ಮೊನ್ನೆ ಭಾನುವಾರದಂದು ಅಭಿಷೇಕ ಹಾಗೂ ಆವಿವಾ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿತ್ತು ಇದೀಗ ಅಭಿಷೇಕ್ ಅಂಬರೀಶ್ ಲವ್ ಸ್ಟೋರಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಅಭಿಷೇಕ್ ಅವಿವಾ ರವರನ್ನು ಲವ್ ಮಾಡುತ್ತಿದ್ದ ವಿಚಾರ ಅಂಬರೀಶ್ ರವರಿಗೂ ಕೂಡ ತಿಳಿದಿತ್ತಂತೆ ಹಾಗಾದರೆ ಅಭಿಷೇಕ ಅಂಬರೀಶ್ ತಮ್ಮ ತಂದೆಗೆ ಈ ವಿಚಾರವನ್ನು ಹೇಗೆ ಹೇಳಿದ್ದರು ಅಂಬರೀಶ್ ಅದಕ್ಕೆ ಹೀಗೆ ರಿಯಾಕ್ಷನ್ ನೀಡಿದ್ದರು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಅಭಿಷೇಕ್ ಅಂಬರೀಶ ಹಾಗೂ ಅವಿವಾ ಬಿದ್ದಪ್ಪ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು ಇವರು ಮೊನ್ನೆಯಷ್ಟೇ ತಮ್ಮ ಎಂಗೇಜ್ಮೆಂಟನ್ನು ಮಾಡಿಕೊಂಡಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಅವಿವಾರದವರಿಗೆ ಡೈಮೆಂಡ್ ರಿಂಗ್ ತೊಡಿಸುವ ಮೂಲಕ ಅಭಿಷೇಕ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ನೋಡಿ ಇಡೀ ಕರುನಾಡು ಇವರಿಗೆ ಶುಭ ಹಾರೈಸಿತ್ತು.
ಅಭಿಷೇಕ್ ಅಂಬರೀಷ್ ರವರ ಎಂಗೇಜ್ಮೆಂಟ್ ದಿನದಂದು ಅಂಬಿ ಕೂಡ ಇರಬೇಕಿತ್ತು ಅಂಬಿ ಇದ್ದಿದ್ದರೆ ತಮ್ಮ ಮಗನ ಎಂಗೇಜ್ಮೆಂಟ್ ದಿನ ಎಷ್ಟು ಖುಷಿ ಪಡುತ್ತಿದ್ದರು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಂಬರೀಶ್ ರವರು ಬದುಕಿದ್ದಾಗ ಅಭಿಷೇಕ್ ತಮ್ಮ ತಂದೆಗೆ ತಮ್ಮ ಪ್ರೀತಿಯ ವಿಚಾರವನ್ನು ಹೇಳಿದರಂತೆ ಈ ವಿಚಾರವನ್ನು ಸ್ವತಃ ಅಭಿಷೇಕ್ ಹೇಳಿಕೊಂಡಿದ್ದಾರೆ.
ನಟ ಅಂಬರೀಶ್ ನಿಧನರಾಗುವ ಒಂದು ವರ್ಷ ಮೊದಲೇ ಅವಿವಾ ಹಾಗೂ ಅಭಿಷೇಕ್ ರವರ ಲವ್ ಸ್ಟೋರಿ ಯನ್ನು ತಿಳಿದುಕೊಂಡಿದ್ದರು ಅಭಿಷೇಕ್ ತಮ್ಮ ಪ್ರೀತಿಯ ವಿಚಾರವನ್ನು ತಮ್ಮ ತಂದೆಗೆ ಹೇಳಿ ಒಪ್ಪಿಸಿದ್ದರು ಅಭಿಷೇಕ್ ಹಾಗೂ ಅವಿವರಿಬ್ಬರದ್ದು ಐದು ವರ್ಷದ ಪ್ರೀತಿ ಇವರಿಬ್ಬರೂ ಮೊದಲು ಫಾರಿನ್ ನಲ್ಲಿ ಭೇಟಿಯಾಗಿ ಪರಿಚಯವಾಗುತ್ತಾರೆ ನಂತರ ಪರಿಚಯವು ಪ್ರೀತಿಗಾಗಿ ಬದಲಾಗುತ್ತದೆ.
ಅಂಬರೀಶ್ ಕೂಡ ತಮ್ಮ ಮಗ ಅಭಿಷೇಕ್ ರವರ ಪ್ರೀತಿಯನ್ನು ಒಪ್ಪಿಕೊಂಡಿದ್ದರು ಹಾಗೆಯೇ ನಿಮ್ಮಿಬ್ಬರು ಯಾವಾಗ ಇಷ್ಟಪಡುತ್ತೀರೋ ಅವಾಗ ನಾನೇ ಮುಂದೆ ನಿಂತು ಮದುವೆ ಮಾಡಿಕೊಡುತ್ತೇನೆ ಎಂದು ಕೂಡ ಹೇಳಿದ್ದರು ನಿಮ್ಮ ಮದುವೆಯನ್ನು ಜಾಮ್ ಜುಮ್ ಎಂದು ಮಾಡುತ್ತೇನೆ ಎಂದು ತಮಾಷೆ ಮಾಡಿದ್ದರಂತೆ ಸುಮಲತಾ ಕೂಡ ತಮ್ಮ ಮಗನ ಪ್ರೀತಿಯನ್ನು ಒಪ್ಪಿ ಹಾರೈಸಿದ್ದರಂತೆ ಇಂದು ಅಂಬರೀಶ್ ರವರು ಬದುಕಿಲ್ಲ ಆದರೆ ಅವರ ಮಗ ಅಭಿಷೇಕ್ ತಾವು ಇಷ್ಟಪಟ್ಟ ಹುಡುಗಿಯಾದ ಅವಿವಾಗೆ ಡೈಮಂಡ್ ರಿಂಗ್ ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸುಮಲತಾ ರವರು ತಮ್ಮ ಮಗನ ಮದುವೆ ಮಾಡಲು ನಿಶ್ಚಯಿಸಿದ್ದಾರೆ ಇಷ್ಟೇ ಅಲ್ಲದೆ ಮಂಡ್ಯದಲ್ಲೂ ಕೂಡ ಮಗನ ಆರತಾಕ್ಷತೆಯನ್ನು ಮಾಡಬೇಕು ಎಂದು ಬಯಸುತ್ತಿದ್ದಾರೆ.