ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್ ಅಂಬರೀಶ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರ ಒಡನಾಟದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ದಿವಂಗತ ಅಂಬರೀಶ ಹಾಗೂ ಸುಮಲತಾ ಅವರು ದರ್ಶನ ಅವರನ್ನು ತಮ್ಮ ದೊಡ್ಡ ಮಗ ಎಂದೇ ಕೆಲ ಸಮಾರಂಭಗಳಲ್ಲಿ ಜಗಜ್ಜಾಹಿರಾಗಿ ಹೇಳಿದ್ದಾರೆ. ಇನ್ನೂ ಅಂಬರೀಶ ಸುಮಲತಾ ದಂಪತಿಯ ಏಕೈಕ ಪುತ್ರ ಅಭಿಷೇಕ ಅವರನ್ನು ನಟ ದರ್ಶನ ತಮ್ಮ ಸ್ವಂತ ಸಹೋದರನಂತೆ ನೋಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಅಭಿಷೇಕ ಹಾಗೂ ಅವಿವಾ ಅವರ ನಿಶ್ಚಿತಾರ್ಥದಲ್ಲಿ ನಟ ದರ್ಶನ ತಾವೇ ಮುಂದೆ ನಿಂತು ಎಲ್ಲ ಜವಾಬ್ದಾರಿಯನ್ನು ಹೊತ್ತು ನಿಶ್ಚಿತಾರ್ಥ ನೆರವೇರಿಸುವ ಮೂಲಕ ಅಂಬರೀಶ ಅವರ ಕುಟುಂಬದಲ್ಲಿ ನಾನು ದೊಡ್ಡ ಮಗ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಈ ಎಲ್ಲ ಸಂಭ್ರಮಗಳ ನಡುವೆ ಇತ್ತೀಚೆಗೆ ನಡೆದ ಅವಿವಾ ಜನ್ಮ ದಿನ ಸಂಭ್ರಮದಲ್ಲಿ ಇಡೀ ಕನ್ನಡ ಚಿತ್ರರಂಗದ ಸ್ಟಾರ್ ನಟ, ನಟಿಯರು ಪಾಲ್ಗೊಂಡು ಶುಭಾಷಯಗಳ ಸುರಿಮಳೆ ಸುರಿಸಿದ್ದು ಒಂದೆಡೆಯಾದರೆ, ನಟ ದರ್ಶನ ಮಾತ್ರ ಅವಿವಾ ಅವರಿಗೆ ವಿಶೇಷ ಉಡುಗೊರೆ ಕೊಡುವ ಮೂಲಕ ಸಿನಿ ಪ್ರೇಮಿಗಳ ಹಾಗೂ ನಟ, ನಟಿಯರಿಗೆ ಮಾದರಿಯಾಗಿದ್ದಾರೆ.
View this post on Instagram
ಹೌದು ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿರುವ ನಟ ದರ್ಶನ ಅವಿವಾ ಅವರಿಗೆ ಚಿನ್ನದ ವಿಶೇಷ ಸರವನ್ನು ಕೊಡುವ ಮೂಲಕ ಗಮನ ಸೆಳೆದಿದ್ದಾರೆ.
ಇನ್ನೂ ನಟ ಅಭಿಷೇಕ ತಮ್ಮ ಭಾವಿ ಪತ್ನಿ ಅವಿವಾ ಅವರೊಂದಿಗೆ ಜನ್ಮ ದಿನ ಆಚರಿಸಿರುವ ಹಾಗೂ ಶುಭಾಷಯಗಳನ್ನು ಕೋರಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.