ನ್ನೇನು ಅತಿ ಶೀಘ್ರದಲ್ಲೇ ಕಲರ್ಸ್ ಕನ್ನಡ(colours Kannada) ವಾಹಿನಿಯಲ್ಲಿ ಬಹು ನಿರೀಕ್ಷಿತ ತ್ರಿಪುರ ಸುಂದರಿ (Tripura sundari)ಎನ್ನುವ ಹೆಸರಿನ ಧಾರವಾಹಿ ಒಂದು ಶುರುವಾಗಲಿದೆ. ಈ ದಾರವಾಹಿ ಬಿಗ್ ಬಾಸ್ ಸೀಸನ್ 9(bigg Boss season 9) ಮುಗಿದ ನಂತರ ಪ್ರಸಾರವಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ಬಿಗ್ ಬಾಸ್ ಸೀಸನ್ ಎಂಟರ ಖ್ಯಾತಿಯ ದಿವ್ಯ ಸುರೇಶ್(bigg Boss season 8 fame Divya Suresh) ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

 

 

ಕಳೆದ ವರ್ಷದಲ್ಲಿ ಬಿಗ್ ಬಾಸ್ ಸೀಸನ್ ಮುಗಿದಾಗ ತ್ರಿಪುರ ಸುಂದರಿ ಧಾರಾವಾಹಿ ಚಿತ್ರೀಕರಣ ನಡೆಯುತ್ತದೆ ಎನ್ನುವ ಸುದ್ದಿ ಕೇಳಿ ಬಂದಿತ್ತು ಆದರೆ ಈ ದಾರವಾಹಿ ಟಿವಿ ಪರದೆಯ ಮೇಲೆ ಮೂಡಿ ಬರಲು ಒಂದು ವರ್ಷ ಸಮಯವನ್ನು ತೆಗೆದುಕೊಂಡಿದೆ. ಕಲರ್ಸ್ ಕನ್ನಡ ವಾಹಿನಿ ಹೊಸ ರೀತಿಯ ಒಂದು ಕಥೆಯನ್ನು ಈ ಧಾರಾವಾಹಿಯ ಮೂಲಕ ತೋರಿಸಲು ಸಿದ್ಧವಾಗಿದೆ.

 

 

2023 ರ ಜನವರಿ ಎರಡರಂದು ತ್ರಿಪುರ ಸುಂದರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ಒಂದು ಹೊಸ ರೀತಿಯ ಕಥೆ ಇದು ಈ ಧಾರಾವಾಹಿಗೆ ನಾಯಕ ನಟಿಯಾಗಿ ದಿವ್ಯ ಸುರೇಶ್ ಅತಿ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನುವ ಮಾತು ಸ್ಯಾಂಡಲ್ವುಡ್ ನಲ್ಲಿ ಕೇಳಿ ಬರುತ್ತಿದೆ.

ಇಷ್ಟು ದಿನಗಳ ಕಾಲ ಹಲವಾರು ಫ್ಯಾಂಟಸಿ ಕಥೆಗಳು(fantasy story), ಕೌಟುಂಬಿಕ ಕಥೆಗಳ ಬಗ್ಗೆ ಕೇಳುತ್ತಿದ್ದ ಪ್ರೇಕ್ಷಕರು ಇದೀಗ ಗಂಧರ್ವ ಲೋಕದ ಕಥೆಯನ್ನು ನೋಡಬಹುದಾಗಿದೆ. ವಿಭಿನ್ನ ಕಥೆಯೊಂದನ್ನು ಕಲರ್ಸ್ ಕನ್ನಡ ಪ್ರೇಕ್ಷಕರ ಮುಂದೆ ಇಡುತ್ತಿದೆ. ಈ ದಾರವಾಹಿಯ ಬಗ್ಗೆ ಕಳೆದ ಒಂದು ವರ್ಷದ ಹಿಂದೆಯೇ ಮಾತನಾಡಿದರು ಈ ಧಾರಾವಾಹಿ ಈ ವರ್ಷ ಬಿಡುಗಡೆಯಾಗಲು ದಿನಗಳನ್ನು ಲೆಕ್ಕ ಹಾಕುತ್ತಿದೆ.

 

 

ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ದೊಡ್ಡ ತಾರಾಗಣವೇ ಅಭಿನಯಿಸಿದ್ದಾರೆ. ನಟ ಪ್ರಣಯ ರಾಜ ಶ್ರೀನಾಥ್ ಅವರ ಮಗ ಕಿರುತೆರೆಗೆ ತ್ರಿಪುರ ಸುಂದರಿ(actor Srinath son) ಧಾರವಾಹಿಯ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಧಾರಾವಾಹಿಯಲ್ಲಿ ಸ್ಪರ್ಶ ರೇಖಾ(sparsha Rekha) ಕೂಡ ವಿಶೇಷ ಪಾತ್ರದಲ್ಲಿ ಬರುತ್ತಿದ್ದಾರೆ. ತ್ರಿಪುರ ಸುಂದರಿ ಧಾರಾವಾಹಿಯ ನಾಯಕಿ ನಟಿಯಾಗಿ ದಿವ್ಯ ಸುರೇಶ್ ಹಾಗೂ ನಾಯಕ ನಟನಾಗಿ ನನ್ನರಸಿ ರಾದೆ (nannarasi Radhe serial)ಧಾರವಾಹಿ ಖ್ಯಾತಿಯ ಅಭಿನವ(Abhinav) ನಟಿಸುತ್ತಿದ್ದಾರೆ.

 

 

ಗಂಧರ್ವ ಲೋಕದಲ್ಲಿ ಯಾವುದೋ ಪ್ರಾಣಪಾಯ ಇರುವುದರಿಂದ ನಾಯಕನನ್ನು ತಾಯಿ ಭೂಲೋಕಕ್ಕೆ ಕಳುಹಿಸಿರುತ್ತಾರೆ. ಭೂಲೋಕದಲ್ಲಿ ಆತನನ್ನು ಹುಡುಕಲು ತ್ರಿಪುರ ಸುಂದರಿ ಎನ್ನುವ ಗಂಧರ್ವ ಕನ್ಯೆ ಭೂಲೋಕಕ್ಕೆ ಬಂದಿರುತ್ತಾರೆ. ಗಂಧರ್ವ ಕನ್ಯೆ ಭೂಲೋಕಕ್ಕೆ ಬಂದಾಗ ಯಾವ ರೀತಿ ಕಥೆ ತಿರುವುತ್ತದೆ ಎನ್ನುವುದೇ ಈ ಧಾರಾವಾಹಿಯ ಕಥೆಯಾಗಿದೆ. ಇದೀಗಾಗಲೇ ಧಾರವಾಹಿಯ ಪ್ರಮುಖ ಬಿಡುಗಡೆಯಾಗಿದ್ದು ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ರವರಿಗೆ ಕಲರ್ಸ್ ಕನ್ನಡ ತ್ರಿಪುರ ಸುಂದರಿ ಧಾರವಾಹಿಗೆ ದೊಡ್ಡ ಸಂಭಾವನೆಯನ್ನೇ(Divya Suresh get large amount for Tripura sundari serial) ನೀಡುತ್ತಿದ್ದು ಒಂದು ಕಂತಿಗೆ 60,000 ನೀಡುತ್ತಿದ್ದಾರೆ. ಅಂದರೆ ಒಂದು ಎಪಿಸೋಡ್ ನಲ್ಲಿ ನಟಿಸಲು ದಿವ್ಯ ಸುರೇಶ್ ರವರಿಗೆ 60 ಸಾವಿರ ರೂಪಾಯಿಗಳನ್ನು ಸಂಭಾವನೆ ರೂಪದಲ್ಲಿ ನೀಡುತ್ತಿದ್ದಾರೆ.

Leave a comment

Your email address will not be published. Required fields are marked *