ಅನುಶ್ರೀ ನನಗೆ ವಯಸ್ಸಾಗಿದೆ ಬೇಗ ಮದುವೆ ಆಗ್ಬೇಕು ಎಂದು ಮದುವೆಯಾಗದ ಅನುಶ್ರೀಗೆ ಟಾಂಗ್ ಕೊಟ್ಟ ಅದಿತಿ ಪ್ರಭುದೇವ

ದಿಲ್ ಪಸಂದ್ ಚಿತ್ರದ ಪ್ರೀ ರಿಲೀಫ್ ಇವೆಂಟ್ ನಲ್ಲಿ ಹಾಜರಿದ್ದ ಅದಿತಿ ಪ್ರಭುದೇವರವರು ದಿಲ್ ಪಸಂದ್ ಚಿತ್ರದ ಬಗ್ಗೆ ಮಾತನಾಡಿದರು.
ನನ್ನ ಫಸ್ಟ್ ಸಿನಿಮಾದ ನಿರ್ದೇಶಕರು ಹಾಗೂ ನನ್ನ ಮೊದಲ ಸಿನಿಮಾದ ಹೀರೋ ಇಲ್ಲೇ ಇದ್ದಾರೆ. ಹಾಗೂ ಈ ಚಿತ್ರದ ಪ್ರೊಡ್ಯೂಸರ್ ತರುಣ್ ಸರ್ ಈ ಚಿತ್ರದಲ್ಲಿ ನನ್ನ ಜೊತೆ ಅಭಿನಯಿಸಿದ ಕೋ ಸ್ಟಾರ್ ಮೇಘ ಶೆಟ್ಟಿ ಹಾಗೂ ರಚನಾ ರವರು ಕೂಡ ಇಲ್ಲೇ ಇದ್ದಾರೆ. ಅದೇ ಹಳೆ ಅಂಕರ್ ಅನುಶ್ರೀರವರು ಕೂಡ ಇಲ್ಲೇ ಇದ್ದಾರೆ ಎಂದು ನಗುತ್ತಾ ಹೇಳಿದರು.

 

 

ಇದಕ್ಕೆ ಮಾತನಾಡಿದ ಅನುಶ್ರೀರವರು ಅಷ್ಟು ಬ್ಯುಸಿ ಷೆಡ್ಯೂಲ್ ನಲ್ಲಿ ಕೂಡ ನೀವು ಇಲ್ಲಿಗೆ ಬಂದಿರುವುದೇ ನಮ್ಮ ಅದೃಷ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದ್ದಾರೆ. ಅದಿತಿ ಪ್ರಭುದೇವರು ದಿಲ್ ಪಸಂದ್ ಚಿತ್ರದ ಬಗ್ಗೆ ಮಾತನಾಡಿ ದಿಲ್ ಪಸಂದ್ ಚಿತ್ರದ ಎಲ್ಲರಿಗೂ ಶುಭಾಶಯಗಳು ಈ ಸಿನಿಮಾ ಸಕ್ಸಸ್ ಆಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ದಿಲ್ ಪಸಂದ್ ಚಿತ್ರದ ಟ್ರೈಲರ್ ನನಗೆ ತುಂಬಾ ಇಷ್ಟವಾಯಿತು. ಅದರಲ್ಲಿ ನೀನು ಸೋತರೆ ನಿಮ್ಮ ಅಪ್ಪ ಅಮ್ಮ ಸೋತ ಹಾಗೆ ಎನ್ನುವ ಡೈಲಾಗ್ ಕೂಡ ನನಗೆ ತುಂಬಾ ಇಡಿಸಿತು ಅದು ನಿಜ ಮಕ್ಕಳು ಸೋತರೆ ನಿಜವಾಗಿಯೂ ತಂದೆ ತಾಯಿ ಸೋತ ಹಾಗೇನೇ ಪ್ರೊಡ್ಯೂಸರ್ ಸುಮನ್ ಸರ್ ಗೆ ಈ ಚಿತ್ರಕ್ಕೆ ಆಲ್ ದ ಬೆಸ್ಟ್ ಹೇಳುತ್ತೇನೆ ಒಳ್ಳೆಯದಾಗಲಿ ಎಂದರು.

ನನ್ನ ಮೊದಲನೇ ಚಿತ್ರದ ನಿರ್ದೇಶಕರು ತೇಜಸ್ ಸರ್ ನಿಮಗೂ ಕೂಡ ಆಲ್ ದ ಬೆಸ್ಟ್ ನಾನು ನಿಮಗೋಸ್ಕರನೇ ಈವೆಂಟಿಗೆ ಬಂದಿದ್ದು ಎಂದರು. ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲರಿಗೂ ಈ ಚಿತ್ರದ ತಂಡದವರಿಗೆ ಶುಭವಾಗಲಿ ಎಂದು ಹಾರೈಸಿದರು ನಂತರ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ನೀವ್ ಯಾವಾಗ್ಲು ಡಾರ್ಲಿಂಗ್ ಎಂದು ಹೇಳಿದರು ಹಾಗೂ ತುಂಬಾ ಬ್ಯೂಟಿಫುಲ್ ಆದ ಮೇಘ ಶೆಟ್ಟಿ ಅವರೇ ನಿಶ್ವಿಕಾ ನಾಯ್ಡುಗು ಕೂಡ ಆಲ್ ದ ಬೆಸ್ಟ್ ಎಂದು ಅವರನ್ನು ಹೊಗಳಿದರು.

 

ದಿಲ್ ಪಸಂದ್ ಎಂದರೇ ನನಗೆ ತುಂಬಾ ಇಷ್ಟವಾದ ಸ್ವೀಟ್ ಹಾಗಂತ ಸ್ವೀಟ್ ಅನ್ನು ವೇದಿಕೆ ಮೇಲೆ ತರಿಸ ಬೇಡಿ ಅನುಶ್ರೀರವರೇ ಎಂದರು. ಹೀಗೆ ಹೇಳಿದ ನಂತರ ಆಂಕರ್ ಅನುಶ್ರೀರವರು ಮಾತನಾಡಿ ನಾವು ನಿಮಗೆ ಸ್ವೀಟ್ ನೀಡಬೇಕಿತ್ತು, ಆದರೆ ನೀವು ಇಡೀ ಚಿತ್ರತಂಡಕ್ಕೆ ಸ್ವೀಟ್ ನೀಡಿದ್ದೀರಿ ಎಂದರು. ನೀವು ನಿಮ್ಮ ಮದುವೆಯ ವಿಷಯವನ್ನು ಹಂಚಿಕೊಂಡು ಎಷ್ಟು ಹುಡುಗರ ಹಾರ್ಟನ್ನು ಬ್ರೇಕ್ ಮಾಡಿ ಬಿಟ್ಟಿದ್ದೀರಾ ಇಷ್ಟು ಬೇಗ ಮದುವೆಯಾಗುತ್ತಿದ್ದೀರಾ ಎಂದ ಅನುಶ್ರೀ ಗೆ ಅದಿತಿ ಪ್ರಭುದೇವರವರು ಹಾಗಂತ ಎಲ್ಲರನ್ನು ಮದುವೆಯಾಗಲು ಸಾಧ್ಯವೇ?

ಹಾಗೇನಿಲ್ಲ ಅನುಶ್ರೀ ನನಗೆ ಈಗಾಗಲೇ ವಯಸ್ಸಾಗಿದೆ ಎಂದು ಅನುಶ್ರೀಗೆ ಟಾಂಗ್ ಕೊಟ್ಟರು. ನನಗೆ ವಯಸ್ಸಾಗಿದೆ ಎಂದು ಹೇಳಿದ್ದನ್ನು ನಾಳೆ ಎಲ್ಲರು ಯೂಟ್ಯೂಬ್ ತಂಬ್ ನೇಲ್ ನಲ್ಲಿ ಹಾಕಿಕೊಂಡು ರುಬ್ಬುತ್ತಾರೆ ಎಂದು ಅದಿತಿ ಪ್ರಭುದೇವರವರು ಹೇಳಿದರು. ಅದಿತಿ ಪ್ರಭುದೇವರವರು ದಿಲ್ ಪಸಂದ್ ಫ್ರೀ ರಿಲೀಸ್ ಇವೆಂಟ್ ನಲ್ಲಿ ಮಾತನಾಡಿದಾಗ ಸ್ಟೇಜ್ ಮೇಲೆ ದಯವಿಟ್ಟು ಎಲ್ಲರೂ ನನ್ನ ಮದುವೆಗೆ ಬನ್ನಿ ಎಂದು ಎಲ್ಲರಿಗು ಮದುವೆಗೆ ಆಮಂತ್ರಣ ನೀಡಿದರು.

 

 

ಅದಿತಿ ಪ್ರಭುದೇವರರು ಸ್ಯಾಂಡಲ್ವುಡ್ ನ ಬಹು ಬೇಡಿಕೆಯ ನಟಿಯಾಗಿದ್ದು ಸ್ಯಾಂಡಲ್ವುಡ್ನ ಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇದೀಗ ಅದಿತಿ ಪ್ರಭುದೇವರವರು ಯಶಸ್ ಎನ್ನುವ ಉದ್ಯಮಿಯೊಬ್ಬರನ್ನು ವಿವಾಹವಾಗುತ್ತಿದ್ದು ಈ ಸುದ್ದಿಯು ಕರ್ನಾಟಕದ ಹಾಗೂ ಅದಿತಿ ಪ್ರಭುದೇವರ ಫ್ಯಾನ್ಗಳ ಹಾರ್ಟ್ ಬ್ರೇಕ್ ಮಾಡಿಬಿಟ್ಟಿದೆ. ಸ್ಯಾಂಡಲ್ವುಡ್ ನ ಕ್ರಶ್ ಎಂದೇ ಕರೆಸಿಕೊಳ್ಳುತ್ತಿದ್ದ ಅದಿತಿ ಪ್ರಭುದೇವರವರು ತಮ್ಮ ಮದುವೆಯ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಅನ್ನು ನೀಡಿದ್ದಾರೆ.

Be the first to comment

Leave a Reply

Your email address will not be published.


*