ನಟ ಧ್ರುವ ಸರ್ಜಾ ಬಾಳಲ್ಲಿ ಮಗಳಿಂದ ಖುಷಿ ಹೆಚ್ಚಾಗಿದೆ . ಅವರ ಪತ್ನಿ ಪ್ರೇರಣಾ ಕಳೆದ ವರ್ಷ ಅಕ್ಟೋಬರ್ 2 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ದಂಪತಿಗಳು ಇಲ್ಲಿಯವರೆಗೆ ತಮ್ಮ ಮಗಳ ಫೋಟೋವನ್ನು ಹಂಚಿಕೊಂಡಿರಲಿಲ್ಲ.
ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ತಮ್ಮ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ‘ನನ್ನ ಮಗಳೇ.. ಐ ಲವ್ ಯೂ ಮಗಳೇ’ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಧ್ರುವ ಸರ್ಜಾ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ‘ಮಾರ್ಟಿನ್’ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಅವರು ಬಿಡುವಿನ ವೇಳೆಯಲ್ಲಿ ಮಗಳ ಜತೆ ಕಾಲ ಕಳೆಯುತ್ತಿದ್ದಾರೆ.
ಧ್ರುವ ಸರ್ಜಾ ಒಬ್ಬ ಫ್ಯಾಮಿಲಿ ಮ್ಯಾನ್ ಅಂತ ಗೊತ್ತು. ಎಷ್ಟೇ ಬ್ಯುಸಿ ಇದ್ದರೂ ಕುಟುಂಬಕ್ಕೆ ಆದ್ಯತೆ ನೀಡುತ್ತಾರೆ. ಸದ್ಯ ಮುದ್ದಾದ ಮಗಳ ಆಗಮನದಿಂದ ಸಂತಸಗೊಂಡಿರುವ ಧ್ರುವ, ಮಗಳು ಹುಟ್ಟಿದ 6 ತಿಂಗಳ ನಂತರ ಅವರ ಜೊತೆಗಿನ ಮುದ್ದಾದ ಫೋಟೋವನ್ನು ಶೇರ್ ಮಾಡಿದ್ದಾರೆ.
ಧ್ರುವ ಸರ್ಜಾ ಅವರು ತಮ್ಮ ಮಗಳ ಕೈಗೆ ಮುತ್ತು ಕೊಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದು, ಅದಕ್ಕೆ ನನ್ನ ಮಗಳೇ ಲವ್ ಯೂ ಮಗಳೇ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳ ಮುಖದ ಫೋಟೋವನ್ನು ಶೀಘ್ರದಲ್ಲೇ ಹಂಚಿಕೊಳ್ಳಲು ಅವರು ವಿನಂತಿಸಿದರು.
View this post on Instagram
ಧ್ರುವ ಸರ್ಜಾ ಮಾಸ್ ಸಿನಿಮಾಗಳ ಮೂಲಕ ಫೇಮಸ್. ಅವರ ‘ಮಾರ್ಟಿನ್’ ಚಿತ್ರವೂ ಬ್ಲಾಕ್ ಬಸ್ಟರ್ ಆಗುತ್ತಿದೆ. ಈ ಚಿತ್ರದ ಟೀಸರ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದೆ. ಸಿನಿ ಪ್ರೇಮಿಗಳು ಇದರ ಮೇಕಿಂಗ್ ಅನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಹಿಟ್ ಆಗುವುದು ಗ್ಯಾರಂಟಿ ಎಂಬ ಅಭಿಪ್ರಾಯವನ್ನು ಧ್ರುವ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.