ಸದ್ಯ ಸಿಸಿಎಲ್ ಕ್ರಿಕೆಟ್ ಲೀಗ್ ನಂತರ ದಕ್ಷಿಣ ಭಾರತ ಚಿತ್ರರಂಗ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಕ್ರಿಕೆಟ್ ಟೂರ್ನಿ ಕೆಸಿಸಿ. ಹೌದು, ಕರ್ನಾಟಕ ಚಲನಚಿತ್ರ ಕಪ್ ಹೆಸರಿನಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು ಒಗ್ಗೂಡಿ ಒಗ್ಗಟ್ಟು ಪ್ರದರ್ಶಿಸುವ ವೇದಿಕೆ ಇದಾಗಿದೆ. ಈಗಾಗಲೇ ಕೆಸಿಸಿ ಸೀಸನ್ 2 ಯಶಸ್ವಿಯಾಗಿದ್ದು, ಇದೀಗ ನಟ ಸುದೀಪ್ ನೇತೃತ್ವದಲ್ಲಿ ಕೆಸಿಸಿ ಸೀಸನ್ 3 ಶುರುವಾಗಲಿದೆ.
ಫೆಬ್ರವರಿ 24 ಮತ್ತು 25 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ. ಕಳೆದ ಗುರುವಾರದವರೆಗೂ ಇದೇ ಕ್ರೀಡಾಂಗಣದ ಸಭಾಂಗಣದಲ್ಲಿ 6 ತಂಡಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಹರಾಜು ಪ್ರಕ್ರಿಯೆಯು ಐಪಿಎಲ್ ಹರಾಜು ಪ್ರಕ್ರಿಯೆಯಂತೆಯೇ ಇತ್ತು.
ಶಿವರಾಜಕುಮಾರ್, ಕಿಚ್ಚ ಸುದೀಪ್, ಗಣೇಶ್, ಜಗ್ಗೇಶ್, ಧನಂಜಯ್, ಧ್ರುವ ಸರ್ಜಾ, ರಮ್ಯಾ, ಸುಧಾರಾಣಿ, ಶೃತಿ, ತಾರಾ ಅನುರಾಧ, ಮಾಲಾಶ್ರೀ ಇತರ ನಟಿಯರು.ಅನುಪ್ರಭಾಕರ್ ನಿರ್ಮಾಪಕ ಅಶ್ವಿನಿ ಪುನೀತರಾಜ್ಕುಮಾರ್ ಸಚಿವ ಅಶ್ವಥ್ ನಾರಾಯಣ್ ಮುನಿರತ್ನ ಪೊಲೀಸ್ ಅಧಿಕಾರಿ ದೇವರಾಜ್ ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವು ನಟರು ಮತ್ತು ನಿರ್ದೇಶಕರು ಭಾಗಿಯಾಗಿದ್ದರು. ದರ್ಶನ್ ಸಹೋದರ ದಿನಕರ್ ಎದ್ದು ನಿಂತು ಅಶ್ವಿನಿ ಪುನೀತ್ ರಾಜ್ಕುಮಾರ್ ಕೈಕುಲುಕಿದ ಅಪರೂಪದ ಘಟನೆ ನಡೆದಿದೆ. ಈ ಅಪರೂಪದ ಘಟನೆಯನ್ನು ಲೇಖನಿಯ ಕೆಳಗಿನ ವಿಡಿಯೋದಲ್ಲಿ ನೋಡಬಹುದು.
ಕೆಸಿಸಿ ಸೀಸನ್ 3ರ ಸ್ಪೆಷಲ್ ಸೆಲೆಬ್ರಿಟಿಯಾಗಿ ರವಿಚಂದ್ರನ್ ಮತ್ತು ರಮ್ಯಾ ರವರು ಆಯ್ಕೆಯಾಗಿದ್ದು ಕಳೆದ ವರ್ಷ ಚಾಂಪಿಯನ್ ಆಗಿದ್ದ ಗಣೇಶ್ ಕೆಸಿಸಿ ಕಪ್ ಅನ್ನು ರಮ್ಯಾ ಅವರ ಕೈಯಲ್ಲಿ ಅನಾವರಣ ಮಾಡಿಸಿದ್ದರು. ಹೌದು ಪ್ರತಿ ವರ್ಷದಂತೆ ಈ ವರ್ಷವೂ ಕೆಸಿಸಿಯಲ್ಲಿ ಒಟ್ಟು ಆರು ತಂಡಗಳಿದ್ದು ಈ ಆರು ತಂಡಗಳಿಗೆ ಮೆಂಟರ್ ಹಾಗೂ ಸ್ಟಾರ್ ಸೆಲೆಬ್ರಿಟಿ ಮತ್ತು ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ಈ ವರ್ಷವೂ ಪ್ರತಿ ತಂಡದಲ್ಲಿ 6 ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಆಡಲಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು ಸಿನಿಮಾ ತಾರೆಯರ ಜೊತೆ ಆಟವಾಡುತ್ತಾ ಕನ್ನಡ ಸಿನಿಪ್ರೇಮಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲಿದ್ದಾರೆ. ಆಟಗಾರರ ಹರಾಜಿನ ನಡುವೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ನಡೆದಿದೆ. ಕೆಸಿಸಿಯ ಹಿಂದಿನ ಎರಡು ಸೀಸನ್ಗಳಲ್ಲಿ ಪುನೀತ್ ರಾಜ್ಕುಮಾರ್ ಸ್ಟಾರ್ ಸೆಲೆಬ್ರಿಟಿಯಾಗಿದ್ದರು.