ನಟ ಡಾಲಿ ಧನಂಜಯ್(dolly Dhananjay) ತಮ್ಮ ಜಮಾಲಿ ಗುಡ್ಡ(Jamali gudda) ಚಿತ್ರದ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿ ಅದಿತಿ ಪ್ರಭುದೇವರ(Aditi Prabhu Deva) ಜೊತೆ ನಾನು ಜಮಾಲಿ ಗುಡ್ಡದಲ್ಲಿ ಮೊದಲಿಗೆ ನಟಿಸಿದ್ದು ಚಿತ್ರದ ಶೂಟಿಂಗ್ ಮುಗಿಯುತ್ತಿದ್ದಂತೆ ಅಧಿತಿರವರು ಮದುವೆಯಾದರು ಎಂದು ನಟ ಡಾಲಿ ಧನಂಜಯ್ ತಮ್ಮ ಹೊಸ ಚಿತ್ರ ಜಮಾಲಿ ಗುಡ್ಡದ ಬಗ್ಗೆ ಮಾತನಾಡಿದರು ಈ ವೇಳೆ ನಿಮ್ಮ ಮದುವೆ ಯಾವಾಗ ಸರ್ ಎಂದು ಸಂದರ್ಶಕರು ಕೇಳಿದಾಗ ಎಲ್ಲಾ ಕಡೆ ಇದೇ ಪ್ರಶ್ನೆಯನ್ನು ಕೇಳಿ ಕೇಳಿ ಟಾರ್ಚರ್ ನೀಡುತ್ತಿದ್ದಾರೆ.

 

 

ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ರವರ ಎಂಗೇಜ್ಮೆಂಟ್(Vashishtha Simha haripriya engagement) ಆದ ನಂತರ ನನ್ನನ್ನು ಯಾವ ಸಂದರ್ಶನಕ್ಕೆ ಹೋದರು ಕೂಡ ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ. ನನ್ನ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ನೀವ್ಯಾರು ಕೇಳಬೇಡಿ ಏಕೆಂದರೆ ವಸಿಷ್ಟ ಸಿಂಹ ಹರಿಪ್ರಿಯಾರನ್ನು ಮದುವೆಯಾಗುತ್ತಿದ್ದಾನೆ ನಾನು ಯಾರನ್ನು ಮದುವೆಯಾಗಲಿ ಎಂದು ನನಗೆ ತುಂಬಾ ನೋವಾಗುತ್ತದೆ ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ.

 

 

ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ರವರ ಮದುವೆಯ ವಿಚಾರ ನಿಮಗೂ ಕೂಡ ಗೊತ್ತಿತ್ತ ಸರ್, ಯಾಕೆಂದರೆ ವಸಿಷ್ಟ ಸಿಂಹ ನಿಮಗೆ ಗೆಳೆಯನಾಗಿದ್ದಾನೆ ಎಂಬುದು ಎಲ್ಲರಿಗೂ ಕೂಡ ಗೊತ್ತಿದೆ ಹಾಗಾಗಿ ಅವರಿಬ್ಬರ ಲವ್ ವಿಚಾರ ನಿಮಗೂ ಕೂಡ ಗೊತ್ತಿತ್ತಾ ಎಂದು ಸಂದರ್ಶಕರು ಡಾಲಿ ಧನಂಜಯ್ ರವರನ್ನು ಪ್ರಶ್ನಿಸಿದಾಗ ಡಾಲಿ ಧನಂಜಯ ಅದಕ್ಕೆ ಜೋರಾಗಿ ನಕ್ಕು ನನಗೆ ಖಂಡಿತವಾಗಿ ಗೊತ್ತಿರಲಿಲ್ಲ ನನಗೂ ಕೂಡ ಇವರಿಬ್ಬರ ಎಂಗೇಜ್ಮೆಂಟ್ ವಿಷಯ ಕೇಳಿದಾಗ ಶಾಕ್ ಆಯಿತು ಹಾಗೆ ಸರ್ಪ್ರೈಸ್ ಕೂಡ ಆಯಿತು ವಸಿಷ್ಟ ಸಿಂಹ ಮತ್ತೊಮ್ಮೆ ನನ್ನ ಕೈಗೆ ಸಿಕ್ಕಾಗ ಇದರ ಬಗ್ಗೆ ಕೇಳಬೇಕು ಎಂದು ಹೇಳಿದ್ದಾರೆ.

 

 

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ರವರ ಎಂಗೇಜ್ಮೆಂಟ್ ನಡೆದ ನಂತರ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳುತ್ತಿರುವುದು ನನಗೆ ತುಂಬಾ ನೋವಾಗುತ್ತಿದೆ ನಾನಂತೂ ಈ ರೀತಿ ಸರ್ಪ್ರೈಸ್ ಎಲ್ಲ ನೀಡುವುದಿಲ್ಲ ಎಲ್ಲರಿಗೂ ಹೇಳಿಯೇ ಮದುವೆಯಾಗುತ್ತೇನೆ ಎಂದರು ಡಾಲಿ ಧನಂಜಯ್ ರವರು ವಸಿಷ್ಟ ಸಿಂಹನ ಬಗ್ಗೆ ಮಾತನಾಡಿ ಅವನು ನನ್ನ ಕೈಗೆ ಸಿಗಲಿ ವಿಚಾರಿಸಿಕೊಳ್ಳುತ್ತೇನೆ ಎಂದು ತಮಾಷೆಯ ಈ ಮಾತನಾಡಿದ್ದಾರೆ.

Leave a comment

Your email address will not be published. Required fields are marked *