ಅನುಷಾ ಶೆಟ್ಟಿ ಹಾಗೂ ತೆಲುಗು ನಟ ನಾಗ ಶೌರ್ಯ ಮದುವೆಯಲ್ಲಿ ಹಾಜರಿದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಇಂದು ಕನ್ನಡದ ನಟಿ ಅನುಷಾ ಶೆಟ್ಟಿರವರ(Anusha shetty) ಜೊತೆ ತೆಲುಗಿನ ಖ್ಯಾತ ನಟ ನಾಗ ಶೌರ್ಯರವರು(Naga showrya) ಬೆಂಗಳೂರಿನ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ನಾಗ ಶೌರ್ಯ ರವರಿಗೆ ತೆಲುಗಿನಲ್ಲಿ ಅಪಾರ ಅಭಿಮಾನಿಗಳಿದ್ದು ಅವರೆಲ್ಲರೂ ಇವರಿಬ್ಬರ ವಿವಾಹ ಮಹೋತ್ಸವಕ್ಕೆ ಶುಭಾಶಯಗಳ ಮಳೆಯನ್ನೇ ಹರಿಸಿದ್ದಾರೆ. ನಟಿ ಅನುಷಾ ಶೆಟ್ಟಿ, ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು ಹಾಗೆಯೇ ಕನ್ನಡದ ಹಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇವರು ಮೊದಲು ಕಿರುತೆರೆಯಲ್ಲಿ ನಟಿಸುತ್ತಿದ್ದು ಇದೀಗ ಹಿರಿತೆರೆಗು ಕೂಡ ಕಾಲಿಟ್ಟಿದ್ದಾರೆ.

 

 

ತೆಲುಗು ನಟ ನಾಗ ಶೌರ್ಯ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಜನಪ್ರಿಯರಾಗಿದ್ದರು ಟಾಲಿವುಡ್ ನಲ್ಲಿ ಖ್ಯಾತ ನಟನೆಂದು ಪ್ರಸಿದ್ಧಿಯನ್ನು ಕೂಡ ಪಡೆದಿದ್ದಾರೆ. ಬೆಂಗಳೂರಿನ ಹುಡುಗಿ ಹಾಗೂ ಕನ್ನಡತಿಯಾದ ಅನುಷಾ ಶೆಟ್ಟಿ ರವರ ಜೊತೆ ಇಂದು ನಾಗ ಶೌರ್ಯ ವಿವಾಹವಾಗಿದ್ದಾರೆ. ನಟ ನಾಗ ಶೌರ್ಯ ಹಾಗೂ ಅನುಷಾ ಶೆಟ್ಟಿ ಇವರಿಬ್ಬರು ವಿವಾಹವಾಗುತ್ತೇವೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅನೌನ್ಸ್ ಮಾಡಿದ್ದರು ಅವರ ಅಭಿಮಾನಿಗಳೆಲ್ಲರೂ ಅವರಿಗೆ ಬರಪೂರಾ ಶುಭಾಶಯದ ಮಳೆಯನ್ನೆ ಹರಿಸಿದ್ದರು. ನಟ ನಾಗ ಶೌರ್ಯ ಹಾಗೂ ಕನ್ನಡತಿ ಅನುಷಾ ಶೆಟ್ಟಿಯವರು ಬೆಂಗಳೂರಿನಲ್ಲಿ ವಿವಾಹವಾಗಿದ್ದಾರೆ.

 

 

ನಟ ನಾಗ ಶೌರ್ಯ ರವರು ಪೂರ್ವ ಗೋದಾವರಿ ಜಿಲ್ಲೆಯ ಏಲೂರಿನಲ್ಲಿ ಜನಿಸಿದ್ದು ತದನಂತರ ವಿಜಯವಾಡಕ್ಕೆ ತಮ್ಮ ಕುಟುಂಬದವರೆಲ್ಲರೂ ಶಿಫ್ಟ್ ಆಗಿದ್ದರು ತದನಂತರ ಹೈದರಾಬಾದ್ ಗೆ ಕೂಡ ಶಿಫ್ಟ್ ಆಗಿ ನಾಗ ಶೌರ್ಯ ರವರು ಚಿಕ್ಕ ವಯಸ್ಸಿನಿಂದಲೂ ಕೂಡ ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು ಹಾಗಾಗಿ ತಾವು ಯೌವ್ವನಾವಸ್ಥೆಗೆ ಬಂದಾಗ ನಟನೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಿದ್ದರು. ಇವರ ನಟನ ಆಸಕ್ತಿಯಿಂದ ನಾಗ ಶೌರ್ಯರವರು 2011ರಲ್ಲಿ ಕ್ರಿಕೆಟ್ ಗರ್ಲ್ಸ್ ಮತ್ತು ಬಿಯರ್ ಎನ್ನುವ ಚಿತ್ರದ ಮೂಲಕ ನಾಯಕ ನಟನಾಗಿ ಟಾಲಿವುಡ್ ಗೆ ಎಂಟ್ರಿ ಕೊಟ್ಟರು.

 

 

ತದನಂತರ ನಿರ್ದೇಶಕ ಪ್ರವೀಣ್ ಸತ್ತಾರು ನಿರ್ದೇಶನದಲ್ಲಿ ಮೂಡಿ ಬಂದಿದ್ದ ಚಂದಮಾಮನ ಕಥೆಗಳು ಚಿತ್ರದಲ್ಲೂ ಕೂಡ ನಟ ನಾಗ ಶೌರ್ಯ ನಟಿಸಿದ್ದರು ಇದೀಗ ಆ ಚಿತ್ರ ಕೂಡ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ ಈ ಚಿತ್ರಕ್ಕೆ ನಾಗ ಶೌರ್ಯರವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತು. ನಟ ನಾಗ ಶೌರ್ಯ ಹಾಗೂ ಕನ್ನಡದ ನಟಿ ಅನುಷಾ ಶೆಟ್ಟಿ ರವರು ಹಲವಾರು ವರ್ಷಗಳಿಂದಲೇ ಪ್ರೀತಿಸುತ್ತಿದ್ದು ಇದೀಗ ತಮ್ಮ ಮನೆಯವರ ಒಪ್ಪಿಗೆಯನ್ನು ಪಡೆದು ಬೆಂಗಳೂರಿನ ಐಷಾರಾಮಿ ಹೋಟೆಲ್ ಒಂದರಲ್ಲಿ ಅವರಿಬ್ಬರು ಅದ್ದೂರಿಯಾಗಿ ವಿವಾಹವಾಗಿದ್ದಾರೆ.

 

 

ಇವರಿಬ್ಬರೂ ತಮ್ಮ ವಿವಾಹಕ್ಕೆ ಸ್ಯಾಂಡಲ್ವುಡ್ ನ ಹಲವಾರು ಸ್ಟಾರ್ ನಟ ನಟಿಯರನ್ನು ಕೂಡ ಆಹ್ವಾಸಿದ್ದರೂ ಹಾಗೆಯೇ ಟಾಲಿವುಡ್ ನ ಸ್ಟಾರ್ ನಟ ನಟಿಯರು ಕೂಡ ಆಗಮಿಸಿದ್ದರು. ನಟ ನಾಗ ಶೌರ್ಯ ಹಾಗೂ ಅನುಷಾ ಶೆಟ್ಟಿ ರವರ ವಿವಾಹಕ್ಕೆ ಕನ್ನಡದ ಖ್ಯಾತ ನಟ ಡಿ ಬಾಸ್ ದರ್ಶನ್ (D Boss darshan)ರವರ ಪತ್ನಿ(Wife) ವಿಜಯಲಕ್ಷ್ಮಿ ಕೂಡ ಇವರಿಬ್ಬರ ವಿವಾಹಕ್ಕೆ ಹಾಜರಿದ್ದರು ಹಾಗೆಯೇ ಕನ್ನಡದ ಕಿರುತೆರೆಯ ಖ್ಯಾತ ನಟಿ ಜೂನಿಯರ್ ರಾಧಿಕಾ ಪಂಡಿತ್(Radhika pandith) ಎಂದು ಹೆಸರನ್ನು ಗಳಿಸಿರುವ ಕಾವ್ಯ ಗೌಡ(Kavya gowda) ಕೂಡ ಈ ಮದುವೆಗೆ ಹಾಜರಿದ್ದು ನವ ಜೋಡಿಗಳಿಗೆ ಶುಭ ಕೋರಿದ್ದಾರೆ.

Be the first to comment

Leave a Reply

Your email address will not be published.


*