ಡಾಕ್ಟರ್ ರಾಜಕುಮಾರ್ ಕುಟುಂಬ ಎಂದರೆ ಕರ್ನಾಟಕದಲ್ಲಿ ಸಾಕಷ್ಟು ಗೌರವವಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಡಾಕ್ಟರ್ ರಾಜಕುಮಾರ್ ರವರ ಖ್ಯಾತಿ ಹಬ್ಬಿದೆ. ಇಂದಿಗೂ ಕೂಡ ಅವರ ಮಕ್ಕಳು ಅವರ ವ್ಯಕ್ತಿತ್ವ ಹಾಗೂ ಉತ್ತಮ ಗುಣಗಳನ್ನು ತಮ್ಮಲ್ಲಿ ರೂಡಿಸಿಕೊಂಡು ಹೋಗುತ್ತಿದ್ದಾರೆ. ಡಾಕ್ಟರ್ ರಾಜಕುಮಾರ್ ರವರ ಮಕ್ಕಳು ಕ್ರಿಸ್ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದು ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಡಿಸೆಂಬರ್ 25 ಶುರುವಾಯಿತು ಎಂದರೆ ಸಾಕು ಕ್ರಿಸ್ಮಸ್ ಆಚರಣೆಯು ಎಲ್ಲೆಡೆ ಮನೆ ಮಾಡಿರುತ್ತದೆ. ಎಲ್ಲಾ ಹಬ್ಬಗಳಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎನ್ನದೆ ಯಾವುದೇ ಮತಾಂದತೆಯ ಕಡೆಗೆ ಹೋಗದೆ ಎಲ್ಲರೂ ಕೂಡ ಒಂದಾಗಿ ಆಚರಿಸುತ್ತಾರೆ. ಕ್ರಿಸ್ಮಸ್ ಹಬ್ಬವನ್ನು ಏಸುಕ್ರಿಸ್ತ ಹುಟ್ಟಿರುವ ಸುದಿನದ ಸಂಭ್ರಮಕ್ಕಾಗಿ ಆಚರಿಸಲಾಗುತ್ತದೆ.
ಕ್ರಿಸ್ಮಸ್ ಹಬ್ಬವು ಏಸುಕ್ರಿಸ್ತ ಹುಟ್ಟಿದ ಒಂದು ಪವಿತ್ರ ದಿನವಾಗಿದ್ದು ಎಲ್ಲರೂ ಕೂಡ ಕ್ರಿಸ್ಮಸ್ ಟ್ರೀ ಅನ್ನು ಡೆಕೋರೇಷನ್ ಮಾಡಿ ಸಾಂತ ಕ್ಲಾಸ್ ರೀತಿ ಬಟ್ಟೆ ತೊಟ್ಟು ಚಿಕ್ಕ ಮಕ್ಕಳಿಗೆ ಉಡುಗೊರೆಯನ್ನು ನೀಡುತ್ತಾ ಅದ್ದೂರಿಯಾಗಿ ಆಚರಿಸುತ್ತಾರೆ. ಡಾಕ್ಟರ್ ರಾಜಕುಮಾರ್ ಮೊಮ್ಮಕ್ಕಳು ಕೂಡ ಕ್ರಿಸ್ಮಸ್ ಟ್ರೀ ಅನ್ನು ಡೆಕೋರೇಟ್ ಮಾಡಿ ತುಂಬಾ ಅದ್ದೂರಿಯಾಗಿ ಹಬ್ಬವನ್ನು ಆಚರಣೆ ಮಾಡಿದ್ದಾರೆ ಕ್ರಿಸ್ಮಸ್ ಹಬ್ಬದ ಆಚರಣೆಯ ವಿಡಿಯೋವನ್ನು ಮಾಡಿ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಪುನೀತ್ ರಾಜಕುಮಾರ್ ಬದುಕಿದ್ದಾಗ ಅವರ ತಾಯಿ ಪಾರ್ವತಮ್ಮ ರಾಜಕುಮಾರ್ ರವರ ಜೊತೆ ಸೇರಿ ಕೇಕ್ ಕಟ್ ಮಾಡಿ ಕ್ರಿಸ್ಮಸ್ ಹಬ್ಬವನ್ನು ಆಚರಿಸುವ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ ಆ ವಿಡಿಯೋದಲ್ಲಿ ಪಾರ್ವತಮ್ಮ ರಾಜಕುಮಾರ್ ನನಗೆ ಕೇಕ್ ಬೇಡ ಎಂದು ಹೇಳುತ್ತಾರೆ ಆಗ ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಒಕ್ಕುರಲಿನಿಂದ ಅಮ್ಮ ಅದರಲ್ಲಿ ಮೊಟ್ಟೆ ಹಾಕಿಲ್ಲ ತಿನ್ನಿ ಎಂದು ಹೇಳುತ್ತಾರೆ. ಪಾರ್ವತಮ್ಮ ರಾಜಕುಮಾರ್ ತಮ್ಮ ಇಬ್ಬರೂ ಮಕ್ಕಳಿಗೂ ಪ್ರೀತಿಯಿಂದ ಕೇಕ್ ತಿನ್ನಿಸುತ್ತಾರೆ.
ಈ ವರ್ಷ ಡಾ. ರಾಜಕುಮಾರ್ ಮೊಮ್ಮಕ್ಕಳು ಅಂದರೆ ರಾಘಣ್ಣ ಶಿವಣ್ಣ ಪುನೀತ್ ರವರ ಮಕ್ಕಳು ಹಾಗೂ ಮೊಮ್ಮಕ್ಕಳೆಲ್ಲರೂ ಸೇರಿ ಕ್ರಿಸ್ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಅಪ್ಪು ಮಕ್ಕಳಾದ ವಂದಿತ ಹಾಗೂ ಧೃತಿ, ಯುವರಾಜ್ ಕುಮಾರ್ ,ವಿನಯ್ ರಾಜಕುಮಾರ್ , ನಿವೇದಿತಾ, ನಿರೂಪಮ, ಧನ್ಯ ರಾಮ್ ಕುಮಾರ್ ಮುಂತಾದವರೆಲ್ಲರೂ ಸೇರಿ ಕ್ರಿಸ್ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಫೋಟೋಗಳನ್ನು ಕ್ಲಿಕ್ಕಿಸಿ ಕೊಂಡು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.