ಚಾಲೆಂಜಿಂಗ್ ಸ್ಟಾರ್, ದಾಸ, ಡಿ ಬಾಸ್ ಎಂದೆಲ್ಲಾ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ದರ್ಶನ್ ಕೇವಲ ಲುಕ್ ಅಥವಾ ಆ್ಯಕ್ಟಿಂಗ್ನಿಂದ ಮಾತ್ರವಲ್ಲ, ಅವರ ಗುಣಗಳಿಂದ ಕೂಡಾ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಾರೆ. ಜೂನ್ 5 ವಿಶ್ವ ಪರಿಸರ ದಿನದಂದು ದರ್ಶನ್ ಮೈಸೂರು ಮೃಗಾಲಯದಲ್ಲಿ ಗಿಡಗಳನ್ನು ನೆಟ್ಟು ಅಭಿಮಾನಿಗಳಿಗೆ ಒಂದು ಕರೆ ನೀಡಿದ್ದರು. ”ರಾಜ್ಯಾದ್ಯಂತ 9 ಮೃಗಾಲಯಗಳಿದ್ದು ಕಳೆದ ಒಂದೂವರೆ ವರ್ಷದಿಂದ ಕೊರೊನಾ ಕಾರಣದಿಂದ ಪ್ರಾಣಿಗಳ ಸೂಕ್ತ ನಿರ್ವಹಣೆ ಮಾಡಲಾಗುತ್ತಿಲ್ಲ.
ಆದ್ದರಿಂದ ಕೈಲಾಗುವವರು ಪ್ರಾಣಿಗಳನ್ನು ದತ್ತು ಪಡೆಯಿರಿ, ಅಥವಾ ನಿಮಗೆ ಸಾಧ್ಯವಾಗುವಷ್ಟು ಹಣವನ್ನು ಮೃಗಾಲಯದ ಅಭಿವೃದ್ಧಿಗೆ ನೀಡಿ” ಎಂದು ಮನವಿ ಮಾಡಿದ್ದರು. ದರ್ಶನ್ ಹೀಗೆ ಹೇಳಿದ್ದೇ ತಡ ರಾಜ್ಯಾದ್ಯಂತ ಅಭಿಮಾನಿಗಳು ಪ್ರಾಣಿಗಳನ್ನು ದತ್ತು ಪಡೆದರು. ಅಭಿಮಾನಿಗಳು ಮಾತ್ರವಲ್ಲ ಸಿನಿಮಾ ಗಣ್ಯರು ಕೂಡಾ ಆನೆ, ಹುಲಿ, ಸಿಂಹದಂತ ಪ್ರಾಣಿಗಳನ್ನು ದತ್ತು ಪಡೆದರು. ದರ್ಶನ್ ಅವರಿಗೆ ಚಿತ್ರರಂಗದಲ್ಲಿ ಹಾಗೂ ಹೊರಗೆ ಎಲ್ಲರೂ ಎಷ್ಟು ಗೌರವ ನೀಡುತ್ತಾರೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ.
ಇದೀಗ ಕ್ರಾಂತಿ ಸಿನಿಮಾದ ಗೆಲುವಿನ ನಂತರ ನಟ ದರ್ಶನ್ ಅವರಿಂದು ತಮ್ಮ ಸ್ನೇಹಿತರ ಜೊತೆ ಇಂದು ಪ್ರಮುಖ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ಅಲ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಸರತಿಯಲ್ಲಿಯೇ ನಿಂತು ಅನ್ನ ಪ್ರಸಾದದ ಸ್ವೀಕಾರ ಮಾಡಿದರು.
ತಮ್ಮ ಮೆಚ್ಚಿನ ನಟ ದೇವಸ್ಥಾನಕ್ಕೆ ಬಂದಿದ್ದಾರೆ ಎಂದು ತಿಳಿದ ಅಭಿಮಾನಿಗಳು ಅವರನ್ನು ನೋಡಲು ದೇವಸ್ಥಾನದ ಬಳಿ ಜಮಾಯಿಸಿದ್ದರು. ಒಂದೇ ಸಮ ಸ್ಥಳದಲ್ಲಿ ಸೇರುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಬಹಳ ಶ್ರಮ ಪಡಬೇಕಾಯ್ತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿ ಇದೆ. ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ನೋಡಲು ಕಾತರರಾಗಿದ್ದಾರೆ. ದರ್ಶನ್ ನಿವಾಸದ ಬಳಿ ಅಭಿಮಾನಿಗಳು ಜಮಾಯಿಸುವುದರಿಂದ ಅಲ್ಲಿ ಕೂಡಾ ಜನರನ್ನು ನಿಯಂತ್ರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಈ ನಡುವೆ ದರ್ಶನ್ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಮಾಡಿ ಬಂದಿದ್ದಾರೆ. ದರ್ಶನ್, ತಮ್ಮ ಸ್ನೇಹಿತರೊಂದಿಗೆ ಸೋಮವಾರ, ಚಾಮರಾಜನಗರದ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸಿ ಬಂದಿದ್ದಾರೆ.
ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ದರ್ಶನ್ ಅವರನ್ನು ಗೌರವಿಸಿದೆ. ಪೂಜೆ ಬಳಿಕ ಅಭಿಮಾನಿಗಳ ಪ್ರೀತಿಯ ಡಿ ಬಾಸ್, ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಮ್ಮ ಮೆಚ್ಚಿನ ನಟ ದೇವಸ್ಥಾನಕ್ಕೆ ಬಂದಿದ್ದಾರೆ ಎಂದು ತಿಳಿದ ಅಭಿಮಾನಿಗಳು ಅವರನ್ನು ನೋಡಲು ದೇವಸ್ಥಾನದ ಬಳಿ ಜಮಾಯಿಸಿದ್ದರು. ಒಂದೇ ಸಮ ಸ್ಥಳದಲ್ಲಿ ಸೇರುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಬಹಳ ಶ್ರಮ ಪಡಬೇಕಾಯ್ತು. ಅಭಿಮಾನಿಗಳು ದೂರದಿಂದಲೇ ತಮ್ಮ ಮೆಚ್ಚಿನ ನಟನನ್ನು ನೋಡಿ ಖುಷಿ ಪಟ್ಟರು