ನಟ ಡಾಲಿ ಧನಂಜಯ್(Dali dananjay) ರವರ ನಿರ್ಮಾಣದಲ್ಲಿ ಡಾಲಿ ಪಿಚ್ಚರ್ಸ್(Dali pictures) ಅಡಿಯಲ್ಲಿ ಮೂಡಿ ಬರುತ್ತಿರುವ ಟಗರು ಪಲ್ಯ(tagaru palya) ಚಿತ್ರಕ್ಕೆ ನಟ ನೆನಪಿರಲಿ ಪ್ರೇಮ್ ಮಗಳು(nenapirali Prem daughter) ಅಮೃತ(Amruta Prem) ರವರನ್ನು ನಾಯಕ ನಟಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ನಟ ಡಾಲಿ ಯಾವುದೋ ಒಂದು ವಿಡಿಯೋದಲ್ಲಿ “ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ ” ಎನ್ನುವ ಮಾತೊಂದನ್ನು ಹೇಳಿದ್ದರು ಇದನ್ನು ನೋಡಿದ ಕೆಲವು ನೆಟ್ಟಿಗರು ಇದೀಗ ಒಬ್ಬ ಪ್ರಖ್ಯಾತ ನಟನಾದ ನೆನಪಿರಲಿ ಪ್ರೇಮ್ ಮಗಳಿಗೆ ಡಾಲಿ ಧನಂಜಯ್ ಅವಕಾಶ ನೀಡಿರುವುದರ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ ಹಾಗೆಯೇ ನೆಪೋಟಿಸಂ(nepotism) ಆರೋಪವನ್ನು ಕೂಡ ಡಾಲಿ ಧನಂಜಯ್ ಮೇಲೆ ಮಾಡಿದ್ದಾರೆ. ಡಾಲಿ ಧನಂಜಯ್ ಇದಕ್ಕೆಲ್ಲ ಖಡಕ್ಕಾಗಿ ಉತ್ತರವನ್ನು ನೀಡಿದ್ದಾರೆ.

 

 

ಡಾಲಿ ಧನಂಜಯ್ ರವರು ಕನ್ನಡದ ಪ್ರಾಮಿಸಿಂಗ್ ನಟನಾಗಿದ್ದು ಇದೀಗ ಹಲವಾರು ಸಿನಿಮಾಗಳಲ್ಲಿ ಇವ್ರು ಬಿಸಿಯಾಗಿದ್ದಾರೆ. ನಟ ಡಾಲಿ ಧನಂಜಯ್ ಬಡವ ರಾಸ್ಕಲ್(badwa rascal) ಚಿತ್ರದ ಮೂಲಕ ನಿರ್ಮಾಣವನ್ನು ಶುರು ಮಾಡಿದರು ತದನಂತರ ಹೆಡ್ ಬುಶ್(head bush) ಸಿನಿಮಾವನ್ನು ಕೂಡ ತಮ್ಮದೇ ಡಾಲಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಇದೀಗ ನಟ ಡಾಲಿ ಧನಂಜಯ್ ತಮ್ಮ ಮೂರನೇ ಚಿತ್ರವಾಗಿ ನೆನಪಿರಲಿ ಪ್ರೇಮ್ ಮಗಳು ಅಮೃತರವರನ್ನು ಹಾಕಿಕೊಂಡು ಟಗರು ಪಲ್ಯ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ನೆಟ್ಟಿಗರು ಡಾಲಿ ಧನಂಜಯ ಮೇಲೆ ದಾಳಿ ಮಾಡುತ್ತಿದ್ದು ಬಡವರ ಮಕ್ಕಳಿಗೆ ಅವಕಾಶ ನೀಡಬಹುದಿತ್ತು ಆದರೆ ನೀವ್ಯಾಕೆ ಸ್ಟಾರ್ ನಟ ನೆನಪಿರಲಿ ಪ್ರೇಮ್ ಮಗಳಿಗೆ ಅವಕಾಶ ನೀಡಿದಿರಿ ಎಂದು ಪ್ರಶ್ನಿಸುತ್ತಿದ್ದಾರೆ.

 

 

ಡಾಲಿ ಧನಂಜಯ್ ರವರ ಮೇಲೆ ಏಕಾಏಕಿ ನೆಟ್ಟಿಗರು ನೆಪೋಟಿಸಂ ಆರೋಪವನ್ನು ಮಾಡಿದ್ದರ ಕುರಿತು ಡಾಲಿ ಧನಂಜಯ್ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದು ನಟ ಡಾಲಿ ಧನಂಜಯ್ ರವರ ಮೇಲೆ ನಿಪೋಟಿಸಂ ಆರೋಪವನ್ನು ಹೊರಿಸುವ ಮೊದಲು ಎಲ್ಲಾ ಕಡೆಯಿಂದಲೂ ಯೋಚನೆ ಮಾಡಬೇಕು ಏಕೆಂದರೆ, ಟಗರು ಪಲ್ಯ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ನೆನಪಿರಲಿ ಪ್ರೇಮ್ ಮಗಳು ಅಮೃತಾ ರವರಿಗೆ ಮಾತ್ರ ಚಾನ್ಸ್ ನೀಡಿಲ್ಲ ಬದಲಾಗಿ ಬಡವರಸ್ಕಲ್ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದ ನಾಗಭೂಷಣ್ ರವರಿಗೂ ಕೂಡ ನಾಯಕ ನಟನಾಗಿ ನಟಿಸಲು ಅವಕಾಶ ನೀಡಿದ್ದಾರೆ. ಹಾಗೆಯೇ ಉಮೇಶ್ ಕೆ ಕೃಪ ರವರು ಯಾವುದೇ ಸಿನಿಮಾ ಹಿನ್ನೆಲೆಯನ್ನು ಹೊಂದಿಲ್ಲದಿದ್ದರೂ ಕೂಡ ಡಾಲಿ ಧನಂಜಯ್ ಇವರಿಗೂ ಚಾನ್ಸ್ ನೀಡಿದ್ದಾರೆ. ಎಂಬುದನ್ನು ಅವರ ಅಭಿಮಾನಿಗಳು ಸ್ಪಷ್ಟೀಕರಿಸುತ್ತಿದ್ದಾರೆ.

 

 

ನಟ ಡಾಲಿ ಧನಂಜಯ್ ನೆಪೋಟಿಸಂ ಮಾಡುತ್ತಿದ್ದಾರೆ ಎಂದು ಆರೋಪ ಹೊರಿಸಿದ ನೆಟ್ಟಿಗರಿಗೆ ತಮ್ಮದೇ ಸ್ಟೈಲಿನಲ್ಲಿ ಡಾಲಿ ಧನಂಜಯ್ ಉತ್ತರ ಕೊಟ್ಟಿದ್ದಾರೆ. ನೆಟ್ಟಿಗರ ಆರೋಪಗಳನ್ನು ಕೇಳಿದ ಡಾಲಿ ಧನಂಜಯ್ ಖಡಕ್ಕಾಗಿ “ನಿರ್ದೇಶಕ ಒಬ್ಬ ಸೆಟ್ ಬಾಯ್ ಆಗಿದ್ದವನು ಕಣೋ ಕಂದ” ಎಂದು ಉತ್ತರಿಸಿದ್ದಾರೆ. ಡಾಲಿ ಧನಂಜಯ್ ತಮ್ಮದೇ ಸ್ಟೈಲ್ ನಲ್ಲಿ ಟಗರು ಪಲ್ಯ ಚಿತ್ರದ ಬಗ್ಗೆ ಖಡಕ್ಕಾಗಿ ಉತ್ತರ ನೀಡಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇದೀಗ ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿರುವ ಟಗರು ಪಲ್ಯ ಸಿನಿಮಾವನ್ನೂ ನಿರ್ದೇಶನ ಮಾಡುತ್ತಿರುವ ಉಮೇಶ್ ಕೆ ಕೃಪ ಅವರು ಸೆಟ್ ಬಾಯ್ ಆಗಿದ್ದರು ಇದೀಗ ಟಗರು ಪಲ್ಯ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಎದ್ದು ಡಾಲಿ ಧನಂಜಯ್ ತಮ್ಮ ಶೈಲಿಯಲ್ಲಿ ಉತ್ತರಿಸಿದ್ದಾರೆ.

Leave a comment

Your email address will not be published. Required fields are marked *