ಖುಷಿಯಲ್ಲಿ ಸಂಭ್ರಮಿಸಿದ ಡಿಕೆ ಶಿವಕುಮಾರ್: ಗುಡ್ ನ್ಯೂಸ್ ಕೊಟ್ಟ ಐಶ್ವರ್ಯ ಅಮರ್ಥ್ಯ ದಂಪತಿಗಳು

ರಾಜಕೀಯರಂಗದಲ್ಲಿ ಇವರೇ ಪ್ರಾಬ್ಲೆಮ್ ಶೂಟರ್ಸ್. ಎಂತಹ ಸಮಸ್ಯೆ ಇರಲಿ ಅದನ್ನು ಕ್ಷಣಾರ್ಧದಲ್ಲಿಯೇ ನಿವಾರಿಸುತ್ತಿದ್ದರು. ಇವರು ಕಳೆದ ಫೆಬ್ರುವರಿಯಲ್ಲಿ ಮಗಳು ಐಶ್ವರ್ಯಾಗೆ ಹಾಗೂ ಸ್ನೇಹಿತ ಕಾಫಿಕಿಂಗ್ ಸಿದ್ದಾರ್ಥ್ ಹೆಗಡೆ ಅವರ ಪುತ್ರ ಅಮರ್ಥ್ಯ ಅವರ ಜೊತೆಗೆ ವಿವಾಹ ಮಾಡಿದ್ದರು. ಇದೀಗ ಅವರ ಅಳಿಯ ಅಮರ್ತ್ಯ ಮಾವನಿಗೆ ಸಿಹಿಸುದ್ದಿ ಒಂದನ್ನು ನೀಡಿದ್ದಾರೆ. ಅದೇನು? ಡಿಕೆ ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗುವ ಕನಸು ಕಂಡವರು.

 

 

ಇವರೊಂದಿಗೆ ಸಿದ್ದರಾಮಯ್ಯನವರು ಕೂಡಾ ಮುಖ್ಯಮಂತ್ರಿಯ ಆಕಾಂಕ್ಷಿಗಳು ಆಗಿದ್ದಾರೆ. ಇಂತಹ ತಲೆ ಬಿಸಿ ರಾಜಕೀಯ ಜಂಜಾಟದ ಮಧ್ಯೆ ಡಿಕೆ ಶಿವಕುಮಾರ್ ಅವರು ಹೊಸ ಮತ್ತು ಸಂತೋಷದ ಸುದ್ದಿಯೊಂದನ್ನು ಹೊರಹಾಕಿದ್ದಾರೆ. ಡಿಕೆ ಶಿವಕುಮಾರ್ ಅವರು ರಾಜಕೀಯ ಪ್ರಾಬ್ಲಮ್ ಗಳನ್ನು ಸಾಲ್ವ್ ಮಾಡಿ ಉತ್ತಮ ರಾಜಕಾರಣ ನಡೆಸಿದವರು ಎಂಬ ಪ್ರಖ್ಯಾತಿ ಪಡೆದವರು. ಇದೀಗ ತಮ್ಮಂತೆ ಮತ್ತೊಬ್ಬ ಅಭ್ಯರ್ಥಿಯನ್ನು ತಯಾರು ಮಾಡಿದ್ದಾರೆ. ಹೌದು. ಸ್ನೇಹಿತರೆ ದಿವಂಗತ ತಮ್ಮ ಸ್ನೇಹಿತ ಸಿದ್ಧಾರ್ಥ ಪುತ್ರ ಅಮರ್ತ್ಯ ಹೆಗ್ಡೆಯರನ್ನು ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಮಾಡಿಸುವುದರ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

 

 

ಹಿಂದೆ ಪ್ರಯತ್ನ ನಡೆಇತ್ತಾದ್ರೂ ಅಮರ್ಥ ರಿಗೆ ರಾಜಕೀಯ ಪ್ರವೇಶ ಇಷ್ಟವಿರಲಿಲ್ಲ. ಆದರೆ ಇದೀಗ ಮಗಳು ಐಶ್ವರ್ಯ ಮತ್ತು ಅಳಿಯ ಅಮರ್ತ್ಯ ಇಬ್ಬರು ರಾಜಕೀಯ ಪ್ರವೇಶ ಮಾಡಿದ್ದು ಡಿಕೆಶಿಗೆ ಅತೀವ ಸಂತೋಷ ತಂದಿದೆ. ರಾಜ್ಯದ ಐದು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಫೈನಲೈಸ್ ಮಾಡಿರುವ ಡಿಕೆಶಿ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಅಳಿಯ ಅಮರ್ಥ್ಯ ಹೆಗ್ಡೆ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

 

 

ಎಸ್ಎಂ ಕೃಷ್ಣ ಅವರ ಮೊಮ್ಮಗ ಈಗ ರಾಜಕೀಯಕ್ಕೆ ಬರುತ್ತಿರುವುದು ಸಿಹಿಸುದ್ದಿ. ತಾತನಂತೆ ರಾಜಕೀಯ ನಡೆಸಲಿ ಎಂದು ರಾಜಕೀಯದ ಹಿರಿಯರು ಶುಭ ಹಾರೈಸುತ್ತಿದ್ದಾರೆ. ತಂದೆಯ ಅಕಾಲಿಕ ನಿಧನದ ನಂತರ ವಿದೇಶದ ವ್ಯಾಸಂಗ ಪೂರ್ಣಗೊಳಿಸಿದ ಅಮರ್ಥ್ಯ ಹೆಗ್ಡೆ ಯವರು ಪೂರ್ಣವಾಗಿ ಉದ್ಯಮಿಯಾಗಿ ಮಿಂಚಿದರು. ನಂತರ ಡಿಕೆಶಿ ಅವರ ಮಗಳು ಐಶ್ವರ್ಯಳೊಂದಿಗೆ ವಿವಾಹವಾದರು. ಇದೀಗ ಗಂಡನಿಗೆ ಉದ್ಯಮದಲ್ಲಿ ಸಾಥ್ ನೀಡಿದ ಐಶ್ವರ್ಯ ಪತಿಯೊಂದಿಗೆ ರಾಜಕೀಯಕ್ಕೆ ಧುಮುಕುವುದು ಖಚಿತವಾಗಿದೆ. ತನ್ನಿಂದ ರಾಜಕೀಯ ಪಾಠ ಕಲಿತಿದ್ದ ಮಗಳು ಇದೀಗ ಪತಿಯೋಂದಿಗೆ ರಾಜಕೀಯ ರಂಗಕ್ಕೆ ಕಾಲಿಡುತ್ತಿದ್ದ ಸುದ್ದಿಗೆ ಇವರಿಗೆ ತಂದೆ ಡಿಕೆಶಿಯವರು ಶುಭಹಾರೈಸಿದ್ದಾರೆ.

Be the first to comment

Leave a Reply

Your email address will not be published.


*