ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೆಬ್ರವರಿ 16 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ನಿಮಗೆಲ್ಲ ಗೊತ್ತಿರಬಹುದು. ರಾತ್ರಿಯಿಂದ ಹಗಲು ಅಭಿಮಾನಿಗಳಿಗೆ ಹಸ್ತಲಾಘವ ಮಾಡುತ್ತಾ ಮನೆ ಮುಂದೆ ಎಲ್ಲರನ್ನೂ ನಗುಮುಖದಿಂದ ಭೇಟಿಯಾಗುತ್ತಾರೆ. ತಮ್ಮ ಖಾಸಗಿ ಸಮಯದಲ್ಲಿ, Dboss ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರಿಟಿಗಳೊಂದಿಗೆ ಆಚರಿಸಿದರು.
ಈಗ ಸುದ್ದಿ ಏನೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಖ್ಯಾತ ನಟಿ ಮೇಘಾ ಶೆಟ್ಟಿಯವರ ಜೊತೆಗೂಡಿ ಆಚರಿಸಿಕೊಂಡಿದ್ದಾರೆ. ಅದೇ ಫೋಟೋ ಮತ್ತು ವಿಡಿಯೋವನ್ನು ಮೇಘಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಂಭ್ರಮದಿಂದ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಮೂಡಿಸಿದ್ದು, ಎಲ್ಲೆಡೆ ಟೀಕೆ ವ್ಯಕ್ತವಾಗಿದೆ.
ವಿಜಯಲಕ್ಷ್ಮಿ ದರ್ಶನ್ ಅವರ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ನಿಮ್ಮಲ್ಲಿ ಸಾಮಾನ್ಯ ಪ್ರಜ್ಞೆ ಇರಬೇಕಾಗಿತ್ತು. ನನ್ನ ಮೌನ ಇದನ್ನೆಲ್ಲ ಸಹಿಸಿಕೊಳ್ಳುತ್ತದೆ ಎಂಬುದು ನಿಮ್ಮ ದಡ್ಡತನ ಇದರಿಂದಾಗಿ ನನ್ನ ಮಗನಿಗೂ ಬೇಸರವಾಗಿದೆ ಎಂದು ವಿಜಯಲಕ್ಷ್ಮಿ ದರ್ಶನ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಇದೀಗ ವಿಡಿಯೋವನ್ನು ಈಗಾಗಲೇ ಮೇಘಾ ಶೆಟ್ಟಿ ಡಿಲೀಟ್ ಮಾಡಿದ್ದು, ಇದೀಗ ಒಂದೇ ದಿನದಲ್ಲಿ ವಿಜಯಲಕ್ಷ್ಮಿ ದರ್ಶನ್ ರಿವರ್ಸ್ ಆಗಿರುವ ಶಂಕೆ ವ್ಯಕ್ತವಾಗಿದೆ. ಯಾಕೆಂದರೆ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿರುವ ವಿಜಯಲಕ್ಷ್ಮಿ ಇಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಒಂದೇ ದಿನದಲ್ಲಿ ಇಷ್ಟೊಂದು ಬದಲಾವಣೆ ಆಗಿದ್ದೇಕೆ ಎಂಬ ಅನುಮಾನವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ.