ಚಲಪತಿ ಬಾಡಿಗಾರ್ಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂಗರಕ್ಷಕರಾಗಿದ್ದರು. ಯಜಮಾನ ಎಲ್ಲೇ ಇದ್ದರೂ ಆತನನ್ನು ರಕ್ಷಿಸಲು ಬೆನ್ನೆಲುಬಾಗಿ ನಿಂತವನು ಚಲಪತಿ. ಆದರೆ ಪುನೀತ್ ರಾಜ್ ಕುಮಾರ್ ನಿಧನದ ನಂತರ ಚಲಪತಿ ಮನೆಯಿಂದ ಹೊರ ನಡೆದಿದ್ದರು.
ಇತ್ತೀಚೆಗಷ್ಟೇ ಯುವರಾಜಕುಮಾರ್ ಅಭಿನಯದ ಯುವರಾಜಕುಮಾರ್ ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಚಲಪತಿ ಹಲವು ವಿಚಾರಗಳನ್ನು ಹಂಚಿಕೊಂಡರು. ಇಂದಿಗೂ ದೊಡ್ಮನೆಗೆ ಹೋಗುವ ಪರಿಪಾಠ ಇಟ್ಟುಕೊಂಡಿದ್ದೇನೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರು ಅವರತ್ತ ಪ್ರಶ್ನೆ ಎಸೆದರು.
ಅದೇನೆಂದರೆ, ಚಲಪತಿ ಮತ್ತೆ ಬಂದು ಮುಂದಿನ ದಿನಗಳಲ್ಲಿ ನನ್ನ ಅಂಗರಕ್ಷಕ ಎಂದು ಕೇಳಿದರೆ ಯುವರಾಜ್ ಕುಮಾರ್ ಒಪ್ಪುತ್ತಾರೆಯೇ ಎಂದು ಸಂದರ್ಶಕರು ಕೇಳಿದರು. ಇದಕ್ಕೆ ಚಲಪತಿಯವರ ಉತ್ತರ ಇಲ್ಲ ಎಂಬುದಾದರೂ ಅವರು ನೀಡಿದ ಕಾರಣ ಅದ್ಭುತವಾಗಿತ್ತು. ಹಾಗಾಗದಿರಲು ನಿಜವಾದ ಕಾರಣ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ.
ಅಲ್ಲಿಗೆ ಹೋದರೆ ಖಂಡಿತಾ ನನ್ನ ಯಜಮಾನನ ನೆನಪಾಗುತ್ತದೆ, ಯಜಮಾನರಿಲ್ಲದ ಜಾಗದಲ್ಲಿ ಕೆಲಸ ಮಾಡಲು ಆಗುವುದಿಲ್ಲ ಹಾಗಾಗಿ ಇನ್ನು ಮುಂದೆ ಕೆಲಸಕ್ಕೆ ಹೋಗುವುದಿಲ್ಲ ಎಂದು ಚಲಪತಿ ಸ್ಪಷ್ಟಪಡಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಯುವರಾಜಕುಮಾರ್ ಜೊತೆ ಕೆಲಸ ಮಾಡಲು ಸಾಕಷ್ಟು ಯುವ ಪ್ರತಿಭೆಗಳು ಕಾಯುತ್ತಿದ್ದು, ಅವರಿಗೂ ಅವಕಾಶ ಸಿಗಲಿ ಎಂದು ಚಲಪತಿ ಈ ಸಂದರ್ಭದಲ್ಲಿ ಶುಭ ಹಾರೈಸಿದರು.