ಕಿರುತೆರೆಯ ಸೀರಿಯಲ್ ಲೋಕದಲ್ಲಿ ತನ್ನ ನಟನೆಯ ಮೂಲಕ ಚಾಪು ಮೂಡಿಸಿರುವ ನಟ ರಾಜೇಶ್ ಅಲಿಯಾಸ್ ಅಖಿಲ್, ಅಖಿಲ್ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಪ್ರಖ್ಯಾತಿಯನ್ನು ಪಡೆದುಕೊಂಡರು ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ನಂತರ ಹಲವಾರು ಧಾರವಾಹಿಗಳಲ್ಲಿ ನಾಯಕನಟನಾಗಿ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅಖಿಲ್ ರವರ ಜೀವನದಲ್ಲಿ ಇಂದಿನ ಬಿರುಗಾಳಿ ಒಂದು ಬೀಸಿದೆ.

 

 

ಸಂಸಾರದ ವಿಚಾರ ಇದೀಗ ಬೀದಿ ರಂಪಾಟವಾಗಿ ಹೋಗಿದೆ ಅಗ್ನಿಸಾಕ್ಷಿ ಸೀರಿಯಲ್ ನಟ ಅಖಿಲ್ ಗೆ ಮತ್ತೊಂದು ಸಂಕಷ್ಟ ಬಂದು ಒದಗಿದೆ. ಹಲವಾರು ಧಾರವಾಹಿಗಳ ಮೂಲಕ ಕನ್ನಡದ ಕಿರುತೆರೆಯಲ್ಲಿ ಹೆಸರು ಮಾಡಿದ್ದ ನಟ ರಾಜೇಶ್ ವಿರುದ್ಧ ಅವರ ಪತ್ನಿ ವರದಕ್ಷಿಣೆ ಕಿರುಕುಳದ ಆರೋಪವನ್ನು ಹೊರಿಸಿದ್ದಾರೆ.

ಅಖಿಲ್ ರವರ ಪತ್ನಿ ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಪೊಲೀಸ್ ಮೆಟ್ಟಿಲೇರಿ ಅತ್ತೆ ಹಾಗೂ ಗಂಡ ವರದಕ್ಷಿಣೆ ವಿಚಾರವಾಗಿ ಕಿರುಕುಳವನ್ನು ನೀಡುತ್ತಿದ್ದಾರೆ ಎಂದು ದೂರನ್ನು ದಾಖಲೆಸಿದ್ದಾರೆ. ಕಿರುಕುಳ ನೀಡಿದ್ದು ಸಾಕಾಗದೆ ಊಟವನ್ನು ನೀಡದೆ ಹಿಂಸೆ ಕೊಡುತ್ತಿದ್ದರು ಇಂದು ಮಾಧ್ಯಮಗಳ ಮೂಲಕ ರಾಜೇಶ್ ರವರ ಪತ್ನಿ ಆರೋಪವನ್ನು ಮಾಡಿದ್ದರು.

 

 

ಇದನ್ನು ಕೇಳಿ ನಟ ರಾಜೇಶ್ ಕೂಡ ಪತ್ನಿಗೆ ತಿರುಗೇಟು ನೀಡಿದ್ದಾರೆ. ನನ್ನ ಪತ್ನಿ ನನಗೂ ಹಾಗೂ ನನ್ನ ತಾಯಿಗೆ ತುಂಬಾ ಹಿಂಸೆ ನೀಡುತ್ತಿದ್ದರು ಎಂದು ರಾಜೇಶ್ ಪತ್ನಿಯ ವಿರುದ್ಧ ಆರೋಪ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ನಡೆ ರಾಜೇಶ್ ರವರ ಮೇಲೆ ಆರೋಪವು ಕೇಳಿಬಂದಿದ್ದು. ಮಾಧ್ಯಮಗಳ ಜೊತೆ ಮಾತನಾಡುವಾಗ ಅಖಿಲ್ ರವರ ಪತ್ನಿ ಶೃತಿ ಅಖಿಲ್ ರವರ ಜೊತೆ ಮತ್ತೊಂದು ಆರೋಪವನ್ನು ಮಾಡಿದ್ದಾರೆ.

 

 

ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ನನ್ನ ಗಂಡ ನನಗೆ ಅಬಾರ್ಷನ್ ಮಾಡಿಸಿದ್ದರು ಬೇಡವೆಂದರೂ ಬಲವಂತ ಮಾಡಿ ಮಗುವನ್ನು ತೆಗೆಸಿದ್ದಾರೆ ಎಂದು ಆರೋಪವನ್ನು ಮಾಡಿದ್ದಾರೆ. ಆಗ ನನಗೆ ಮೂರು ತಿಂಗಳಾಗಿತ್ತು ಬೇಡ ಬೇಡವೆಂದರೂ ಬಲವಂತ ಮಾಡಿ ಮಗುವನ್ನು ನನ್ನ ಗಂಡ ತೆಗೆಸಿದಿದ್ದಾರೆ. ರಾಜೇಶ್ ನನ್ನ ಪತಿ ಅವರು ಹೇಗಿದ್ದರೂ ನಾನು ಅವರನ್ನು ಒಪ್ಪಿಕೊಳ್ಳ ಬೇಕು ಅವರು ಸೀರಿಯಲ್ ನಲ್ಲಿ ನಟಿಸಿದರು ಅಥವಾ ಕೂಲಿ ಕೆಲಸವನ್ನು ಮಾಡಿದರು ಅವರನ್ನು ನಾನು ಒಪ್ಪಿಕೊಳ್ಳುತ್ತೇನೆ.

 

 

ಯಾಕೆಂದರೆ, ನಾವಿಬ್ಬರೂ ಪ್ರೀತಿಸಿ ಮದುವೆಯಾದವರು ಅವರಿಗೆ ನನ್ನ ಮೇಲೆ ಪ್ರೀತಿ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ, ನನಗೆ ಅವರ ಮೇಲೆ ಪ್ರೀತಿಯಿದೆ.ನನಗೆ ನನ್ನ ಗಂಡ ಬೇಕು ಎಂದು ಶೃತಿ ಹೇಳಿದ್ದಾರೆ. ಹಾಗೆ ನಾನು ನನ್ನ ಗಂಡ ಅಕಿಲ್ ಗೆ ಡೈವೋರ್ಸ್ ನೀಡುವುದಿಲ್ಲ ಎಂದು ಸಹ ಅವರ ಪತ್ನಿ ಶ್ರುತಿ ಹೇಳಿದ್ದು ಈ ಘಟನೆಯಲ್ಲಿ ಯಾರದ್ದು ತಪ್ಪು ಯಾರದ್ದು ಸರಿ ಎನ್ನುವ ವಿಚಾರ ತನಿಕೆಯಿಂದ ಹೊರ ಬರಬೇಕಾಗಿದೆ.

Leave a comment

Your email address will not be published. Required fields are marked *