ಡಿ ಬಾಸ್ ದರ್ಶನ್ ಇದೀಗ ತಮ್ಮ ಕ್ರಾಂತಿ ಸಿನಿಮಾದ ಪ್ರಮೋಶನ್ ನಲ್ಲಿ ಬಿಸಿಯಾಗಿದ್ದಾರೆ. ಡಿ ಬಾಸ್ ದರ್ಶನ್ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿ ಕೂಡ ಇರುತ್ತಾರೆ. ಆದರೆ ಒಬ್ಬ ವ್ಯಕ್ತಿ ಸರಿಯಾದ ಕೆಲಸಗಳನ್ನು ಮಾಡಿದಾಗ ಸರಿ ಎಂದೇ ಹೇಳಬೇಕು ಡಿ ಬಾಸ್ ದರ್ಶನ್ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ತಮ್ಮ ಫಾರ್ಮರ್ಸ್ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.
ಎಲ್ಲರಿಗೂ ತಿಳಿದಿರುವ ಹಾಗೆ ಮೈಸೂರು ರೋಡಿನ ಟೀ ನರಸೀಪುರ ರಸ್ತೆಯಲ್ಲಿ ಡಿ ಬಾಸ್ ದರ್ಶನ್ ರವರ ಫಾರ್ಮ್ ಹೌಸ್ ಇದೆ. ಈ ಫಾರ್ಮ್ ಹೌಸ್ ಬರೋಬ್ಬರಿ 15 ಎಕರೆಯಲ್ಲಿದ್ದು ಈ ಫಾರ್ಮ.ಹೌಸ್ ನಲ್ಲಿ ಹಣ್ಣಿನ ಮರ ಗಿಡಗಳು ಇವೆ ಕುದುರೆಗಳು ಪ್ರಾಣಿ-ಪಕ್ಷಿಗಳು ಇವೆ. ಹಾಗೆ ಒಂದು ಮನೆಯನ್ನು ಕೂಡ ಡಿ ಬಾಸ್ ದರ್ಶನ್ ಕಟ್ಟಿಸಿದ್ದಾರೆ. ಡಿ ಬಾಸ್ ದರ್ಶನ್ ಕೆಲವೊಮ್ಮೆ ಈ ಮನೆಗೆ ಹೋಗಿ ಉಳಿದುಕೊಳ್ಳುತ್ತಾರೆ.
ಈ ಫಾರ್ಮ್ ಹೌಸ್ ನ ಈ ಕೆಲಸ ಮಾಡುವುದಕ್ಕಾಗಿ ಹಲವಾರು ಕೆಲಸದವರನ್ನು ಕೂಡ ಡಿ ಬಾಸ್ ದರ್ಶನ್ ಇಟ್ಟುಕೊಂಡಿದ್ದಾರೆ. ಈ ಫಾರ್ಮ್ ಹೌಸ್ ನಲ್ಲಿ ಶಿವಮೊಗ್ಗ ಮೂಲದವರು ಕೂಡ ವಾಸಿಸುತ್ತಿದ್ದು ಗಂಡ ಹೆಂಡತಿ 10 ವರ್ಷದ ಮಗಳು ಮಗ ಅಲ್ಲೇ ವಾಸಿಸುತ್ತಿದ್ದಾರೆ. ಅಲ್ಲಿಯೇ ಬಿಹಾರ ಮೂಲಕ ಕಾರ್ಮಿಕ ಕೂಡ ಇದ್ದಾನೆ. ಈತ ಕುದುರೆ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದು ಒಮ್ಮೆ ತಂದೆ ತಾಯಿಯ ಕಣ್ಣು ತಪ್ಪಿಸಿ ಹತ್ತು ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರವನ್ನು ಮಾಡುತ್ತಾನೆ.
ತದನಂತರ ಈ ವಿಚಾರ ತಂದೆ ತಾಯಿಗೂ ಕೂಡ ತಿಳಿದು ಅವರು ಯಾರಿಗೂ ಹೇಳದಂತೆ ಒಂದೆರಡು ದಿನ ಸುಮ್ಮನೆ ಇರುತ್ತಾರೆ. ಈ ವಿಚಾರ ಸೆಪ್ಟೆಂಬರ್ ನಲ್ಲಿ ನಡೆದಿತ್ತು ತದನಂತರ ಈ ವಿಚಾರ ಡಿ ಬಾಸ್ ದರ್ಶನ್ ರವರಿಗೆ ತಿಳಿದು ಪೊಲೀಸ್ ಕಂಪ್ಲೇಂಟ್ ಕೊಡುವಂತೆ ಹೇಳುತ್ತಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ಕೂಡ ದಾಖಲಾಗುತ್ತದೆ. ತದನಂತರ ಈ ವಿಚಾರ ಮೀಡಿಯಾದಲ್ಲೆಲ್ಲಾ ಪ್ರಸಾರವಾಯಿತು.
ಪೋಕ್ಸೋ ಪ್ರಕರಣ ಅಡಿಯಲ್ಲಿ ಬಂದರೂ ಕೂಡ ತದನಂತರ ಏನಾಯಿತು ಎಂಬುದನ್ನು ತೋರಿಸಿರಲಿಲ್ಲ ಈ ವಿಚಾರವಾಗಿ ಡಿ ಬಾಸ್ ದರ್ಶನ್ ಕೋಪಗೊಂಡಿದ್ದರು ಡಿ ಬಾಸ್ ದರ್ಶನ್ ಅವರಿಗೆ ನ್ಯಾಯ ಕೊಡಿಸಬೇಕು ಎಂದು ಪಟ್ಟು ಹಿಡಿದು ಕುಳಿತರು ಮೊದಲಿಗೆ ಬಿಹಾರ ಮೂಲದ ವ್ಯಕ್ತಿಯನ್ನು ಪೊಲೀಸರಿಗೆ ಹಿಡಿದು ಕೊಟ್ಟರು ತದನಂತರ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಗರಿಷ್ಠ ವರ್ಷಗಳ ಶಿಕ್ಷೆಯನ್ನು ಆತನಿಗೆ ನೀಡಬೇಕು ಎಂದು ಸ್ವತಹ ದರ್ಶನ್ ರವರೆ ಶಿವಮೊಗ್ಗ ಮೂಲದ ಕಾರ್ಮಿಕರ ಪರವಾಗಿ ಹೋರಾಡುತ್ತಾರೆ.
ಅತ್ಯಾಚಾರ ಮಾಡಿದ ಯುವಕನಿಗೆ ಬರೋಬ್ಬರಿ 43 ವರ್ಷ ಶಿಕ್ಷೆಯಾಗುವಂತೆ ಡಿ ಬಾಸ್ ದರ್ಶನ್ ರವರು ಮಾಡುತ್ತಾರೆ.ಈ ವಿಚಾರವನ್ನು ಮೀಡಿಯಾದಲ್ಲಿ ಬಿತ್ತರಿಸಿದರೆ ಇಂತಹ ಹೀನ ಕೃತ್ಯಗಳನ್ನು ಎಸಗುವವರು ಇದನ್ನು ನೋಡಿ ಬುದ್ಧಿ ಕಲಿಯುತ್ತಾರೆ ಹಾಗಾಗಿ ನೀವು ಈ ವಿಚಾರವನ್ನು ವೈರಲ್ ಮಾಡಬೇಕು ಎಂದು ಸಂದರ್ಶನ ಒಂದರಲ್ಲಿ ಡಿ ಬಾಸ್ ದರ್ಶನ್ ತಿಳಿಸಿದ್ದಾರೆ.