ಮೇಘನಾ ರಾಜ್(Meghana Raj) ಹಾಗೂ ಚಿರಂಜೀವಿ ಸರ್ಜಾ(Chiranjeevi sarja) ಮಗನಾದ ರಾಯನ್ (Ryan) ಕರ್ನಾಟಕದಲ್ಲಿ ಜೂನಿಯರ್ ಚಿರಂಜೀವಿ(junior Chiru) ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾನೆ. ಜೂನಿಯರ್ ಚಿರಂಜೀವಿ ನಾಮಕರಣಕ್ಕೆ ಖರ್ಚಾದ ಹಣವೆಷ್ಟು ಎಂದು ತಿಳಿದರೆ ಎಲ್ಲರೂ ಕೂಡ ಶಾಕ್ ಆಗುವುದು ಖಂಡಿತ.
ದಕ್ಷಿಣ ಭಾರತದ ಚಿತ್ರರಂಗದ ಮುದ್ದು ಮುಖದ ಚೆಲುವೆ ಹಾಗೂ ಕರುನಾಡಿನ ಮನೆ ಮಗಳಾದ ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬ ಸೆಪ್ಟೆಂಬರ್ 3 2021 ರಂದು ಸರ್ಜಾ ಕುಟುಂಬದ ಕುಡಿಯಾದ ಜೂನಿಯರ್ ಚಿರು ರಾಯನ್ ಗೆ ಅದ್ದೂರಿಯಾಗಿ ನಾಮಕರಣ ಶಾಸ್ತ್ರವನ್ನು ಮಾಡಿದ್ದರು
ಮೇಘನ ತಮ್ಮ ಪುತ್ರನಿಗೆ ಆಯ್ಕೆ ಮಾಡಿರುವ ರಾಯನ್ ಎನ್ನುವ ಹೆಸರು ಸಿಕ್ಕಾಪಟ್ಟೆ ಯೂನಿಕ್ ಆಗಿದೆ. ರಾಯನ್ ಹುಟ್ಟಿದ 10 ತಿಂಗಳಿನವರೆಗೂ ಅಭಿಮಾನಿಗಳು ಜೂನಿಯರ್ ಚಿರು ಎಂದೇ ಕರೆಯುತ್ತಿದ್ದರು ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ರವರ ಮುದ್ದು ಮಗನಿಗೆ ರಾಯನ್ ಎಂದು ನಾಮಕರಣ ಮಾಡಲಾಗಿತ್ತು.
ಬೆಂಗಳೂರಿನ ಚಾನ್ಸೇನ್ ಪೆವಿಲಿಯರ್ ಹೋಟೆಲ್ ನಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ದಂಪತಿಗಳ ಮಗ ರಾಯನ್ ನಾಮಕರಣ ಶಾಸ್ತ್ರವನ್ನು ಮಾಡಲಾಗಿತ್ತು. ನಟ ದ್ರುವ ಸರ್ಜಾ ಸೇರಿದಂತೆ ಕುಟುಂಬದ ಹಲವು ಗಣ್ಯರು, ಚಿರಂಜೀವಿ ಸರ್ಜಾ ಮಗ ರಾಯನ್ ನಾಮಕರಣಕ್ಕೆ ಸೇರಿದ್ದರು
ಮೇಘನಾ ರಾಜ್ ತಮ್ಮ ಮಗ ರಾಯನ್ ನಾಮಕರಣದ ವಿಡಿಯೋವನ್ನು ನಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದು ರಾಯನ್ ರಾಜ್ ಸರ್ಜಾ ನಮ್ಮ ಮನೆಯ ಯುವರಾಜ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಚಿರಂಜೀವಿ ಸರ್ಜಾ ಅವರನ್ನು ನಟಿ ಮೇಘನ ರಾಜ್ ನೆನಪಿಸಿಕೊಂಡಿದ್ದು ಮಾಧ್ಯಮದ ಮುಂದೆ ಭಾವುಕರಾಗಿ ಕಣ್ಣೀರು ಇಟ್ಟಿದ್ದಾರೆ.
ರಾಯನ್ ನಾಮಕರಣದ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಪೂಜೆಗಳು ಆರಂಭವಾಗಿದ್ದು, ಈ ವೇಳೆ ಮೇಘನಾ ರಾಜ್ ಪೋಷಕರಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಶಾಯಿರವರು ಭಾಗಿಯಾಗಿದ್ದರು ಹಾಗೆ ಚಿರಂಜೀವಿ ಸರ್ಜಾ ಪೋಷಕರು ತಮ್ಮ ಮೊಮ್ಮಗ ರಾಯನ್ ನನ್ನು ಮಡಿಲಿನಲ್ಲಿ ಕೂರಿಸಿಕೊಂಡು ಪೂಜೆಯನ್ನು ನೆರವೇರಿಸಿದ್ದರು.
ಮೇಘನಾ ರಾಜ್(Meghana Raj) ಮಗನ ಹೆಸರಿನ ಅರ್ಥವೇನು ಎಂದರೆ ಸಂಸ್ಕೃತದಲ್ಲಿ ರಾಯನ್(Ryan Raj sarja) ಎಂದರೆ ಯುವರಾಜ ಎನ್ನುವ ಅರ್ಥ ಬರುತ್ತದೆ. ಧ್ರುವ ಸರ್ಜಾ(Dhruva sarja) ರವರು ರಾಯನ್ ತೊಟ್ಟಿಲ ಶಾಸ್ತ್ರದಲ್ಲಿ 10 ಲಕ್ಷ ಬೆಲೆಬಾಳುವ ತೊಟ್ಟಿಲೊಂದನ್ನು ಉಡುಗೊರೆ ನೀಡಿದ್ದರು ಮೇಘನಾ ರಾಜ್ ಮಗಾ ರಾಯನ್ ರಾಜ ಸರ್ಜಾ ನಾಮಕರಣವು ಖಾಸಗಿ ಹೋಟೆಲ್ ಒಂದರಲ್ಲಿ ನೆರವೇರಿದ್ದು ಕರೋನ ಅಲೆಯಿಂದ ಕುಟುಂಬದ ಸದಸ್ಯರು ಹಾಗೂ ಕೆಲವು ಸೆಲೆಬ್ರಿಟಿಗಳು ಮಾತ್ರ ಹಾಜರಿದ್ದರು ಇದೀಗ ರಾಯನ್ ನಾಮಕರಣಕ್ಕೆ ಆದ ಖರ್ಚು ಎಷ್ಟು? ಎನ್ನುವ ಪ್ರಶ್ನೆ ಎಲ್ಲರನ್ನು ಕುತೂಹಲ ಹುಟ್ಟು ಹಾಕುತ್ತಿದ್ದು ಇದೀಗ ರಾಯನ್ ನಾಮಕರಣಕ್ಕೆ 1.7 ಕೋಟಿ ಹಣ ಖರ್ಚಾಗಿತ್ತು ಎಂದು ವರದಿಯಾಗಿದೆ.