ನ್ನದಾನಕ್ಕಿಂತ ಮಿಗಿಲಾದ ಯಾವುದು ಇಲ್ಲ ಹಸಿದು ಬಂದವನಿಗೆ ಒಂದು ತುತ್ತು ಅನ್ನ ಹಾಕಿದರೆ ಸಾವಿರ ಜನ್ಮದ ಪುಣ್ಯ ಸಿಗುತ್ತದೆ. ಮನುಷ್ಯನಿಗೆ ಎಷ್ಟೇ ಹಣ ನೀಡಿದರು ಆತನಿಗೆ ತೃಪ್ತಿ ಎನ್ನುವುದು ಇರುವುದಿಲ್ಲ ಆದರೆ ಹಸಿದವನಿಗೆ ಅನ್ನ ಹಾಕಿದರೆ ಎಂತಹ ಮನುಷ್ಯ ಆದರೂ ಕೂಡ ತೃಪ್ತಿ ಪಡುತ್ತಾನೆ. ಕರ್ನಾಟಕದ ಈ ಹಲವಾರು ಪುಣ್ಯಕ್ಷೇತ್ರಗಳಿವೆ ಆದರೆ ಹೆಚ್ಚು ಪ್ರಸಿದ್ಧಿಯನ್ನು ಹೊಂದಿರುವ ಕರ್ನಾಟಕದ ಪುಣ್ಯಕ್ಷೇತ್ರ ಎಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ.

 

 

ಸುಮಾರು ನಾಲ್ಕು ನೂರು ವರ್ಷಗಳ ಇತಿಹಾಸವಿರುವ ಧರ್ಮಸ್ಥಳ ಕ್ಷೇತ್ರದ ಮಂಜುನಾಥನ ದರ್ಶನ ಪಡೆಯಲು ಬಂದ ಭಕ್ತಾದಿಗಳಿಗಾಗಿ ಇಲ್ಲಿ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದಾರೆ. ಈ ಧರ್ಮ ಶಾಲೆಯನ್ನು ಅನ್ನಪೂರ್ಣ ಭೋಜನ ಶಾಲೆ ಎಂದೆ ಕರೆಯುತ್ತಾರೆ. ಧರ್ಮಸ್ಥಳಕ್ಕೆ ಹೋದವರೆಲ್ಲರೂ ಅಲ್ಲಿಗೆ ಹೋಗಿ ಅನ್ನವನ್ನು ಸ್ವೀಕರಿಸಿ ಬರುತ್ತಾರೆ.

 

 

ಭೋಜನ ಶಾಲೆಗೆ ಹೊಸ ಮೆರುಗು ದೊರಕಿದೆ. ಧರ್ಮಸ್ಥಳ ಇಂದ ಕ್ಷಣ ನೆನಪಾಗುವುದು ಮಂಜುನಾಥ ಸ್ವಾಮಿ ನೇತ್ರಾವತಿ ನದಿ ಹಾಗೂ ಹಸಿದು ಬಂದವರಿಗೆ ಅನ್ನ ನೀಡುವ ಅನ್ನ ಸಂತರ್ಪಣೆ ಈ ಭೋಜನ ಶಾಲೆ ಅದೆಷ್ಟೋ ವರ್ಷಗಳಿಂದ ಭಕ್ತಾದಿಗಳಿಗೆ ಅನ್ನವನ್ನು ನೀಡುತ್ತಿದೆ. ಭಾರತ ದೇಶದಲ್ಲಿ ದೊಡ್ಡ ಅನ್ನದಾದ ಕ್ಷೇತ್ರ ಎನ್ನುವ ಹೆಗ್ಗಳಿಕೆ ಧರ್ಮಸ್ಥಳ ಪಡೆದುಕೊಂಡಿದೆ. ಏಷ್ಯಾದಲ್ಲೇ ಸ್ವಚ್ಛವಾದ ದೇವಾಲಯ ಎಂಬ ಬಿರುದನ್ನು ಕೂಡ ಪಡೆದುಕೊಂಡಿದೆ.

ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ದೇವರ ದರ್ಶನಕ್ಕಾಗಿ ಬರುತ್ತಾರೆ. ಪ್ರತಿದಿನ ಧರ್ಮಸ್ಥಳದಲ್ಲಿ 30,000 ದಿಂದ 40,000 ಜನ ಊಟ ಮಾಡುತ್ತಾರೆ. ಒಂದು ದಿನಕ್ಕೆ 50 ರಿಂದ 60 ಕ್ವಿಂಟಲ್ ಅಕ್ಕಿಯನ್ನು ಧರ್ಮಸ್ಥಳದಲ್ಲಿ ಬಳಸಲಾಗುತ್ತದೆ. ವರ್ಷಕ್ಕೊಮ್ಮೆ ಬರುವ ಲಕ್ಷ ದ್ವೀಪೋತ್ಸವದ ದಿನ ಒಂದು ಲಕ್ಷ ಜನರು ಆಹಾರವನ್ನು ಸ್ವೀಕರಿಸುತ್ತಾರೆ.

 

 

ಇಡೀ ಪ್ರಪಂಚವೇ ಧರ್ಮಸ್ಥಳದ ಅನ್ನಸಂತರ್ಪಣೆಯನ್ನು ಮೆಚ್ಚಿಕೊಂಡಿದೆ. ಧರ್ಮಸ್ಥಳದ ಆಹಾರ ತಯಾರಿಕೆಯ ಬಗ್ಗೆ ಡಿಸ್ಕವರಿ ಚಾನೆಲ್ ಹಾಗೂ ನ್ಯಾಷನಲ್ ಜಿಯೋಗ್ರಾಫಿ ಚಾನೆಲ್ ಇಡೀ ಪ್ರಪಂಚಕ್ಕೆ ತೋರಿಸಿವೆ. ಇಲ್ಲಿನ ಪ್ರತಿಯೊಂದು ಉಪಕರಣಗಳು ಆಧುನಿಕವಾಗಿದ್ದು ಹೊಸಹೊಸ ತಂತ್ರಜ್ಞಾನಗಳನ್ನು ಬಳಸಿ ಅಡಿಗೆ ತಯಾರು ಮಾಡುತ್ತಾರೆ. ಇಲ್ಲಿ ಬಳಸುವ ಅಕ್ಕಿ ಹಾಗೂ ತರಕಾರಿಗಳು ಆರ್ಗ್ಯಾನಿಕ್ ಆಗಿವೆ.

 

 

ಅನ್ನಪೂರ್ಣ ಭೋಜನ ಶಾಲೆ ತನ್ನ ಸ್ವಚ್ಛತೆಗೆ ವಿಶ್ವದಾದ್ಯಂತ ಹೆಸರುಗಳಿಸಿದೆ. ಧರ್ಮಸ್ಥಳಕ್ಕೆ ಎಲ್ಲಾ ವಯೋಮಾನದ ಗುರು ಕೂಡ ಬರುತ್ತಾರೆ ಕೆಲವರಿಗೆ ನೆಲದಲ್ಲಿ ಕುಳಿತು ಊಟ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಅಂತವರಿಗಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಹೊಸದೊಂದು ಭೋಜನ ಶಾಲೆಯನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದಾರೆ. ಭಕ್ತಾದಿಗಳಿಗಾಗಿ ಡೈನಿಂಗ್ ಟೇಬಲ್ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಈ ಹೊಸ ಡೈನಿಂಗ್ ಹಾಲನ್ನು ಧರ್ಮಸ್ಥಳದ ಧರ್ಮ ಅಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ರವರು ಲೋಕಾರ್ಪಣೆ ಮಾಡಿದ್ದಾರೆ. ಇಲ್ಲಿ ಎರಡು ಸಾವಿರದಿಂದ ಮೂರು ಸಾವಿರ ಭಕ್ತಾದಿಗಳು ಒಂದೇ ಬಾರಿಗೆ ಊಟ ಮಾಡಬಹುದು

Leave a comment

Your email address will not be published. Required fields are marked *