ಇಂದು ಚಂದನವನದ ಸ್ಟಾರ್ ಕಿಡ್ ದರ್ಶನ್ ಹಾಗೂ ವಿಜಯ ಲಕ್ಷ್ಮೀ ದಂಪತಿಗಳ ಮಗ ವಿನೀಶ್ ಗೆ ಹುಟ್ಟು ಹಬ್ಬದ ಸಡಗರ ಡಿ ಬಾಸ್ ದರ್ಶನ್ ಅಭಿಮಾನಿಗಳೆಲ್ಲರೂ ಮನಸಾರೆ ದರ್ಶನ್ ಮಗ ವಿನೀಶ್ ಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ತಮ್ಮ ಮುದ್ದು ಮಗನ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಾಕಿಕೊಂಡು ಹುಟ್ಟು ಹಬ್ಬದ ಶುಭಾಶಯಗಳು ಕೋರಿದ್ದಾರೆ. ಇಂದು ವಿಜಯಲಕ್ಷ್ಮಿ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮಗ ವಿನೀಶ್ ನ ಹುಟ್ಟುಹಬ್ಬ ವಿನೀಶ್ ಚಂದನವನದ ಸ್ಟಾರ್ ಕಿಡ್ ಆಗಿದ್ದು ಈತ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಮ್ಮಿ ವಿನೀಶ್ ತಮ್ಮ ತಂದೆ ದರ್ಶನ್ ಜೊತೆ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿನೀಶ್ ಈ ಹಿಂದೆ ರಾಬರ್ಟ್ ಚಿತ್ರದಲ್ಲೂ ಕೂಡ ನಟಿಸಿದ್ದರು.
ವಿಜಯಲಕ್ಷ್ಮಿ ದರ್ಶನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ಮಗ ವಿನೀಶ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇಂತಹ “ಬುದ್ಧಿವಂತ ವಿನಯವಂತ ಸುಂದರ ಸುರದ್ರೂಪಿ ಮಗನನ್ನು ನನಗೆ ನೀಡಿದ ಆ ದೇವರು ಕರುಣಾಮಯಿ ಆತನನ್ನು ಮಗನಾಗಿ ಪಡೆದ ನಾನು ಅದೃಷ್ಟವಂತೆ ಎನಿಸುತ್ತದೆ” ಎಂದು ಮುದ್ದು ಮಗ ವಿನೇಶ್ ಗೆ ವಿಜಯಲಕ್ಷ್ಮಿ ದರ್ಶನ್ ಟ್ವಿಟರ್ ನಲ್ಲಿ ಶುಭಾಶಯಗಳು ತಿಳಿಸಿದ್ದಾರೆ.
ಒಂದು ಸುಂದರವಾದ ಗಿಡ ಮರಗಳಿರುವ ತಾಣದಲ್ಲಿ ತೆಗೆದುಕೊಂಡ ಫೋಟೋ ಒಂದನ್ನು ಈ ಶುಭ ಹಾರೈಕೆಯ ಜೊತೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಅಭಿಮಾನಿಗಳು ಎಲ್ಲರೂ ಬಗೆ ಬಗೆಯಲ್ಲಿ ಕಾಮೆಂಟ್ ನಲ್ಲಿ ವಿಶ್ ಮಾಡಿದ್ದಾರೆ. ಅಭಿಮಾನಿಗಳು ವಿನೀಶ್ ನನ್ನು ಪ್ರೀತಿಯಿಂದ ಛೋಟಾ ಬಾಸ್ ಜೂನಿಯರ್ ಬಾಸ್ ಎಂದೆಲ್ಲ ಕರೆಯುತ್ತಾರೆ.
ಜೂನಿಯರ್ ಬಾಸ್ ವಿನೀಶ್ ಗೆ ಹುಟ್ಟು ಹಬ್ಬದ ಶುಭಾಶಯಗಳು ತಾಯಿ ಚಾಮುಂಡೇಶ್ವರಿ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನೂರು ಕಾಲ ಸುಖವಾಗಿ ಬಾಳಲಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಹಲವು ಅಭಿಮಾನಿಗಳು ವಿನೀಶ್ ಚಿಕ್ಕ ಪುಟ್ಟ ಪಾತ್ರಗಳಲ್ಲಿ ತೆರೆ ಮೇಲೆ ಕಾಣಬೇಕು ಎಂಬ ತಮ್ಮ ಬಯಕೆಯನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಡಿ ಬಾಸ್ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ರವರ ಮನೆಗೆ ತೆಗೆದುಕೊಂಡು ಹೋಗಿ ಚೋಟ ಬಾಸ್ ವಿನೇಶ್ ಗೆ ಹೂವಿನ ಹಾರವನ್ನು ಹಾಕಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಖುಷಿಯಿಂದ ಆಚರಿಸಿದ್ದಾರೆ.
ವಿದ್ಯಾಭ್ಯಾಸವಲ್ಲದೆ ಇನ್ನೂ ಹಲವು ಚಟುವಟಿಕೆಗಳಲ್ಲಿ ವಿನೀಶ್ ತುಂಬಾ ಚೂಟಿಯಾಗಿದ್ದಾನೆ ಈಗಾಗಲೇ ಈತ ಕುದುರೆ ಸವಾರಿಯನ್ನು ಕಲಿತಿದ್ದಾನೆ. ಈ ಹಿಂದೆ ದರ್ಶನ್ ರವರೆ ಖುದ್ದು ವಿನೀಶ್ ಗೆ ಕುದುರೆ ಸವಾರಿ ಹೇಳಿಕೊಟ್ಟಿದ್ದಾರೆ. ದರ್ಶನ್ ತಮ್ಮ ಮಗ ವಿನೀಶ್ ಗೆ ತಮ್ಮ ಫಾರ್ಮ್ ಹೌಸ್ ನಲ್ಲಿ ಕುದುರೆ ಸವಾರಿ ಹೇಳಿ ಕೊಡುತ್ತಿದ್ದ ವಿಡಿಯೋ ಈ ಹಿಂದೆ ಎಲ್ಲಾ ಕಡೆ ವೈರಲ್ ಆಗಿತ್ತು.
ದರ್ಶನ್ ತೂಗುದೀಪ್ ತಮ್ಮ ಮಗ ವಿನೀಶ್ ಗೆ ಅವನ ಹುಟ್ಟು ಹಬ್ಬದ ಸಲುವಾಗಿ ಎರಡು ಜೋಡಿ ನಾಯಿ ಮರಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಕಂಡು 13 ವರ್ಷದ ದರ್ಶನ್ ಮಗ ವಿನೀಶ್ ತುಂಬಾ ಖುಷಿ ಪಟ್ಟಿದ್ದಾನೆ.