ಬಿಗ್ ಬಾಸ್ ಸೀಸನ್ 9ರಿಂದ(bigg Boss season 9) ಆರ್ಯವರ್ಧನ್ ಗುರೂಜಿ (aryavardhan guruji eliminated at mid elimination)ಮಿಡ್ ಎಲಿಮಿನೇಷನ್ ನಲ್ಲಿ ಎಲಿಮಿನೇಟ್ ಆಗಿ ನೆನ್ನೆ ಅಷ್ಟೇ ಹೊರಬಂದಿದ್ದಾರೆ. ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರದವರೆಗೂ ಬಂದು ಕೊನೆಯ ಹಂತದಲ್ಲಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಓಟಿಟಿ(bigg Boss ott) ಸೀಸನ್ ನಲ್ಲು ಕೂಡ ಆರ್ಯವರ್ಧನ್ ಗುರೂಜಿ ಸಾಕಷ್ಟು ಮನರಂಜನೆಯನ್ನು ನೀಡಿದ್ದರು.

 

 

ಬಿಗ್ ಬಾಸ್ ಸೀಸನ್ ೯ರಲ್ಲಿ ಕೂಡ ಆರ್ಯವರ್ಧನ್ ಗುರೂಜಿ ಸಾಕಷ್ಟು ಮನೋರಂಜನೆಯನ್ನು ನೀಡಿದ್ದಾರೆ. ನಂಬರ್ ಅಂದ್ರೆ ನಾನು ನಾನು ಅಂದ್ರೆ ನಂಬರ್ ಎಂದು ಆರ್ಯ ವರ್ಧನ್ ಗುರೂಜಿ ಯಾವಾಗಲು ಹೇಳುತ್ತಲೇ ಇದ್ದರು ಆರ್ಯವರ್ಧನ್ ಗುರೂಜಿ ಅವರು ಬಿಡದಿಯ ಬಿಗ್ ಬಾಸ್ ಮನೆಯಿಂದ (bigg Boss house at bidadi)ತಮ್ಮ ಮನೆಗೆ ಕಾರಿನ ಮೂಲಕ ಪ್ರಯಾಣಿಸಿ ಬಂದಿದ್ದಾರೆ. ಅದೇ ವೇಳೆ ಬಿಗ್ ಬಾಸ್ ಮನೆಯಿಂದ ತಂದಿರುವ ಸೂಟ್ಕೇಸ್ ನಲ್ಲಿ ಆರ್ಯವರ್ಧನ್ ಎಂದು ಹೆಸರನ್ನು ಬರೆದಿರುವ ಸೂಟ್ಕೇಸ್ ಎಲ್ಲರ ಗಮನವನ್ನು ಸೆಳೆದಿದೆ.

 

 

ಬಿಗ್ ಬಾಸ್ ಸೀಸನ್ 9 ಇನ್ನೇನು ಕೊನೆಯ ಹಂತದಲ್ಲಿದ್ದು ಬಿಗ್ ಬಾಸ್ ಸೀಸನ್ ೯ರ ಕೊನೆಯ ಹಂತದಲ್ಲಿ ಒಂದರ ಒಂದು ಹಿಂದೆ ಒಂದರಂತೆ ಎಲಿಮಿನೇಷನ್ಗಳು ನಡೆಯುತ್ತಲೇ ಇವೆ ಏಕೆಂದರೆ ಇದು ಬಿಗ್ ಬಾಸ್ ನ ಕೊನೆಯ ಹಂತವಾಗಿದ್ದು ಫಿನಾಲೆ ಟೈಮಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಕೇವಲ ಐದು ಸ್ಪರ್ಧಿಗಳು ಮಾತ್ರ ಇರಬೇಕು ವೀಕೆಂಡ್ ನಲ್ಲಿ ಎರಡು ಎಲಿಮಿನೇಷನ್ಗಳು ಕೂಡ ನಡೆದಿದ್ದವು ಇದೀಗ ವಾರದ ಮಧ್ಯದಲ್ಲಿ ಮಧ್ಯರಾತ್ರಿ ಕಿಚ್ಚ ಸುದೀಪ್(kiccha Sudeep) ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ರವರನ್ನು ಎಲಿಮಿನೇಟ್ ಮಾಡಿ ಹೊರಹಾಕಿದ್ದಾರೆ.

 

 

ವಾರದ ಮಧ್ಯದಲ್ಲಿ ಈ ರೀತಿ ಎಲಿಮಿನೇಷನ್ ಮಾಡಿರುವುದು ಬಿಗ್ ಬಾಸ್ ಮನೆಯ ಸ್ಪರ್ಧೆಗಳಿಗೂ ಕೂಡ ಸರ್ಪ್ರೈಸ್ ಆಗಿದೆ. ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಮನೆಯಲ್ಲಿ ಕೇವಲ ಐದು ಜನ ಮಾತ್ರ ಉಳಿಯಬೇಕು ಈಗ ಮನೆಯಲ್ಲಿ ಆರು ಜನರಿದ್ದ ಕಾರಣ ಒಬ್ಬರನ್ನೂ ಮನೆಯಿಂದ ಆಚೆ ಕಳಿಸಬೇಕಾದ ಸಂದರ್ಭ ಬಂದಿದ್ದು ಒಬ್ಬರನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಿ ಮಧ್ಯರಾತ್ರಿ ಹೊರಗೆ ಕಳಿಸಲಾಗಿದೆ.

 

 

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಆರು ಜನರಿದ್ದರು ಆದರೆ ಒಬ್ಬರ ಎಲಿಮಿನೇಷನ್ ನಿಂದ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಸಂಖ್ಯೆ 5 ಆಗಿದೆ. “ನಂಬರ್ ಅಂದ್ರೆ ನಾನು ಅಂದ್ರೆ ನಂಬರ್” ಎಂದು ಹೇಳುತ್ತಿದ್ದ ಗುರೂಜಿ ಬಿಗ್ ಬಾಸ್ ಮನೆಯಿಂದ ಹೊರಗೆ ನಡೆದಿದ್ದಾರೆ. ಆರ್ಯವರ್ಧನ್ ಗುರೂಜಿಗಳು ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದು.

 

 

ವಾರದ ಅಂತ್ಯದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು 8 ಜನರಿದ್ದು ಸುದೀಪ್ ರವರು ಮೂರು ಎಲಿಮಿನೇಷನ್ ಗಳು ನಡೆಯುತ್ತವೆ ಎಂದು ತಿಳಿಸಿದರು ಶನಿವಾರ ಅಮೂಲ್ಯ ಗೌಡ(Amulya Gowda) ಹಾಗೂ ಭಾನುವಾರ ಅರುಣ್ ಸಾಗರ್ (Arun Sagar)ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ನಡೆದಿದ್ದರು.

 

 

ಮಿಡ್ ಎಲಿಮಿನೇಷನ್ ಎಲಿಮಿನೇಷನ್ ನಲ್ಲಿ ಆರ್ಯವರ್ಧನ್ ಗುರೂಜಿ ಕೊನೆಯ ಸಮಯದಲ್ಲಿ 70000 ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ದಿವ್ಯ ಉರುಡುಗ ಹಾಗೂ ದೀಪಿಕಾ ದಾಸ್ ಇದ್ದರು ಕಳೆದ ವಾರ ಕಿಚ್ಚ ಸುದೀಪ್ ಗುರೂಜಿ ರವರಿಗೆ ಮೆಚ್ಚುಗೆಯ ಚಪ್ಪಾಳೆಯನ್ನು ತಟ್ಟಿದ್ದರು ಇವರು ಫಿನಾಲೆಗೆ ಬರುತ್ತಾರೆ ಎಂದು ಕೂಡ ಎಲ್ಲರೂ ಅಂದುಕೊಂಡಿದ್ದರು ಆದರೆ ಅದು ಸುಳ್ಳಾಗಿದ್ದು ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗಿದ್ದಾರೆ.

Leave a comment

Your email address will not be published. Required fields are marked *