ರವಿಚಂದ್ರನ್ ರವರು ಒಂದು ಸಂದರ್ಶನದಲ್ಲಿ ಮಾತನಾಡಿ ತಮ್ಮ ಅಕೌಂಟಿನಲ್ಲಿ ಎಷ್ಟು ದುಡ್ಡಿದೆ ಎಂಬುದನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಈ ಹಿಂದೆ ರವಿ ಚಂದ್ರನ್ ಅವರು ತಮ್ಮ ಮನೆಯನ್ನು ಕೂಡ ಸಿನಿಮಾ ಗಾಗಿ ಮಾಡಿಕೊಂಡು ಸಾಲ ಸೂಲಾ ಮಾಡಿ ಸಿನಿಮಾ ಮಾಡುತ್ತಿದ್ದರು ಸಿನಿಮಾಗಾಗಿ ತಮ್ಮ ಜೀವವನ್ನೇ ತೇಯ್ದಿದ್ದ ವೀರ ಸ್ವಾಮಿ ರವಿಚಂದ್ರನ್ ರವರು ಒಂದು ಸಂದರ್ಶನದಲ್ಲಿ ಮಾತನಾಡಿ ಎಂದು ತಮ್ಮ ಅಕೌಂಟ್ ನಲ್ಲಿ ಎಷ್ಟು ಹಣವಿದೆ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ನನ್ನ ಬಳಿ ಹಣವಿದ್ದರೆ ನಾನು ಸುಮ್ಮನೆ ಇರುವುದಿಲ್ಲ ಬೆಳಗ್ಗೆ ಎದ್ದು ಹೊಸ ಸಿನಿಮಾವನ್ನು ಶುರು ಮಾಡಿಬಿಡುತ್ತೇನೆ ಅಭಿಮಾನಿಗಳೆಲ್ಲರೂ ನೀನು ಹೊಸದಾಗಿ ಸಿನಿಮಾಗಳನ್ನು ಮಾಡುತ್ತಿಯಾ ಆದರೆ, ಅದೇ ರೀತಿ ಯಾವಾಗಲೂ ಸಿನಿಮಾ ಮಾಡುತ್ತೀಯಾ ಎಂದು ಹೇಳುತ್ತಾರೆ. ಆದರೆ ನಾನು ಹಿಂದೆ ಆ ರೀತಿ ಸಿನಿಮಾಗಳನ್ನು ಮಾಡಿದ್ದ ಕಾರಣದಿಂದಲೇ ಇಂದಿಗೂ ಕೂಡ ಆ ಸಿನಿಮಾ ರಿಲೀಸ್ ಆಗಿ 40 ವರ್ಷ ಕಳೆದರೂ ನನ್ನ ಸಿನಿಮಾದ ಹಾಡುಗಳನ್ನು ನೀವೆಲ್ಲರೂ ಕೇಳುತ್ತಿರುತ್ತೀರಿ.
ನಾನು ಪ್ರೇಮಲೋಕ ಚಿತ್ರದ ಎಕ್ಸ್ಪರಿಮೆಂಟ್ ಮಾಡಿ ಚಿತ್ರವನ್ನು ಹೊರತಂದೇ. ಈ ಚಿತ್ರವನ್ನು ನೋಡಿದ ನೀವು ಇಂದಿಗೂ ಕೂಡ ಪ್ರೇಮಲೋಕ ಚಿತ್ರದ ಹಾಡುಗಳನ್ನು ತಮ್ಮ ಕಾರಿನಲ್ಲಿ ಹಾಕಿಕೊಂಡು ಕೇಳುತ್ತಿರುತ್ತೀರಿ ಚಿತ್ರ ಬಿಡುಗಡೆಯಾಗಿ ನಲವತ್ತು ವರ್ಷ ಆಯ್ತು ಅಂತ ನೀವು ಸುಮ್ಮನಾಗಿಲ್ಲ ಬದಲಾಗಿ ಚಿತ್ರವನ್ನು ಇಷ್ಟಪಡುತ್ತಿದ್ದೀರಿ ಪ್ರೇಮಲೋಕ ಚಿತ್ರದ ಬಗ್ಗೆ ಇಡೀ ಪ್ರಪಂಚಕ್ಕೆ ಗೊತ್ತಿದೆ.
ರವಿಚಂದ್ರನ್ ಯಾವಾಗಲು ಪ್ರೇಮಲೋಕ ಚಿತ್ರದ ಬಗ್ಗೆ ಮಾತನಾಡುತ್ತಾರೆ ಎಂದು ಎಲ್ಲರೂ ಹೇಳುತ್ತಾರೆ ಹೌದು ನಾನು ಪ್ರೇಮಲೋಕ ಚಿತ್ರದ ಬಗ್ಗೆ ಮಾತನಾಡುತ್ತೇನೆ ಯಾಕೆಂದರೆ ನನ್ನ ಮೂಲದ ಬಗ್ಗೆ ನಾನು ಸಕ್ಸಸ್ ಕಂಡ ಸಿನಿಮಾಗಳ ಬಗ್ಗೆ ಮಾತನಾಡಲು ನನಗೆ ನಾಚಿಕೆ ಇಲ್ಲ ಪ್ರೇಮಲೋಕ ಚಿತ್ರ ಇಲ್ಲದೆ ರವಿಚಂದ್ರನ್ ಇಲ್ಲ ಹಾಗಾಗಿ ಆ ಚಿತ್ರದ ಬಗ್ಗೆ ಹೆಚ್ಚಾಗಿ ಮಾತನಾಡುತ್ತೇನೆ.
ಮುಂದಿನ ದಾರಿ ನನಗೆ ಗೊತ್ತಿಲ್ಲ ಆದರೆ ಹಿಂದೆ ನಡೆದು ಬಂದ ದಾರಿಯ ಮೇಲೆ ನನಗೆ ತುಂಬಾ ಪ್ರೀತಿ ಇದೆ. ನನಗೆ ಯಾರಾದರೂ ಒಂದು ರೂಪಾಯಿ ಸಹಾಯ ಮಾಡಿದ್ದರೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತೇನೆ. ಸುದೀಪ್, ದರ್ಶನ್ ,ರಾಜ್ ಕುಮಾರ್ ಎಲ್ಲರು ಕೂಡ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲದೆ ಫೋನ್ ಮಾಡಿ ಹೇಗಿದ್ದೀರಾ? ಎಂದು ಕೇಳಿದರೆ ಸಾಕು ನನಗೆ ತುಂಬಾ ಖುಷಿ ಆಗುತ್ತದೆ. ನಾನು ಯಾರ ಬಳಿಯೂ ಕೂಡ ಇಲ್ಲಿಯವರೆಗೂ ಸಹಾಯ ಕೇಳಿಲ್ಲ ಆದರೆ ಎಲ್ಲರೂ ನನ್ನನ್ನು ಹುಡುಕಿಕೊಂಡು ಬಂದು ಸಹಾಯ ಮಾಡುತ್ತಾರೆ. ಕಷ್ಟದ ಸಮಯ ಬಂದಾಗ ಎಲ್ಲರೂ ಕೂಡ ಹಣವನ್ನು ಇಟ್ಟುಕೊಂಡಿರಬೇಕು ನನ್ನ ಬಳಿಯೂ ಅಷ್ಟೇ ನನಗೆ ಎಷ್ಟು ಬೇಕು ನನ್ನ ಜೀವನಕ್ಕೆ ಎಷ್ಟು ಬೇಕು ಅಷ್ಟು ಹಣ ನನ್ನ ಬಳಿ ಇದೆ ಎಂದು ರವಿಚಂದ್ರನ್ ರವರು ಹೇಳಿದ್ದಾರೆ.