ನಟಿ ರಚಿತಾ ರಾಮ್ ಚಂದನವನದಲ್ಲಿ ತಮ್ಮ ಗ್ಲಾಮರಸ್ ಬ್ಯೂಟಿಯ ಮೂಲಕ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾ ಗಳನ್ನು ಒಪ್ಪಿಕೊಂಡು ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ನಟಿ ರಚಿತಾ ರಾಮ್ ತಮ್ಮ ಡಿಂಪಲ್ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಾಗೆಯೇ ಡಿಂಪಲ್ ಕ್ವೀನ್ ರಚಿತಾ ರಾಮ್ ಎಂದೇ ಕರೆಸಿಕೊಳ್ಳುತ್ತಾರೆ.
ನಟಿ ರಚಿತಾ ರಾಮ್ ಚಂದನವನದ ಜೊತೆಗೆ ಕಿರುತೆರೆಯಲ್ಲೂ ಕೂಡ ಸಕ್ರಿಯರಾಗಿದ್ದಾರೆ. ಇದೀಗ ನಟಿ ರಚಿತಾ ರಾಮ್ ಡಿ ಬಾಸ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಕ್ರಾಂತಿ ಸಿನಿಮಾದ ಪ್ರಮೋಷನ್ ನಲ್ಲಿ ರಚಿತಾ ರಾಮ್ ಬಿಜಿಯಾಗಿದ್ದಾರೆ. ನಟಿ ರಚಿತಾ ರಾಮ್ ಮದುವೆಯಾಗುತ್ತಿದ್ದಾರೆ ಎನ್ನುವ ವಿಚಾರ ಚಂದನವನದಲ್ಲಿ ಸದ್ದು ಮಾಡುತ್ತಿದೆ.
30 ವರ್ಷ ವಯಸ್ಸಾಗಿದ್ದು ಅವರು ಯಾವಾಗ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಕೂಡ ಪ್ರಶ್ನಿಸುತ್ತಿದ್ದಾರೆ. 30 ವರ್ಷ ವಯಸ್ಸಾಗಿದ್ದರು ರಚಿತಾ ರಾಮ್ ಇನ್ನೂ ಯಂಗ್ ಆಗಿ ಕಾಣಿಸುತ್ತಾರೆ. ನಟಿ ರಚಿತಾ ರಾಮ್ ರವರಿಗೆ ಮದುವೆ ಮಾಡಲು ಅವರ ಪೋಷಕರು ನಿರ್ಧರಿಸಿದ್ದಾರೆ. ರಚಿತಾ ರಾಮ್ ರವರ ಪೋಷಕರು ತಮ್ಮ ಮಗಳಿಗಾಗಿ ಹುಡುಗನನ್ನು ಹುಡುಕುವ ಬಿಜಿಯಲ್ಲಿದ್ದಾರೆ.
ರಚಿತಾ ರಾಮ್ ಕನ್ನಡದಲ್ಲಿ ಟಾಪ್ ನಟಿಯಾಗಿದ್ದು ಇಂದಿಗೂ ಅವರ ಬೇಡಿಕೆ ಚಿತ್ರರಂಗದಲ್ಲಿ ಕಮ್ಮಿಯಾಗಿಲ್ಲ ಹಾಗಾಗಿ ಅಭಿಮಾನಿಗಳು ನೀವು ಯಾವಾಗ ಮದುವೆ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಅದಕ್ಕೇ ರಚಿತಾ ರಾಮ್ ಉತ್ತರಿಸಿ ನಾನು ಗೌಡರ ಕುಟುಂಬಕ್ಕೆ ಸೇರಿದವಳು. ಗೌಡರ ಹುಡುಗನನ್ನೆ ಮದುವೆಯಾಗುತ್ತೇನೆ ಎಂದು ಹೇಳಿದ್ದರು ಇದೀಗ ಅವರ ಪೋಷಕರ ಒತ್ತಾಯದ ಮೇರೆಗೆ ನಟಿ ರಚಿತಾ ರಾಮ್ ಮದುವೆಯಾಗಲು ಒಪ್ಪಿಕೊಂಡಿದ್ದಾರೆ.
ನಟಿ ರಚಿತಾ ರಾಮ್ ರವರಿಗೆ ಫಾರಿನ್ ಇಂದ ಒಂದು ಸಂಬಂಧ ಬಂದಿದ್ದು ಆ ಹುಡುಗ ದೊಡ್ಡ ಉದ್ಯಮಿಯಾಗಿದ್ದಾರೆ. ಈ ಉದ್ಯಮಿಯೊಡನೆ ರಚಿತಾ ರಾಮ್ ರವರ ಮದುವೆ ಮಾಡಬೇಕು ಎಂದು ಅವರ ಪೋಷಕರು ಯೋಚಿಸುತ್ತಿದ್ದಾರೆ. ಚಂದನವನದ ಖ್ಯಾತ ನಟಿ ರಚಿತಾ ರಾಮ್ ಶೀಘ್ರದಲ್ಲೇ ಆಸೆಮಣೆ ಏರುತ್ತಾರೆ ಎನ್ನುವ ವಿಚಾರ ಕೇಳಿ ಬರುತ್ತಿದೆ. ಸದ್ಯಕ್ಕೆ ನಟಿ ರಚಿತಾ ರಾಮ್ ರವರ ಮದುವೆಯ ವಿಚಾರ ಸಿಕ್ಕಾಪಟ್ಟೆ ವೈರಲಾಗುತ್ತಿದೆ.