ಧ್ರುತಿ ಪುಣ್ಯತಿಥಿಗೆ ಬರಲಿಲ್ಲ ಎಂದು ಅಪ್ಪು ಮಗಳು ವಂದಿತ ಸಮಾಧಿಯ ಬಳಿ ಎಂತಹ ಕೆಲಸ ಮಾಡಿದ್ದಾರೆ ನೋಡಿ

ಅಪ್ಪು ನಮ್ಮನ್ನೆಲ್ಲ ಆಗಲಿ ಒಂದು ವರ್ಷವೇ ಕಳೆಯುತ್ತಾ ಬಂತು ಇಂದಿಗೂ ಕರುನಾಡಿನ ಆಕ್ರಂದನ ನಿಂತಿಲ್ಲ. ಅಪ್ಪುವನ್ನು ನೆನೆಸಿಕೊಂಡಾಗಲೆಲ್ಲ ಅಭಿಮಾನಿಗಳ ಕಣ್ಣಿನಲ್ಲಿ ಧಾರಾಕಾರವಾಗಿ ಕಣ್ಣೀರು ಸುರಿಯುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವ ವೃದ್ಧರವರೆಗೂ ಅಪ್ಪು ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು ಎಲ್ಲರೂ ಕೂಡ ಅಪ್ಪುವನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.

 

 

ಅವರು ನಮ್ಮನ್ನು ಅಗಲಿ ಒಂದು ವರ್ಷವಾದರೂ ಕೂಡ ಇಂದಿಗೂ ಅವರ ನೆನಪು ಒಂದು ಚೂರು ಕೂಡ ಮಾಸಿಲ್ಲ
ಅವರು ನಮ್ಮನ್ನಗಲಿದ ದುಃಖ ಇನ್ನೂ ಹಸಿಯಾಗಿದೆ.
ಆದರೂ ಕೂಡ ಮುಂದಿನ ಕಾರ್ಯಗಳನ್ನು ಮಾಡಲೇಬೇಕಾದ ಪರಿಸ್ಥಿತಿ ಇರುವುದರಿಂದ ದೊಡ್ಮನೆ ಕುಟುಂಬವು ಅಪ್ಪುವಿನ ವರ್ಷದ ಪುಣ್ಯತಿಥಿಯನ್ನು ಕೂಡ ಆಚರಿಸಿದ್ದಾರೆ.

 

 

ವರ್ಷದ ಪುಣ್ಯತಿಥಿಯ ಕಾರ್ಯಕ್ರಮಕ್ಕೆ ಮಗಳು ವಂದಿತ ಕೂಡ ಬಂದಿದ್ದರು ಆದರೆ ಧೃತಿ ವಿದೇಶದಲ್ಲಿ ಓದುತ್ತಿರುವ ಕಾರಣ ಅವರು ಈ ಪುಣ್ಯತಿಥಿಗೆ ಬರಲು ಸಾಧ್ಯವಾಗಿಲ್ಲ ಇದರಿಂದ ತುಂಬಾ ಬೇಜಾರು ಮಾಡಿಕೊಂಡ ವಂದಿತ ಅಕ್ಕನು ಕೂಡ ಈ ಕಾರ್ಯದಲ್ಲಿ ಭಾಗಿಯಾಗಬೇಕು ನಾವು ಮಾಡುವ ಪೂಜೆಗಳನ್ನು ಅವಳು ನೋಡಬೇಕು ಎಂದು ತಮ್ಮ ಅಕ್ಕ ದೃತಿಗೆ ವಿಡಿಯೋ ಕಾಲ್ ಮಾಡಿ ವರ್ಷದ ಪುಣ್ಯ ಸ್ಮರಣೆಯಲ್ಲಿ ನಡೆಯುವ ಪೂಜೆಗಳನ್ನೆಲ್ಲ ತೋರಿಸಿದ್ದಾರೆ.

 

 

ಅಪ್ಪನ ಸಮಾಧಿಯ ಪೂಜೆಯನ್ನು ನೋಡಿ ಧೃತಿ ಕೂಡ ಕಣ್ಣೀರು ಹಾಕಿದ್ದಾರೆ. ಅಕ್ಕ ಅಳುತ್ತಿರುವುದನ್ನು ನೋಡಿ ವಂದಿತರವರು ಕಣ್ಣೀರು ಹಾಕಿದ್ದಾರೆ. ಅಶ್ವಿನಿ ಮೇಡಂ ರವರು ಇವರಿಬ್ಬರಿಗೂ ಸಮಾಧಾನ ಮಾಡಿದರೂ ಇವರು ಕೊಂಚವು ಸಮಾಧಾನವಾಗಿಲ್ಲ. ಅಶ್ವಿನಿ ರವರು ಕೂಡ ಗಟ್ಟಿ ಮನಸ್ಸು ಮಾಡಿ ತಮ್ಮ ಜೀವನದ ಮುಂದಿನ ಕಾರ್ಯಗಳನ್ನು ನಡೆಸುತ್ತಿದ್ದಾರೆ.

 

 

ಅವರ ಮೇಲೆ ಎಷ್ಟೇ ಪ್ರೀತಿ ಇದ್ದರೂ ಅಭಿಮಾನವಿದ್ದರೂ ಅವರು ಇನ್ನೆಂದು ವಾಪಸ್ ಬರುವುದಿಲ್ಲ ಅವರು ಬಾರದೂರಿಗೆ ಹೋಗಿದ್ದಾರೆ ಎಂದು ಅರಿಯುವುದು ವಾಸ್ತವ ಸತ್ಯವಾಗಿದೆ. ಅಪ್ಪು ಎಲ್ಲೂ ಹೋಗಿಲ್ಲ ಕರ್ನಾಟಕದ ವಿಳಾಸವನ್ನು ನಮ್ಮ ಹೃದಯದ ಊರಿಗೆ ಬದಲಾಯಿಸಿಕೊಂಡಿದ್ದಾರೆ ಅಷ್ಟೇ.

Be the first to comment

Leave a Reply

Your email address will not be published.


*