ಈ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ಕಳ್ಸೋಕಾಗುತ್ತ? ರಾಣಿ ವಿರುದ್ಧ 2 ಕೋಟಿ ಮಾನನಷ್ಟ ಕೇಸ್​ ಹಾಕ್ತೀನಿ..

ನಟಿ ರಾಣಿ ರವರು ಪೋಷಕ ಕಲಾವಿದರ ಸಂಘದಲ್ಲಿ ಉಪಾಧ್ಯಕ್ಷೆ ಆಗಿದ್ದು ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗು ಪ್ರಧಾನ ಕಾರ್ಯದರ್ಶಿ ಆಡುಗೋಡು ಶ್ರೀನಿವಾಸ್ ರವರ ಮೇಲೆ ಅವರು ಹೆಣ್ಣು ಮಕ್ಕಳಿಗೆ ಅಶ್ಲೀಲ ವಿಡಿಯೋಗಳನ್ನು ಕಳಿಸುತ್ತಾರೆ ಎಂದು ಆರೋಪವನ್ನು ಮಾಡಿದ್ದರು ಹಾಗೆಯೇ ನನ್ನನ್ನು ಏಕವಚನದಲ್ಲಿ ಬಯ್ಯುತ್ತಾರೆ ಏನನ್ನಾದರೂ ಕೇಳಲು ಹೋದರೆ ಪ್ರತಿಕ್ರಿಯೆಸುವುದಿಲ್ಲ ಸಂಘದ ಹಣವನ್ನೆಲ್ಲ ಇವರು ನುಂಗಿ ನೀರು ಕುಡಿದಿದ್ದಾರೆ ಏನಾದರೂ ವಿಷಯದಲ್ಲಿ ಮೂಗು ತೂರಿಸಲು ಹೋದರೆ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ ಇಲ್ಲವಾದರೆ ರಾಜೀನಾಮೆ ಕೊಟ್ಟು ಹೋಗಿ ಎನ್ನುತ್ತಾರೆ ಎಂದೆಲ್ಲ ಆರೋಪಗಳನ್ನು ಮಾಡಿದ್ದರು.

 

 

ಇದೀಗ ಇದರ ಬಗ್ಗೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮಾತನಾಡಿ ತಮ್ಮನು ತಾವು ಸಮರ್ಥಿಸಿಕೊಂಡಿದ್ದಾರೆ ಅಧ್ಯಕ್ಷ ಡಿಂಗ್ರಿ ನಾಗರಾಜು ಈ ವಿಷಯದ ಕುರಿತು ಮಾತನಾಡಿ ನನ್ನ ಬಳಿ ಇರುವುದು ಕೀಪ್ಯಾಡ್ ಮೊಬೈಲ್ ಅದರಲ್ಲಿ ಅಶ್ಲೀಲ ವಿಡಿಯೋವನ್ನು ಹೇಗೆ ಕಳಿಸಲು ಸಾಧ್ಯ ಹೊಟ್ಟೆ ಕಿಚ್ಚಿನಿಂದ ರಾಣಿ ರವರು ಹೀಗೆಲ್ಲ ಆರೋಪವನ್ನು ಮಾಡುತ್ತಿದ್ದಾರೆ ಅವರನ್ನು ಸಂಘದಿಂದ ಕಿತ್ತು ಹಾಕಿರುವುದಕ್ಕಾಗಿ ಅವರಿಗೆ ಹೊಟ್ಟೆ ಉರಿಯಾಗಿದೆ. ನಾವು ಕೂಡ ನಮ್ಮ ಸಂಘದಲ್ಲಿ ಯಾರಾದರೂ ಹೆಣ್ಣು ಮಕ್ಕಳಿಗೆ ಅಶ್ಲೀಲವಾದ ವಿಡಿಯೋಗಳನ್ನು ಕಳಿಸಿದರೆ ಅಶ್ಲೀಲವಾಗಿ ಮಾತನಾಡಿದರೆ ಅವರನ್ನು ಸಂಘದಿಂದ ಕಿತ್ತು ಹಾಕುತ್ತೇವೆ ಹಾಗಾಗಿ ನಟಿ ರಾಣಿ ಇದರ ದುರುಪಯೋಗವನ್ನು ಪಡಿಸಿಕೊಳ್ಳುತ್ತಿದ್ದಾರೆ.

 

 

ಅವರು ಏನು ಬೇಕಾದರೂ ಮಾತನಾಡಿಕೊಳ್ಳಲಿ ನಾನದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ನಾನು ಕೋರ್ಟಿನಲ್ಲೇ ಎಲ್ಲದಕ್ಕೂ ಉತ್ತರವನ್ನು ನೀಡುತ್ತೇನೆ. ನಾನು ಈಗಾಗಲೇ ಸಾವಿರಾರು ನಾಟಕಗಳಲ್ಲಿ ನಟಿಸಿದ್ದೇನೆ ನಾನು ಐದು ವರ್ಷದವನಿದ್ದಾಗಲೇ ಬಣ್ಣ ಹಚ್ಚಿದ್ದು, ಇದೀಗ ನನಗೆ 75 ವರ್ಷ ಕಳೆದ 70 ವರ್ಷಗಳಿಂದ ನಾನು ಚಿತ್ರರಂಗದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಯಾವುದಾದರೂ ನಾಟಕದ ಕಂಪನಿ ಹಾಗೂ ಚಿತ್ರಗಳಲ್ಲಿ ನಾನು ಅಸಭ್ಯವಾಗಿ ನಡೆದುಕೊಂಡಿದ್ದೇನೆ ಎಂದು ಯಾರಾದರೂ ಹೇಳಿದರೆ ನಾನು ನೀವು ಹೇಳಿದ ಹಾಗೂ ರಾಣಿ ರವರ ಆರೋಪಕ್ಕೆ ಬದ್ಧನಾಗಿರುತ್ತೇನೆ ಎಂದರು.

 

 

ನಾಳೆ ನಮ್ಮ ಪೋಷಕ ಕಲಾವಿದರ ಸಂಘದಲ್ಲಿ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಈ ಕಾರ್ಯಕ್ರಮದಲ್ಲಿ ನಟರಾಗಿದ್ದು ಅವರಿಗೆ 60 ರಿಂದ 75 ವರ್ಷ ವಯಸ್ಸಾಗಿದ್ದರೆ ಹಾಗೂ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 30 ರಿಂದ 45 ವರ್ಷವಾಗಿದ್ದರೆ ಅವರಿಗೆ ಪೋಷಕ ಕಲಾವಿದರ ಸಂಘದಿಂದ ಒಂದು ಬಿರುದನ್ನು ನೀಡುತ್ತೇವೆ ಈ ಕಾರ್ಯಕ್ರಮವು ಪ್ರತಿ ವರ್ಷವೂ ಕೂಡ ನಡೆದುಕೊಂಡು ಬಂದಿದೆ. ಈ ಕಾರ್ಯಕ್ರಮದಲ್ಲಿ ಅವರಿಗೆಲ್ಲ ಸನ್ಮಾನವನ್ನು ಮಾಡಿ ಕ್ಯಾಶ್ ಅನ್ನು ಕೂಡ ನೀಡುತ್ತೇವೆ. ಇದು ಈ ಪೋಷಕ ಕಲಾವಿದರ ಸಂಘದ ಪದ್ಧತಿಯಾಗಿದ್ದು ಹಿಂದಿನಿಂದಲೂ ಕೂಡ ನಡೆದುಕೊಂಡು ಬಂದಿದೆ.

ಈ ಪೋಷಕ ಕಲಾವಿದರ ಸಂಗವನ್ನು ನಾನೇ ಕಟ್ಟಿ ನಾನೇ ಮುನ್ನಡೆಸಿಕೊಂಡು ಹೋಗುತ್ತಿದ್ದೇನೆ. ಇದೀಗ ನನ್ನ ಸಂಗವನ್ನು ನಾನು ಯಾಕೆ ಹಾಳು ಮಾಡಲಿ ಹಾಗೆಯೇ ಈ ಸಂಘದ ದುಡ್ಡು ತಿಂದಿದ್ದೇನೆ ಎಂದು ಕೂಡ ಎಲ್ಲರೂ ಆರೋಪ ಮಾಡುತ್ತಿದ್ದಾರೆ. ನಾನು ಯಾಕೆ ಹೀಗೆ ಮಾಡಲಿ ಹಲವು ವರ್ಷಗಳಿಂದ ಈ ಸಂಘದಲ್ಲೇ ಇದ್ದೆ ಇಷ್ಟು ವರ್ಷಗಳ ಕಾಲ ಇಲ್ಲದ ಹಾರೋಪ ಈಗ್ಯಾಕೆ ಬಂತು?

 

 

ರಾಣಿರವರು ಮುಂದೆ ಚುನಾವಣೆಯಲ್ಲಿ ನಿಂತು ಈ ಸಂಘಕ್ಕೆ ಮತ್ತೆ ಅಧ್ಯಕ್ಷರಾಗಿ ಬರುತ್ತೇನೆ ಎಂದು ಹೇಳಿದ್ದಾರೆ. ಆದರೆ ಅವರು ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ ಇಲ್ಲಿರುವವರೆಲ್ಲರೂ ನನಗೆ ಸಪೋರ್ಟ್ ಮಾಡುತ್ತಿದ್ದಾರೆ ಯಾರಾದರೂ ನಮ್ಮ ಸಂಘಕ್ಕೆ ಎರಡು ಕೋಟಿ ಎಫ್ ಡಿ ಅದರ ಬಡ್ಡಿ ಹಣದಿಂದ ನಾನು ನಮ್ಮ ಪೋಷಕ ಕಲಾವಿದ ಸಂಘದಲ್ಲಿರುವ ವಯಸ್ಸಾದರುವುದರಿಂದ ಪೆನ್ಷನ್ ನೀಡುವ ಸ್ಕೀಮನ್ನು ಕೂಡ ಮಾಡಬೇಕು ಎಂದುಕೊಂಡಿದ್ದೇನೆ.

 

 

ರಾಣಿ ರವರನ್ನು ಪೋಷಕ ಕಲಾವಿದ ಸಂಘದಿಂದ ಕಿತ್ತು ಹಾಕಿದ್ದಕ್ಕೆ ಹೊಟ್ಟೆ ಉರಿಯಿಂದ ಅವರು ಹೀಗೆಲ್ಲ ಮಾಡುತ್ತಿದ್ದಾರೆ ನಾವು ಒಂದು ಕಡೆ ಫಂಕ್ಷನ್ ಮಾಡಿದರೆ ಅವರು ಬೇರೆ ಕಡೆ ಬೇರೆ ಜನರನ್ನು ಸೇರಿಸಿಕೊಂಡು ಹಲವು ಸಮಾರಂಭಗಳನ್ನು ಮಾಡುತ್ತಾರೆ ಇದರಿಂದ ಸಂಘದ ಹೆಸರು ಕೂಡ ಕೆಡುತ್ತಿದೆ ಹೀಗೆ ಮಾಡಬೇಡ ಎಂದು ಹೇಳಿದರು ಕೂಡ ಅವರು ಕೇಳುವುದಿಲ್ಲ ಅವರು ಏನು ಬೇಕಾದರೂ ಮಾಡಿಕೊಳ್ಳಲಿ ನಾನು ಈಗ ಅವರ ಮೇಲೆ ಮಾನದಷ್ಟ ಮೊಕದ್ದಮೆ ಹೂಡುತ್ತೇನೆ ಅವರು ಕೋರ್ಟಿನಲ್ಲಿ ಬಂದು ಮಾತನಾಡಲಿ ಎಂದು ಡಿಂಗ್ರಿ ನಾಗರಾಜ್ ಹೇಳಿದರು

Be the first to comment

Leave a Reply

Your email address will not be published.


*