ನೆನ್ನೆ ಅಷ್ಟೇ ನಟ ದಿಗಂತ್ ಐಂದ್ರಿತಾ ರೈ ಹಾಗೂ ಹಿರಿಯ ನಟ ಅನಂತನಾಗ್ ಮುಂತಾದ ಕಲಾವಿದರ ನಟನೆಯಲ್ಲಿ ತಿಮ್ಮಯ್ಯ ಅಂಡ್ ತಿಮ್ಮಯ್ಯ(timayya and timayya) ಎನ್ನುವ ಸಿನಿಮಾ ಒಂದು ಮೂಡಿ ಬಂದಿದೆ. ಈ ಸಿನಿಮವು ಚಲನಚಿತ್ರ ಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನು ಕಂಡಿದ್ದು ಹಲವಾರು ವರ್ಷಗಳ ನಂತರ ನಟ ದಿಗಂತ್ ಹಾಗೂ ಐಂದ್ರಿತಾ ರೈ ರವರ ಜೋಡಿಯನ್ನು ತೆರೆಯ ಮೇಲೆ ಕಂಡು ಅವರ ಅಭಿಮಾನಿಗಳು ಕೂಡ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದ ಹಿನ್ನೆಲೆಯಲ್ಲಿ ನಟ ದಿಗಂತ ಹಲವಾರು ಸಂದರ್ಶನಗಳಲ್ಲಿ ಮಾತನಾಡಿದರು ಹಾಗೆಯೇ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರ ರಿಲೀಸ್ ಆದ ನಂತರ ನಟ ದಿಗಂತ ಹಾಗು ಐಂದ್ರಿತಾ ರೈ ರವರಿಗೆ ಸಂದರ್ಶನ ಒಂದನ್ನು ಮಾಡಲಾಗಿತ್ತು ಆ ಸಂದರ್ಶನದಲ್ಲಿ ನಿರೂಪಕರು ನೀವಿಬ್ಬರೂ ಪೆಟ್(pet lover) ಗಳನ್ನು ಅಷ್ಟು ಇಷ್ಟಪಡುತ್ತೀರಿ ಮುದ್ದು ಮಾಡುತ್ತೀರಿ ಆದರೆ, ಇಲ್ಲಿಯವರೆಗೂ ನಿಮಗೆ ಒಂದು ಮಗುವಿಗೆ ಮುದ್ದು ಮಾಡಬೇಕು ಅಂತ ಅನಿಸಿಲ್ವಾ ಎಂದು ಕೇಳಿದರು ಇದಕ್ಕೆ ಉತ್ತರಿಸಿದ ನಟ ದಿಗಂತ ಸದ್ಯಕ್ಕೆ ಅನ್ಸಲ್ಲ ಎಂದು ಹೇಳಿ ನಟ ದಿಗಂತ್ (Diganth)ಹಾಗೂ ಐಂದ್ರಿತಾ ರೈ(a/Aindrita re) ರವರು ಮುಗುಳ್ನಕ್ಕಿದ್ದಾರೆ.
ನಟ ದಿಗಂತ್ ಇತ್ತೀಚಿಗಷ್ಟೇ ರಿಲೀಸ್ ಆದ ಗಾಳಿಪಟ ಟು(gaalipata 2) ಚಿತ್ರದ ಬಗ್ಗೆ ಕೂಡ ಮಾತನಾಡಿ ಗಾಳಿಪಟ ಕೂಡ ಒಂದು ಬಹು ನಿರೀಕ್ಷೆಯ ಸಿನಿಮಾವಾಗಿದ್ದು ಆ ಸಿನಿಮಾದಲ್ಲಿ ತುಂಬಾ ಕಾಮಿಡಿ ಇದೆ. ಹಾಗೆಯೇ ಭಾವನಾತ್ಮಕವಾಗಿ ಕೂಡ ಇದ್ದು ಅದು ತುಂಬಾ ಸುಂದರವಾಗಿ ಮೂಡಿಬಂದಿದೆ. ಗಾಳಿಪಟ ಟು ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್(golden Star Ganesh) ರವರ ಅಭಿನಯ ಕೂಡ ಚೆನ್ನಾಗಿದ್ದು ಅರ್ಜುನ್ ಜನ್ಯ(Arjun janiya) ರವರ ಮ್ಯೂಸಿಕ್ ಡೈರೆಕ್ಷನ್ ಕೂಡ ಸಕತ್ತಾಗಿದೆ ಅದರ ಜೊತೆಗೆ ನಟಿ ಶರ್ಮಿಳಾ ಮಾಂಡ್ರೆಯರವರು(Sharmila mandre) ಸಿನಿಮಾದಲ್ಲಿ ಕಮಾಲ್ ಮಾಡಿದ್ದಾರೆ.
ಗಾಳಿಪಟ ಟು ಚಿತ್ರದಲ್ಲಿ ಅನಂತನಾಗ್(Ananth nag) ಸರ್ ಕೂಡ ಇದ್ದು ಅವರು ಗಾಳಿಪಟ ಭಾಗ ಒಂದರಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಗಾಳಿಪಟ ಭಾಗ 2 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಗಾಳಿಪಟ 2 ಚಿತ್ರಕ್ಕೆ ಜನರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಗಾಳಿಪಟ ಟು ಚಿತ್ರದಲ್ಲಿ ನನ್ನ ಅಗೋರಿ ಪಾತ್ರವನ್ನು ಜನರೆಲ್ಲರೂ ಇಷ್ಟಪಡುತ್ತಿದ್ದಾರೆ ಎಂದಿದ್ದಾರೆ.
ಹಾಗೆಯೇ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದ ಬಗ್ಗೆ ಕೂಡ ಮಾತನಾಡಿದ ನಟ ದಿಗಂತ್ ಕಳೆದ ಬಾರಿ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಎನ್ನುವ ಸಿನಿಮಾವನ್ನು ನಾನು ಹಾಗೂ ಐಂದ್ರಿತಾ ರೇ ಕನ್ನಡತಿ ಧಾರವಾಹಿ ಖ್ಯಾತಿಯ ರಂಜನಿ ರಾಘವನ್(ranjani Raghavan) ಅವರ ಜೊತೆಗೂಡಿ ಮಾಡಿದ್ದೇವೆ ಇದು ಒಂದು ಲೋ ಬಜೆಟ್ ಸಿನಿಮಾ ವಾಗಿದ್ದು ಒಂದು ಉತ್ತಮ ಕಥೆಯನ್ನು ಹೊಂದಿದೆ ಇದರ ಕಥೆಯನ್ನು ಯೋಗರಾಜ್ ಭಟ್(yograj Bhatt) ರವರು ಬರೆದಿದ್ದರು ಆ ಸಿನಿಮಾ ಕೂಡ ಚೆನ್ನಾಗಿ ಮೂಡಿ ಬಂದಿತ್ತು.
ಇದೀಗ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರವು ಕೂಡ ಜನರಿಗೆ ಮೆಚ್ಚುಗೆಯಾಗುತ್ತಿದ್ದು ನಮ್ಮ ಕೈಲಾದಷ್ಟು ಪ್ರಮೋಷನ್ ಮಾಡಿದ್ದೇವೆ. ಈ ಸಿನಿಮಾದ ಕಥೆ ತುಂಬಾ ಚೆನ್ನಾಗಿದ್ದು ಉತ್ತಮ ಜಾನರಿನಲ್ಲಿ ಮೂಡಿ ಬಂದಿದೆ. ಹಾಗಾಗಿ ಜನರು ಕೂಡ ಇದನ್ನು ಇಷ್ಟಪಡುತ್ತಿದ್ದಾರೆ. ಇತ್ತೀಚಿಗಷ್ಟೇ ನನ್ನ ಗೆಳೆಯ ಸತೀಶ್ ನೀನಾಸಂ(Satish ninasam) ಕೂಡ ಈ ಚಿತ್ರದ ಬಗ್ಗೆ ಮಾತನಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಮುಂದೆ ಅಭಿಮಾನಿಗಳು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಹೇಳಿದ್ದಾರೆ.