ಶಾಲೆ ಮಕ್ಕಳಿಗೆ ಸ್ಕಾಲರ್ಶಿಪ್ ಕೊಟ್ಟು ಅಭಿಮಾನಿಗಳಿಗೆ ಊಟ ಬಡಿಸಿದ ಅಶ್ವಿನಿ ಪುನೀತ್ ರಾಜಕುಮಾರ್

ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಮ್ಮ ಪತಿ ಪುನೀತ್ ಅವರಂತೆ ಅವರ ಸೇವಾ ಮನೋಭಾವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವಿಸುತ್ತಿದ್ದಾರೆ. ಅವರ ಅಭಿಮಾನಿಗಳಿಗೆ ಹಲವಾರು ಸಹಾಯಗಳನ್ನು ಮಾಡುತ್ತಾ ತಮ್ಮ ಕೈಲಾದ ಎಲ್ಲಾ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ. ಅಪ್ಪುರವರ ಆಫೀಸನ್ನು ಕೂಡ ಅಶ್ವಿನಿ ರವರೆ ನಡೆಸಿಕೊಂಡು ಹೋಗುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ರವರು ಬೆಂಗಳೂರಿನ ಕೋರಮಂಗಲ ಯೂನಿಯನ್ ಬ್ಯಾಂಕ್ ಹತ್ತಿರ ಇಂದು ಅಪ್ಪುವಿನ ಪ್ರತಿಮೆಯ ಅನಾವರಣ ಕಾರ್ಯಕ್ರಮಕ್ಕೆ ಹಾಜರಿದ್ದು ಆ ಕಾರ್ಯಕ್ರಮದಲ್ಲಿ ಅಪ್ಪುವಿನ ಪುತ್ತಳಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.

ಈ ಕಾರ್ಯಕ್ರಮವನ್ನು ಅಪ್ಪು ಅಭಿಮಾನಿಗಳು ಒಂದು ದೊಡ್ಡ ಜಾತ್ರೆಯಂತೆ ಆಚರಿಸಿದ್ದು ಅಪ್ಪುರವರ ವಿಗ್ರಹಕ್ಕೆ ಪುಷ್ಪಾರ್ಪಣೆಯನ್ನು ಮಾಡಿ ಅಪ್ಪು ಪುತ್ತಳಿಯನ್ನು ಪ್ರತಿಷ್ಠಾಪಿಸಿದರು. ಪುನೀತ್ ರಾಜಕುಮಾರ್ ರವರ ಪುತ್ತಳಿಯನ್ನು ಡೊಳ್ಳು ಕುಣಿತ ಹಾಗೂ ವೀರಗಾಸೆ ನೃತ್ಯಗಳ ಮೂಲಕ ಸ್ವಾಗತಿಸಲಾಯಿತು. ತದನಂತರ ಅಶ್ವಿನಿ ಪುನೀತ್ ರಾಜಕುಮಾರ್ ಅವರು ರಾಘವೇಂದ್ರ ರಾಜಕುಮಾರ್ ರವರ ಜೊತೆ ಕಾರಿನಲ್ಲಿ ಬಂದಿಳಿದರು ಅವರಿಗೂ ಕೂಡ ಅದ್ದೂರಿ ಸ್ವಾಗತವನ್ನು ಕೋರಲಾಯಿತು. ಈ ಕಾರ್ಯಕ್ರಮದ ಎಲ್ಲಾ ಕ್ರೆಡಿಟ್ಗಳು ಕೂಡ ಅಪ್ಪು ಅಭಿಮಾನಿಗಳಿಗೆ ಸೇರುತ್ತದೆ.

 

 

ಈ ಕಾರ್ಯಕ್ರಮದಲ್ಲಿ ಪುತ್ತಳಿಯ ಅನಾವರಣದ ನಂತರ ರಾಘವೇಂದ್ರ ರಾಜಕುಮಾರ್ ರವರು ಅಪ್ಪು ಕುರಿತು ಮಾತನಾಡಿ ಅಪ್ಪು ನಮ್ಮನ್ನು ಅಗಲಿದ ದಿನ ಖಂಡಿತವಾಗಿಯೂ ಅವರು ಮರಣ ಹೊಂದಿದ ದಿನವಲ್ಲ ಅದು ಅವರ ಜನ್ಮದಿನ ನಮ್ಮ ಮಕ್ಕಳು ಮೊಮ್ಮಕ್ಕಳು ಯಾರೇ ಬಂದರೂ ಕೂಡ ಅಪ್ಪುವಿನ ಶಕ್ತಿ ಹಾಗೆ ಇರುತ್ತದೆ. ಅಭಿಮಾನಿಗಳು ಕೂಡ ಹೀಗೆ ಇರುತ್ತಾರೆ ಏನು ಕೂಡ ಬದಲಾಗಬಹುದು ಆದರೆ ಅಪ್ಪು ಅಭಿಮಾನಿಗಳ ಪ್ರೀತಿ ಎಂದಿಗೂ ಬದಲಾಗುವುದಿಲ್ಲ.

ಅಪ್ಪು ರವರ ಕೊನೆಯ ಚಿತ್ರವಾದ ಗಂಧದಗುಡಿ ಚಿತ್ರವನ್ನು ನಾವೆಲ್ಲರೂ ನೋಡಿದ್ದೇವೆ ಅದರಲ್ಲಿ ನಮಗೆಲ್ಲ ಎಷ್ಟೊಂದು ಮೆಸೇಜ್ ಗಳನ್ನು ನೀಡಿದ್ದಾರೆ.ಅಪ್ಪು ಇದನ್ನೆಲ್ಲಾ ನಮಗೆ ತಿಳಿಸಲು ಹುಟ್ಟಿದ್ದರೂ ಅದನ್ನು ನಮಗೆ ತಿಳಿಸಿಕೊಟ್ಟು ಹೋಗಿದ್ದಾರೆ. ಅಪ್ಪು ಗಂಧದಗುಡಿಯ ಬಗ್ಗೆ ನಿಮಗೆಲ್ಲ ತಿಳಿಸುವವರೆಗೂ ಸಿನಿಮಾ ಮುಗಿಯುವವರೆಗೂ ನಮ್ಮ ಜೊತೆ ಇದ್ದರು, ಅವರು ನಮಗೆ ಹೇಳಿಕೊಟ್ಟಿರುವ ಸಂದೇಶಗಳನ್ನೆಲ್ಲ ನಾವು ನಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಅಪ್ಪು ಹೇಳಿದಂತೆ ಪ್ರಕೃತಿಯೇ ಪರಮಾತ್ಮನಾಗಿದೆ. ಅಪ್ಪು ಮನಸು ಮಾಡಿದರೆ ಹಲವಾರು ಪ್ರಶಸ್ತಿಗಳನ್ನು ಬದುಕಿದ್ದಾಗದೆ ಪಡೆದುಕೊಳ್ಳಬಹುದಿತ್ತು ಆದರೆ ಅವನು ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಬಂದಿರಲಿಲ್ಲ ಅವನು ಈ ಸಂದೇಶಗಳನ್ನು ನಮಗೆ ತಿಳಿಸಲು ಬಂದಿದ್ದ ಅವನು ತಿಳಿಸಿ ಹೋಗಿದ್ದಾನೆ ತದನಂತರ ಪ್ರಶಸ್ತಿಗಳು ಬಂದಿವೆ ಎಂದರು.

 

 

ನಾವು ಅಪ್ಪುವಿನ ಕನಸಿನಂತೆ ಅವನ ಸಂದೇಶಗಳನ್ನು ಮುಂದಿನ ಪೀಳಿಗೆಗೆ ಸಾಗಿಸಬೇಕು ಈ ಪುತ್ತಳಿಯನ್ನು ನೋಡಿದ ಮುಂದಿನ ಜನರೇಶನ್ ರವರು ಇವರು ಯಾರು ಎಂದು ಕೇಳಿದಾಗ ಇವರ ಬಗ್ಗೆ ಹೇಳುವಂತಿರಬೇಕು.ನಾನು ಅಪ್ಪುವಿಗಿಂತ ದೊಡ್ಡವನು, ನಾನು ಅವನ ಕೈಯಲ್ಲಿ ಹೂ ಹಾಕಿಸಿಕೊಳ್ಳಬೇಕಿತ್ತು ಆದರೆ ಇದೀಗ ನಾನು ಅಪ್ಪುಗೆ ಹೂವ ಹಾಕುತ್ತಿದ್ದೇನೆ.ಅವರು ಗಂಧದ ಗುಡಿ ಚಿತ್ರದ ಮೂಲಕ ನಮಗೆ ಹಲವಾರು ಸಂದೇಶಗಳನ್ನು ನೀಡಿದ್ದಾರೆ ಅದರಲ್ಲಿ ಕಣ್ಣುಗಳನ್ನು ದಾನ ಮಾಡಬೇಕು, ನೀರನ್ನು ಮಿತವಾಗಿ ಬಳಸಬೇಕು ,ಪ್ಲಾಸ್ಟಿಕ್ ಅನ್ನು ಬಳಸಬಾರದು, ಗಿಡಮರಗಳನ್ನು ಬೆಳೆಸಬೇಕು, ಕಾಡನ್ನು ಕಾಪಾಡಬೇಕು, ಪರಿಸರ ರಕ್ಷಣೆ ಮಾಡಬೇಕು ಇವನ್ನೆಲ್ಲಾ ತನ್ನ ಚಿತ್ರದಲ್ಲಿ ಸಂದೇಶವಾಗಿ ನೀಡಿ ಹೋಗಿದ್ದಾನೆ.

ನಾನು ಇಲ್ಲಿ ಅವನ ಪ್ರತಿಭೆಗಳನ್ನು ಅನಾವರಣ ಮಾಡಲು ಬಂದಿಲ್ಲ ಆದರೆ ಅವನು ಮಾಡಿದ ಕೆಲಸಗಳನ್ನು ನಾನು ಹಂಚಿಕೊಳ್ಳುವುದು ನನ್ನ ಕರ್ತವ್ಯವಾಗಿದೆ ಹಾಗಾಗಿ ಹಂಚಿಕೊಳ್ಳುತ್ತಿದ್ದೇನೆ ಎಂದು ರಾಘವೇಂದ್ರ ರಾಜಕುಮಾರ್ ಅವರು ಅಪ್ಪು ಪುತ್ತಳಿ ಪ್ರತಿಷ್ಠಾಪನ ಸಮಾರಂಭದಲ್ಲಿ ಮಾತನಾಡಿ ಅಪ್ಪುವಿಗಾಗಿ ಬೊಂಬೆ ಹೇಳುತೈತೆ ಹಾಡನ್ನು ಕೂಡ ಹಾಡಿದರು ಹಾಗೆಯೇ ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಎನ್ನುವ ಹಾಡನ್ನು ಕೂಡ ಹಾಡಿದರು.

 

 

ಅಪ್ಪುವಿನ ಪುತ್ತಳಿಗೆ ಎಲ್ಲರೂ ಪುಷ್ಪಾರ್ಚನೆಯನ್ನು ಮಾಡಿದ ನಂತರ ಅಶ್ವಿನಿರವರಿಗೆ ಸನ್ಮಾನ ಮಾಡಲಾಯಿತು ತದನಂತರ ಅಪ್ಪುವಿನ ಸಂದೇಶದಂತೆ ಎಲ್ಲಾ ಗಣ್ಯರಿಗೂ ಸಸಿಗಳನ್ನು ನೀಡಿ ಗೌರವಿಸಲಾಯಿತು. ಅಶ್ವಿನಿ ಪುನೀತ್ ರಾಜಕುಮಾರ್ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಾಗೂ ಪುಸ್ತಕಗಳನ್ನು ನೀಡಿದರು ತದನಂತರ ಅಭಿಮಾನಿಗಳಿಗೆ ಊಟವನ್ನು ಕೂಡ ಹಾಕಿಸಿದರು ಆ ಕಾರ್ಯಕ್ರಮದಲ್ಲಿ ಎಲ್ಲೆಲ್ಲಿ ಅಪ್ಪು ಅಪ್ಪು ಎನ್ನುವ ಅಪ್ಪು ಅಭಿಮಾನಿಗಳ ಧ್ವನಿಗೆ ಝೆಂಕರಿಸುತಿತ್ತು.

Be the first to comment

Leave a Reply

Your email address will not be published.


*