ಮೊದಮೊದಲು ಕಾಮಿಡಿಯನ್ ಆಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ನಟ ಶರಣ್(Sharan) ತದನಂತರ ಕಷ್ಟಪಟ್ಟು ಇದೀಗ ಹೀರೋ ಆಗಿ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ನಟ ಶರಣ್ ಕನ್ನಡದ ಬಹುಬೇಡಿಕೆಯ ನಟನಾಗಿ ಹೊರಹಮ್ಮಿದ್ದಾರೆ. ಇವರು ಈ ಮಟ್ಟಕ್ಕೆ ಬೆಳೆಯಲು ತುಂಬಾ ಕಷ್ಟಪಟ್ಟಿದ್ದರು ಮೊದಲು ದೂರದರ್ಶನದಲ್ಲಿ ನಟಿಸುತ್ತಿದ್ದ ನಟ ಶರಣ್ ಪ್ರೇಮ ಪ್ರೇಮಾ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ತದನಂತರ ಬಹು ಬೇಡಿಕೆಯ ಹಾಗೂ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆಯನ್ನು ಪಡೆಯುವ ಹಾಸ್ಯ ನಟನಾಗಿ ಹೊರಹೊಮ್ಮಿದರು.

 

 

ನಿಮ್ಮನ್ನು ಹೀರೋ ಆಗಿ ನೋಡಬೇಕು ಎಂದು ಹೇಳಿದ ತಮ್ಮ ಮಗನ ಆಸೆಗಾಗಿ “ರಾಂಬೊ” ಚಿತ್ರದಲ್ಲಿ ನಾಯಕ ನಟನಾಗಿ ಮೊದಲಿಗೆ ನಟ ಶರಣ್ ಅಭಿನಯಿಸಿದರು ಮೊದಲ ಬಾರಿಗೆ ನಟ ಶರಣ್ ರಾಂಬೊ ಚಿತ್ರವನ್ನು ನಿರ್ಮಾಣ ಮಾಡಿ ಅಭಿನಯಿಸಿದ್ದಾರೆ. ತಮ್ಮ ಮನೆಯ ಪತ್ರಗಳನ್ನು ಅಡವಿಟ್ಟು ಚಿತ್ರಕ್ಕಾಗಿ ಹಣ ಒದಗಿಸಿದ ಶರಣ್ ಪರಿಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿತು. ರಾಂಬೊ ಚಿತ್ರ ದೊಡ್ಡ ಸಕ್ಸಸ್ ಆಗಿ ಹೊರಹೊಮ್ಮಿತ್ತು ಈ ಚಿತ್ರದಲ್ಲಿ ನಟಿ ಆಶಿಕಾ ರಂಗನಾಥ್(aashika ranganath) ನಾಯಕ ನಟಿಯಾಗಿ ನಟಿಸಿದ್ದರು.

 

 

ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಶರಣ್ ರವರಿಗೆ ಇದೀಗಾಗಲೇ 45 ವರ್ಷ ವಯಸ್ಸಾಗಿದ್ದರು ಕೂಡ ಇನ್ನು ಯುವಕನಂತೆ ಕಾಣಿಸುತ್ತಾರೆ. ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ ಹಾಗೆ ಅತ್ಯದ್ಭುತವಾಗಿ ನಟನೆಯನ್ನು ಕೂಡ ಮಾಡುತ್ತಾರೆ. ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ನೋಡಿರುವ ನಟ ಶರಣ್ ತಮ್ಮ ಕನಸಿನ ಮನೆಯನ್ನು ಬೆಂಗಳೂರಿನ ನಾಗರಬಾವಿಯಲ್ಲಿ ನಿರ್ಮಿಸಿದ್ದಾರೆ.

 

 

ನಟ ಶರಣ್ ರವರ ಮನೆಯಲ್ಲಿ ಕಿಚ್ಚನ್ ಕೂಡ ತುಂಬಾ ಸುಂದರವಾಗಿದ್ದು ಮನೆಯನ್ನು ಪ್ರವೇಶಿಸಿದಾಗ ಆಕರ್ಷಕವಾಗಿ ಕಾಣಲಿ ಎಂದು ಇಂಟೀರಿಯರ್ ಡಿಸೈನ್ ಕೂಡ ಮಾಡಿಸಿದ್ದಾರೆ. ಕಲರ್ ಫುಲ್ ರೂಮುಗಳು, ಕುಟುಂಬಕ್ಕೆ ಸರಿ ಹೊಂದುವ ಹೋಂ ಥಿಯೇಟರ್, ವ್ಯಾಯಾಮ ಮಾಡಲು ಪ್ರಶಾಂತವಾದ ರೂಮ್, ಅಚ್ಚ ಹಸಿರಿನಿಂದ ಕೂಡಿದ ನಟ ಶರಣ್ ರವರ ಮನೆಯ ಹೊರಾಂಗಣ ಎಲ್ಲವು ಸೇರಿ ಬರೋಬ್ಬರಿ ಐದು ಕೋಟಿಯಲ್ಲಿ ತಮ್ಮ ಸುಂದರವಾದ “ನಮ್ಮ ಪುಣ್ಯ” ಎನ್ನುವ ಹೆಸರಿನ ಮನೆಯನ್ನು ನಟ ಶರಣ್ ನಿರ್ಮಿಸಿದ್ದಾರೆ.

Leave a comment

Your email address will not be published. Required fields are marked *