtube) ಹೆಸರಾಗಿ ಬದಲಾಗಿದೆ. ಈ ಚಾನಲ್ಗಾಗಿ ಲಕ್ಷಾಂತರ ಅನುಯಾಯಿಗಳಿದ್ದಾರೆ. ಈ ಹುಡುಗನಲ್ಲಿರುವ ಉತ್ಸಾಹ ಬೇರೆ ಬೇರೆ ಪ್ರದೇಶಗಳಲ್ಲಿ ಈತ ನಡೆಸುವ ಅಪರೇಷನ್ ಕನ್ನಡಿಗರನ್ನು ರೋಮಾಂಚನಗೊಳಿಸಿದೆ. ಇಷ್ಟು ಸ್ವಾತಂತ್ರ್ಯವಾಗಿರಲು ಸಾಧ್ಯವೇ, ಜೀವನದ ಹಲವು ಬಂಧನಗಳನ್ನು ಒಗೆದು ಈತ ಹೊರ ಬಂದಿದ್ದಾರೆ. ಇಷ್ಟು ಸ್ವಚ್ಚಂದವಾಗಿ ಗಗನದಲ್ಲಿ ಹಾರಾಡುತ್ತಿರುವುದಕ್ಕೆ ಸಾಧ್ಯವೇ ಎನ್ನುವ ಹೊಟ್ಟೆ ಕಿಚ್ಚನ್ನು ಹುಟ್ಟು ಹಾಕಿರುವ ಕೀರ್ತಿ ಗಗನ್ ರವರದ್ದು

 

 

ಪ್ರಪಂಚದಾದ್ಯಂತ ಸುತ್ತುತ್ತಾ ಹಲವಾರು ದೇಶಗಳನ್ನು ಕನ್ನಡಿಗರಿಗೆ ತೋರಿಸುತ್ತಾ ಕರ್ನಾಟಕದಲ್ಲಿ ಖ್ಯಾತಿಯನ್ನು ಪಡೆದಿರುವ ಡಾಕ್ಟರ್ ಬ್ರೋ ರವರ ನಿಜವಾದ ಹೆಸರು ಗಗನ್ ಬೆಂಗಳೂರಿನ ಗ್ರಾಮಾಂತರ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು ತಂದೆ ಶ್ರೀನಿವಾಸ ಹಾಗೂ ತಾಯಿ ಪದ್ಮ ದಂಪತಿಗಳ ಮಗನೇ ಈ ಗಗನ್. ಗಗನ್ ಕುಟುಂಬ ಒಂದು ಮಿಡಲ್ ಕ್ಲಾಸ್ ಕುಟುಂಬವಾಗಿದ್ದು ಈತನಿಗೆ ಒಬ್ಬ ಸಹೋದರ ಕೂಡ ಇದ್ದು ಆತ ಶಾಲಾ ವ್ಯಾಸಂಗದಲ್ಲಿ ನಿರತನಾಗಿದ್ದಾನೆ. ಗಗನ್ ತಂದೆ ದೇವಸ್ಥಾನದ ಅರ್ಚಕರಾಗಿದ್ದರು. ಗಗನ್ ಕೂಡ ತಮ್ಮ ಎರಡನೇ ತರಗತಿಯಿಂದನೇ ಪೌರೋಹಿತ್ಯದಲ್ಲಿ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದರು.

ತಂದೆ ಇಲ್ಲದಂತಹ ಸಮಯದಲ್ಲಿ ಇವರೇ ಪೂಜೆಗಳನ್ನು ಮಾಡಿಕೊಡಬೇಕಾಗಿತ್ತು. ಇವರಿಗೆ ಚಿಕ್ಕ ವಯಸ್ಸಿನಿಂದಲೇ ಧಾರ್ಮಿಕತೆಯ ಬಗ್ಗೆ ಹೆಚ್ಚು ಒಲವು ಮೂಡಿತ್ತು. ಗಗನ್ ಶಾಲಾ ವಿದ್ಯಾರ್ಥಿಯಾಗಿ ಹೆಚ್ಚಿಗೆ ಪ್ರತಿಭಾವಂತನೇನು ಆಗಿರಲಿಲ್ಲ. ಗಗನ್ ಗೆ ಓದಿನಲ್ಲಿ ಹೆಚ್ಚು ಆಸಕ್ತಿ ಇಲ್ಲದ ಕಾರಣ ಇವನು ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಊರಿನಲ್ಲಿ ಆಸಕ್ತಿ ಇಲ್ಲದಿದ್ದರೂ ಕೂಡ ಇತರೆ ಚಟುವಟಿಕೆಗಳಲ್ಲಿ ಗಗನ್ ಮೊದಲು ಇರುತ್ತಿದ್ದ ಹಾಡು ನೃತ್ಯ ಸ್ಟೇಜ್ ಭಾಷಣ ಮುಂತಾದ ಅಭಿರುಚಿಗಳನ್ನು ಹೊಂದಿದ್ದ ಸಾಂಸ್ಕೃತಿಕ ಹಾಗೂ ಕಲಾ ಚಟುವಟಿಕೆಗಳಲ್ಲಿ ಗಗನ್ ಯಾವಾಗಲೂ ಸಕ್ರಿಯವಾಗಿ ಇರುತ್ತಿದ್ದರು. ಇವನ ತಲೆಯಲ್ಲಿ ಪುಸ್ತಕದ ಜ್ಞಾನಕ್ಕಿಂತ ಪ್ರಪಂಚದ ಜ್ಞಾನವೇ ತುಂಬಿರುತ್ತಿತ್ತು. ಕಾರ್ಯಕ್ರಮಕ್ಕೆ ನಿರೂಪಣೆ ಮಾಡುವುದು ಹೋಸ್ಟ್ ಮಾಡುವುದು ಎಲ್ಲದರಲ್ಲೂ ಗಗನ್ ಮುಂದೆ ಇದ್ದರು.

 

10ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದ ಗಗನ್ ಗೆ ಪಿಯುಸಿ ನಲ್ಲಿ ಸೈನ್ಸ್ ಅನ್ನುವ ಆರಿಸಿಕೊಳ್ಳಲು ಅವರ ಸ್ನೇಹಿತರು ಹಾಗೂ ಶಿಕ್ಷಕರು ಹೇಳುತ್ತಾರೆ. ಯಾರ್ಯಾರೋ ವಿಜ್ಞಾನ ವಿಷಯ ತೆಗೆದುಕೊ ಎಂದು ಹೇಳಿದ್ದಕ್ಕೆ ಆ ವಿಷಯವನ್ನು ಆರಿಸಿ ಆ ವಿಷಯದಲ್ಲಿ ಗಗನ್ ಫೇಲ್ ಆಗಿದ್ದರು. ಫೇಲಾದ ಕಾರಣ ಇವರು ತಮ್ಮ ಚಿಕ್ಕ ವಯಸ್ಸಿಗೆ ಕೆಲಸಕ್ಕೂ ಕೂಡ ಹೋದರು ಹೆಚ್ಚು ಓದಿಲ್ಲದ ಕಾರಣ ಇವರಿಗೆ ಇಂಗ್ಲಿಷ್ ಭಾಷೆ ಕೂಡ ಚೆನ್ನಾಗಿ ಬರುತ್ತಿರಲಿಲ್ಲ ಆತನಿಗೆ ಪೌರೋಹಿತ್ಯ ಬಿಟ್ಟ ಮೇಲೆ ಬೇರೆ ಬದುಕಿನ ಯಾವ ಆಸರೆಯೂ ಇರಲಿಲ್ಲ. ಇದಾದ ನಂತರ ಡ್ರೈವಿಂಗ್ ಕಲಿತ ಗಗನ್ ತಮ್ಮ 16ನೇ ವಯಸ್ಸಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಕಾರನ್ನು ಕೂಡ ಓಡಿಸಿ ತಮ್ಮ ಜೀವನವನ್ನು ನಡೆಸುತ್ತಿದ್ದರು.

ಈ ವೇಳೆ ಈತನಿಗೆ ಹೆಚ್ಚು ಜನರ ಪರಿಚಯವಾಗುತ್ತಿದ್ದಂತೆ ಜೀವನದಲ್ಲಿ ಹಲವಾರು ಕಹಿ ಅನುಭವಗಳು ಕೂಡ ಬಂದವು ಇವರ ಸಹಪಾಠಿಗಳೆಲ್ಲರೂ ಓದಿನಲ್ಲಿ ಮುಂದುವರೆಯುತ್ತಿದ್ದರು ಆದರೆ ನಾನು ಮಾತ್ರ ಏನು ಮಾಡುತ್ತಿಲ್ಲ ಎನ್ನುವತಾಶ ಭಾವನೆ ಗಗನ್ ಒಳಗೆ ಕಾಡಿತ್ತು. ಗಗನ್ ರವರು ತಮ್ಮದೇ ಆದ ಪ್ರಾಡಕ್ಟ್ಸ್ ಅಂಗಡಿಯನ್ನು ಕೂಡ ಇಟ್ಟಿದ್ದರು. ಈ ನಡುವೆ ಗಗನ್ ಭರತ ನಾಟ್ಯವನ್ನು ಕೂಡ ಕಲಿತು ಇತರ ಮಕ್ಕಳಿಗೆ ಅದರ ಬಗ್ಗೆ ಟ್ಯೂಷನ್ ಕೂಡ ಹೇಳಿಕೊಡುತ್ತಿದ್ದರು. ತಮ್ಮ ಸಣ್ಣ ವಯಸ್ಸಿನಲ್ಲೇ ತಾವು ನೆಲೆ ನಿಲ್ಲಲು ಏನೆಲ್ಲ ಮಾಡಬೇಕು ಹಣವನ್ನು ಸಂಪಾದಿಸಲು ಯಾವುದೆಲ್ಲ ಕೆಲಸ ಮಾಡಬೇಕು ಅದೆಲ್ಲವನ್ನು ಗಗನ್ ಮಾಡಿದರು ಆದರೆ ಇದು ಯಾವುದರಿಂದ ಕೂಡ ಗಗನ್ ಸಕ್ಸಸ್ ಆಗಲಿಲ್ಲ.

 

 

ಗಗನ್ ಅವರು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ದುಬೈ ಹಾಗೂ ಸೌದಿ ಕಡೆಯ ಪೋಷಕರ ಮಕ್ಕಳು ಕೂಡ ಅವರ ಶಾಲೆಯಲ್ಲಿ ಓದುತ್ತಿದ್ದು ಆ ಮಕ್ಕಳು ದುಬೈನಲ್ಲಿ ಎಷ್ಟು ಸ್ವಚ್ಛವಾಗಿರುತ್ತದೆ ಎಂಬುದನ್ನು ಗಗನ್ ಗೆ ಹೇಳುತ್ತಿದ್ದರು. ಆಗಲೇ ಗಗನ್ ಗೆ ಆ ದೇಶಗಳ ಮೇಲೆ ಆಸಕ್ತಿ ಹೆಚ್ಚಾಗಿತ್ತು ಗಗನ್ ಇತ್ತೀಚೆಗಷ್ಟೇ youtube ಗೆ ಬಂದವನಲ್ಲ 2016 ರಿಂದನು ತನ್ನ youtube ಚಾನೆಲ್ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ ಮೊದಲಿಗೆ ತಮ್ಮ youtube ಚಾನೆಲ್ನಲ್ಲಿ ಒಂದು ಮೂರು ನಾಲ್ಕು ಹಾಸ್ಯ ವಿಡಿಯೋಗಳನ್ನು ಶೇರ್ ಮಾಡಿದ್ದರು ಆಗಿನ ಕಾಲದಲ್ಲಿ ಗಗನ್ ಈ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಸೈಬರ್ ಸೆಂಟರ್ಗೆ ಹೋಗಿ ಒಂದು ವಿಡಿಯೋಗೆ 10 ರೂಪಾಯಿಯಂತೆ ನಾಲ್ಕು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದರು.

2018ರಲ್ಲಿ ಡಾ. ಬ್ರೋ youtube ಚಾನೆಲ್ ಅನ್ನು ಶುರು ಮಾಡಿ ಅದರಲ್ಲಿ ಕನ್ನಡದ ನಟ ನಟಿಯರ ಇಂಟರ್ವ್ಯೂವನ್ನು ಮಾಡಲು ಶುರು ಮಾಡಿದರು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಗಗನ್ ರಾಜ್ಯ ಹೊರ ರಾಜ್ಯ ಅಂತರ ರಾಜ್ಯಗಳ ನಡುವಿನ ಓಡಾಟದ ಬಗ್ಗೆ ವಿಡಿಯೋ ಮಾಡಿ ಹಾಕಿ ಅದರಿಂದ ಫೇಮಸ್ ಆಗಿದ್ದರು ಈ ಚಿಕ್ಕ ಪ್ರವಾಸಗಳಿಂದ ಗಗನ್ ರವರಿಗೆ ನಾನು ದೊಡ್ಡ ಪ್ರವಾಸವನ್ನು ಕೈಗೊಂಡು ಅದನ್ನು ಇಡೀ ಕರ್ನಾಟಕಕ್ಕೆ ತೋರಿಸಬೇಕು ಎಂಬುವ ಹಂಬಲ ಹೆಚ್ಚಾಯಿತು

 

 

ಇವರಿಗೆ ಕೇವಲ ಅರೆಮರೆ ಹಿಂಡಿ ಬರುತ್ತಿದ್ದು ರಾಜಸ್ಥಾನ ಹಾಗೂ ಹಲವು ದೂರದ ರಾಜ್ಯಗಳನ್ನು ಕೂಡ ಸುತ್ತಿದ್ದರು. ತದನಂತರ ಕರ್ನಾಟಕ ಜನತೆಗೆ ನಾನು ಎಲ್ಲಾ ದೇಶಗಳನ್ನು ತೋರಿಸುತ್ತೇನೆ ಎಂದು ಮೊದಲು ಪಾಕಿಸ್ತಾನ ಹಾಗೂ ರಷ್ಯಾ ದೇಶಗಳನ್ನು ಕನ್ನಡಿಗರಿಗೆ ತೋರಿಸಿದರು ಇದಾದ ನಂತರ ಹಲವಾರು ದೇಶಗಳನ್ನು ಸುತ್ತಿ ಕನ್ನಡಿಗರಿಗೆ ಅದನ್ನು ವಿಡಿಯೋ ಮಾಡಿ ತೋರಿಸುತ್ತಿದ್ದಾರೆ. ತನ್ನ 22ನೇ ವಯಸ್ಸಿಗೆ ಗಗನ್ ಇಷ್ಟು ದೊಡ್ಡ ಮಟ್ಟಿಗೆ ಬೆಳೆದಿದ್ದು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಲಕ್ಷಾಂತರ ಜನ ಸಬ್ಸ್ಕ್ರೈಬರ್ಸ್ ಅನ್ನು ಹೊಂದಿದ್ದು ತದನಂತರ ಬಿಕಾಂ ಪದವಿಯನ್ನು ಕೂಡ ಪಡೆದಿದ್ದಾರೆ. ಯಾರ ಮುಂದೆ ಕೈ ಚಾಚದೆ ಡಾಕ್ಟರ್ ಗುರು ತಮ್ಮ ಸ್ವಂತ ದುಡಿಮೆಯಿಂದ ವಿದೇಶಗಳನ್ನೆಲ್ಲ ಸುತ್ತುತ್ತಿದ್ದಾರೆ.

 

ಇಲ್ಲಿಯವರೆಗೂ ಮನೆಯವರಿಂದ ಒಂದು ಬಿಡಿಗಾಸನ್ನು ಕೂಡ ಕೇಳಿ ಪಡೆದಿಲ್ಲ ತಮ್ಮ ಸ್ವಂತ ದುಡ್ಡಿನಲ್ಲೇ ಇಲ್ಲಿಯವರೆಗೂ ಜೀವಿಸುತ್ತಿದ್ದಾರೆ. ಹಾಗೆ ಮೊನ್ನೆ ಅಷ್ಟೇ ನಡೆದ ಕರ್ನಾಟಕ ರಾಜ್ಯೋತ್ಸವದಂದು ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು ಎಂದು ಎಲ್ಲರೂ ತೀರ್ಮಾನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಾಕ್ಟರ ಬ್ರೋ ನಾನು ಯಾವ ಸಾಧನೆಯನ್ನು ಮಾಡಿದ್ದೇನೆ ಎಂದು ನನಗೆ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ನೀಡುತ್ತೀರಿ ನಾನು ಇನ್ನು ಯಾವುದೇ ಸಾಧನೆ ಮಾಡಿಲ್ಲ ನಾನು ಸಾಧನೆ ಮಾಡಿದ ನಂತರ ನನಗೆ ಪ್ರಶಸ್ತಿಯನ್ನು ನೀಡಿ ಖಂಡಿತ ಸ್ವೀಕರಿಸುತ್ತೇನೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ್ದಾರೆ.

2 Comments

  1. ಗುಬಾಲ್ಡಗಳಾ ಯಾಕರೊ ನಿಮ್ಮ ಅಲ್ಪ ಬುದ್ದಿನಾ ಪ್ರದರ್ಶನ ಮಾಡಿ ಮಾಧ್ಯಮ ಎನ್ನುವ ಗೌರವಾನ್ವಿತ ಪದವಿಯ ಮರ್ಯಾದೆ ಕಳಿತಿರಾ? ಗಗನ್ ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡತಿನಿ ಅಂದ್ರಂತೆ ಆದರೆ ಆತ ಬೇಡ ಅಂದ್ನಂತೆ. ಇಲ್ಲಿ ಗಗನ್ ಬಯಸಿದ್ದು ರಾಜ್ಯೋತ್ಸವ ಪ್ರಶಸ್ತಿ ಸಿಗತಿರಲಿಲ್ಲ ಕಾರಣ ಆ ಪ್ರಶಸ್ತಿಗೆ ವಯೋಮಿತಿಯೆ ಕನಿಷ್ಠ 60. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅಂತ ತಾವು ವಾದ ಮಾಡಬಹುದು ಹಾಗೆ ವಾದ ಮಾಡಲು ಆ ರೀತಿ ತಾವೆಲ್ಲೂ ಉಲ್ಲೇಖ ಮಾಡಿಲ್ಲ.ಬೇಕಾದರೆ ಈ ಸಲ ರಾಜ್ಯೋತ್ಸವ ಪ್ರಶಸ್ತಿ ಪಡೆಯಬಹುದು ಅದ ನ್ಯಾಯಾಲಯ ಒಪ್ಪಿದರೆ ಮಾತ್ರ ಕಾರಣ ಮುಖ್ಯ ಮಂತ್ರಿ ಬೊಮ್ಮಾಯಿ ಅವರು ವಯೋಮಿತಿ ಸಡಿಲ ಮಾಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಗಗನ್ ಗೆ ಪ್ರಶಸ್ತಿ ಸಿಕ್ಕರೆ ಅದರಲ್ಲಿ ಖುಷಿ ಪಡುವ ಮೊದಲಿಗ ನಾನು. ಪತ್ರಿಕಾ ಧರ್ಮ ಪಾಲಿಸಿ. ಒಳ್ಳೆಯದಾಗಲಿ.

Leave a Reply

Your email address will not be published.


*