ರಾಧಿಕಾಗೆ ಸಿಕ್ತು ಸ್ನೇಹಿತೆಯಿಂದ ಭರ್ಜರಿ ಗಿಫ್ಟ್

ಚಿತ್ರರಂಗದಲ್ಲಿ ಸದಾ ಒಂದಿಲ್ಲೊಂದು ವಿವಾದಗಳು ಇದ್ದೆ ಇರುತ್ತವೆ. ಅದೇ ರೀತಿ ಒಬ್ಬರನ್ನೊಬ್ಬರು ಬಿಟ್ಟು ಕೊಡದ ಘಾಡವಾದ ಸ್ನೇಹವನ್ನು ಹೊಂದಿರುತ್ತಾರೆ.

 

 

ಘಾಡವಾದ ಸ್ನೇಹಕ್ಕೆ ಇದೀಗ ಚಂದನವನ ಸಾಕ್ಷಿಯಾಗಿದೆ. ಚಂದನವನದಲ್ಲಿ ಈ ರೀತಿ ಸ್ನೇಹ ಕಂಡು ಬರುವುದು ವಿಷೇಶವೆನಲ್ಲ. ರಾಧಿಕಾ ಪಂಡಿತ್ ಮಾರ್ಚ್ 7 ರಂದು ತಮ್ಮ 38ನೇ ಜನ್ಮ ದಿನವನ್ನು ಥೈಲ್ಯಾಂಡ್ ನಲ್ಲಿ ಆಚರಿಸಿಕೊಂಡಿದ್ದು, ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ದರೆ. ಸ್ಯಾಂಡಲ್ ವುಡ್ ನ ನಟಿ ತಮ್ಮ ಮಗನೊಂದಿಗೆ ರಾಧಿಕಾ ಮನೆಗೆ ಹೋಗಿ ವಿಭಿನ್ನವಾಗಿ ರಾಧಿಕಾಳ ಜನ್ಮ ದಿನ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.

 

 

ಹೌದು ಚಂದನವನದ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ತಮ್ಮ ಮಗ ರಾಯನ್ ಸರ್ಜಾ ಜೊತೆ ರಾಧಿಕಾ ಮನೆಗೆ ತೆರಳಿ ತಮ್ಮ ಮಗನಿಂದ ಬರ್ಥಡೇ ವಿಶ್ ತಿಳಿಸಿದ್ದು ವಿಶೇಷವಾಗಿದೆ.

 

 

ಈ ವೇಳೆ ರಾಯನ್ ಸರ್ಜಾನನ್ನು ಕಂಡ ರಾಧಿಕಾ ಮಗುವನ್ನು ಅಪ್ಪಿಕೊಂಡು ಮುದ್ದಾಡಿದ್ದಾರೆ. ಇದರೊಂದಿಗೆ ನಟಿ ಮೇಘನಾ ರಾಜ್ ರಾಧಿಕಾ ಅವರಿಗೆ ಬಂಗಾದರ ಬಳೆಗಳನ್ನು ಉಡುಗೊರೆ ನೀಡಿರುವುದು ವಿಶೇಷವಾಗಿದೆ. ಈ ಘಟನೆನೆಯಿಂದಾಗಿ ಸ್ನೇಹ ಯಾವತ್ತೂ ಶಾಶ್ವತ ಎಂಬುದು ಸಾಬೀತಾಗಿದೆ.

Leave a comment

Your email address will not be published. Required fields are marked *