ಮಾವ ಅಳಿಯ ಮಾತನಾಡುವಾಗ ಅಡ್ಡ ಬಂದ ಧ್ರುವ ಪತ್ನಿ ಪ್ರೇರಣಾ

ಚರ್ಚ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಶಂಕರ್ , ಮೇಘನಾ ರಾಜ್ ತಂದೆ ಸುಂದರ್ ರಾಜ್ ಹಾಗೂ ಮೇಘನಾ ರಾಜ್ ಎಲ್ಲರೂ ಕೂಡ ಹಾಜರಿದ್ದು ಒಂದು ಕೌಟುಂಬಿಕ ಸಮಾರಂಭವನ್ನು ಯಶಸ್ವಿಗೊಳಿಸಿದ್ದಾರೆ. ಪ್ರಮೀಳಾ ಜೋಶಾಯಿರವರು ಮೂಲತಹ ಕ್ರಿಶ್ಚಿಯನ್ನಾಗಿದ್ದು ಸುಂದರರಾಜ್ ರವರನ್ನು ವಿವಾಹವಾಗಿದ್ದಾರೆ. ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿರವರ ಮುದ್ದಿನ ಮಗಳು ಮೇಘನ ರಾಜ್ ವಿವಾಹವಾಗಿರುವ ಚಿರಂಜೀವಿ ಸರ್ಜಾ ಕುಟುಂಬದವರು ಕೂಡ ಯಾವುದೇ ಜಾತಿ ಮತ ಭೇದವಿಲ್ಲದೆ ತಮ್ಮ ಕುಟುಂಬದಲ್ಲಿ ಹಲವಾರು ಜಾತಿಯ ಜನರಿದ್ದರು ಕೂಡ ನಾವೆಲ್ಲ ಒಂದೇ ಎನ್ನುವಂತೆ ಬದುಕುತ್ತಿದ್ದಾರೆ.

 

ಮಾನವ ಕುಲಂ ತಾನೊಂದೇ ವಲಂ ಎನ್ನುವ ಮಾತನ್ನು ಒಪ್ಪಿಕೊಂಡು ಸರ್ಜಾ ಕುಟುಂಬ ನಡೆಯುತ್ತಿದೆ.ಮೇಘನಾ ರಾಜ್ ಹಾಗು ಚಿರಂಜೀವಿ ಸರ್ಜಾ ರವರು ಸುಮಾರು 10 ವರ್ಷಗಳವರೆಗೂ ಪ್ರೀತಿಸಿ ತದನಂತರ ಮನೆಯವರ ಒಪ್ಪಿಗೆಯನ್ನು ಪಡೆದು ಹಿಂದೂ ಸಂಪ್ರದಾಯ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹವಾದರು. ನಟ ದ್ರುವ ಸರ್ಜಾ ಕೂಡ ತಮ್ಮ ಬಾಲ್ಯದ ಗೆಳತಿ ನೆರೆಮನೆಯ ಹುಡುಗಿ ಪ್ರೇರಣ ಶಂಕರರನ್ನು ಬಾಲ್ಯದಿಂದ ಪ್ರೀತಿಸುತ್ತಿದ್ದು ಅವರು ಕೂಡ ತಮ್ಮ ಮನೆಯವರ ಇಚ್ಛೆಯ ಮೇರೆಗೆ ಹಿಂದೂ ಸಂಪ್ರದಾಯದ ಪ್ರಕಾರ ಕರೋನಾ ಸಮಯದಲ್ಲಿ ವಿವಾಹವಾಗಿದ್ದಾರೆ.

ನಟ ಚಿರಂಜೀವಿ ಸರ್ಜಾ ಆಗಲಿಕೆಯ ನಂತರವೂ ಮೇಘನಾ ರಾಜ್ ಕುಟುಂಬದವರ ಜೊತೆ ಸರ್ಜಾ ಕುಟುಂಬವು ಉತ್ತಮ ಬಾಂಧವ್ಯವನ್ನು ಹೊಂದಿದೆ. ಇಂದಿಗೂ ಕೂಡ ಧ್ರುವ ಸರ್ಜಾಗೆ ತನ್ನ ಅತ್ತಿಗೆ ಮೇಘನಾ ರಾಜ್ ಮೇಲಿನ ಪ್ರೀತಿ ಕಿಂಚಿತ್ತು ಕಡಿಮೆಯಾಗಿಲ್ಲ. ಸುಂದರ್ ರಾಜ್ ರವರನ್ನು ಕೂಡ ಧ್ರುವ ಸರ್ಜಾ ಮಾವ ಎಂದೇ ಸಂಬೋಧಿಸುತ್ತಾರೆ. ಯಾವುದೇ ಸಮಾರಂಭಗಳಲ್ಲಿ ಸಿಕ್ಕರೂ ಕೂಡ ಆತ್ಮೀಯತೆಯಿಂದ ಇಬ್ಬರು ಮಾತನಾಡುತ್ತಾರೆ.

 

 

ಈ ಸಮಾರಂಭದಲ್ಲಿ ಸುಂದರರಾಜ ಹಾಗೂ ಧ್ರುವ ಸರ್ಜಾ ರವರು ಭೇಟಿಯಾಗಿ ಪರಸ್ಪರ ಯೋಗ ಕ್ಷೇಮವನ್ನು ವಿಚಾರಿಸಿಕೊಂಡು ಮುಂದಿನ ಸಿನಿಮಾಗಳ ಪ್ಲಾನ್ಸ್ ಬಗ್ಗೆ ಮಾತನಾಡುತ್ತಿರುವಾಗ ಧ್ರುವ ಸರ್ಜಾ ಪತ್ನಿ ಪ್ರೇರಣಾ ಶಂಕರ್ ಧ್ರುವ ಸರ್ಜಾ ಹಿಂದಿನಿಂದ ಬಂದು ಅವರ ಶರ್ಟ್ ಕಾಲರ್ ಅನ್ನು ಸರಿ ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಧ್ರುವ ಸರ್ಜಾ ರವರಿಗೆ ಪ್ರೇರಣ ಮೇಲಿರುವ ಪ್ರೀತಿಯನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ಎಲ್ಲಾ ಕಡೆ ವೈರಲಾಗಿದ್ದು ನೆಟ್ಟಿಗರಿಗೆ ಕಮೆಂಟ್ ಮಾಡಲು ಮತ್ತೊಂದು ಹೊಸ ವಿಷಯ ಸಿಕ್ಕಿದೆ.

Be the first to comment

Leave a Reply

Your email address will not be published.


*