ನಾನು ನಾಳೆ ಇರ್ತಿನೋ ಇಲ್ಲವೋ ಗೊತ್ತಿಲ್ಲ ಎಂದು ಸಂದರ್ಶನದ ವೇಳೆ ಭಾವುಕರಾದ ಡಿ ಬಾಸ್ ದರ್ಶನ್

ಡಿ ಬಾಸ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಬಿಡುಗಡೆಯಾಗುತ್ತದೆ ಎಂದು ಚಿತ್ರತಂಡವು ತಿಳಿಸಿದೆ. ಕ್ರಾಂತಿ ಸಿನಿಮಾ ಇದೀಗ ಬಾರಿ ಸದ್ದು ಮಾಡುತ್ತಿದೆ. ದರ್ಶನ್ ರವರು ತಮ್ಮ ಅಭಿಮಾನಿಗಳ ಜೊತೆಗೂಡಿ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ. ಇದೀಗ ದರ್ಶನ್ ರವರು ಸಂದರ್ಶನ ಒಂದರಲ್ಲಿ ನಾನು ನಾಳೆ ಇರ್ತಿನೋ ಇಲ್ಲವೋ ಗೊತ್ತಿಲ್ಲ ಎಂದು ಭಾವುಕರಾಗಿ ಮಾತನಾಡಿದ್ದಾರೆ.

 

 

ಡಿ ಬಾಸ್ ದರ್ಶನ್ ರವರು ಸಂದರ್ಶನದಲ್ಲಿ ಕ್ರಾಂತಿ ಸಿನಿಮಾಗಾಗಿ ತಮ್ಮ ಅಭಿಮಾನಿಗಳು ತಾವೇ ಪ್ರಚಾರವನ್ನು ಮಾಡುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ. ಡಿ ಬಾಸ್ ದರ್ಶನ್ ರವರನ್ನು ಮೀಡಿಯಾಗಳ ಬ್ಯಾನ್ ಮಾಡಿದ್ದರು ಹಾಗಾಗಿ ದರ್ಶನರವರು ಕೂಡ ಮೀಡಿಯಾಗಳಿಗೆ ಸೆಡ್ಡು ಹೊಡೆದು ನಿಮ್ಮ ಸಪೋರ್ಟ್ ಇಲ್ಲದೆ ನಾನು ನನ್ನ ಸಿನಿಮಾಗಳನ್ನು ಪ್ರಮೋಷನ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಇದೀಗ ಅವರು ಹೇಳಿದ ಮಾತನ್ನು ಉಳಿಸಿಕೊಳ್ಳಲು ನಟ ಡಿ ಬಾಸ್ ದರ್ಶನ್ ರವರ ಅಭಿಮಾನಿಗಳು ತಾವೇ ಸ್ವತಃ ಕ್ರಾಂತಿ ಸಿನಿಮಾದ ಪ್ರಮೋಷನ್ ಅನ್ನು ಮಾಡುತ್ತಿದ್ದಾರೆ.

 

ಡಿ ಬಾಸ್ ದರ್ಶನ್ ತಮ್ಮ ಅಭಿಮಾನಿಗಳು ತಮ್ಮ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿರುವುದರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕ್ರಾಂತಿ ಸಿನಿಮಾ ನನ್ನದಲ್ಲ ನಾನು ಅದನ್ನು ಯಾವತ್ತೂ ಅಭಿಮಾನಿಗಳ ಜೋಳಿಗೆಗೆ ಹಾಕಿಬಿಟ್ಟಿದ್ದೇನೆ. ಅಭಿಮಾನಿಗಳು ಕ್ರಾಂತಿ ಸಿನಿಮಾವನ್ನೂ ಯಾವ ರೀತಿ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವುದು ನಿಮಗೆ ಗೊತ್ತಿದೆ. ತಮ್ಮ ಯೂಟ್ಯೂಬ್ ಚಾನೆಲ್ ಗಳನ್ನು ಕೂಡ ಕ್ರಾಂತಿ ಸಿನಿಮಾದ ಬಗ್ಗೆ ವಿಡಿಯೋಗಳನ್ನು ಮಾಡುತ್ತಿರುತ್ತಾರೆ.ಅವರೆಲ್ಲ ಯಾರು ಎಂದು ನನಗೆ ಗೊತ್ತಿರುವುದಿಲ್ಲ ಒಂದು ಬಾರಿಯೂ ಕೂಡ ನಾನು ಅವರೊಂದಿಗೆ ಫೋಟೋ ಕೂಡ ತೆಗೆಸಿಕೊಂಡಿರುವುದಿಲ್ಲ, ಒಂದು ಬಾರಿಯೂ ಕೂಡ ನಾನು ಅವರಿಗೆ ಒಂದು ಬಾರಿಯೂ ಕೂಡ ಶೇಕ್ ಹ್ಯಾಂಡ್ ಅನ್ನು ಕೂಡ ನೀಡಿರುವುದಿಲ್ಲ
ಆದರೆ, ಅಭಿಮಾನಿಗಳು ನಮ್ಮನ್ನು ಈ ಮಟ್ಟಿಗೆ ಕಾಪಾಡುತ್ತಾರೆ ಇದನ್ನೆಲ್ಲ ನೋಡಿದಾಗ ನನಗೆ ನನ್ನ ಮೇಲೆ ಗಿಲ್ಟ್ ಕಾಡುತ್ತದೆ.

ನನ್ನ ಅಭಿಮಾನಿಗಳು ನನಗಾಗಿ ಏನೆಲ್ಲ ಮಾಡುತ್ತಿದ್ದಾರೆ ಆದರೆ ನಾನು ಇವರಿಗಾಗಿ ಏನನ್ನು ಮಾಡಲಿಲ್ಲವಲ್ಲ ಎಂಬ ಗಿಲ್ಟ ನನಗೆ ಯಾವಾಗಲೂ ಕಾಡುತ್ತಿರುತ್ತದೆ. ನನಗಾಗಿ ನನ್ನ ಸಿನಿಮಾಗಾಗಿ ಸಾಲು ಸಾಲು ಪ್ರಚಾರವನ್ನು ಮಾಡುತ್ತಿರುವ ಅಭಿಮಾನಿಗಳನ್ನು ನೋಡಿ ನನಗೆ ಏನು ಮಾತನಾಡಬೇಕು ಎಂದೇ ಗೊತ್ತಾಗುತ್ತಿಲ್ಲ. ನಾನು ಅಭಿಮಾನಿಗಳಿಗಾಗಿ ಅದನ್ನು ಮಾಡುತ್ತೇನೆ ಇದನ್ನು ಮಾಡುತ್ತೇನೆ ಎಂದು ಸುಳ್ಳು ಆಶ್ವಾಸನೆಗಳನ್ನು ನೀಡುವುದಿಲ್ಲ. “ನಾಳೆ ನಾನು ಇರುತ್ತೇನೋ ಇಲ್ಲವೋ” ಅದು ಕೂಡ ಗೊತ್ತಿಲ್ಲ ದಿನ ಎನ್ನುವುದು ಚಿಟಿಕೆ ಹೊಡೆದ ಹಾಗೆ ಮುಗಿದು ಹೋಗುತ್ತದೆ. ಆದರೆ ನಾನು ಇರುವಷ್ಟು ದಿನ ನನ್ನ ಅಭಿಮಾನಿಗಳಿಗೆ ಏನೇನು ಬೇಕು ಅದನ್ನೆಲ್ಲ ಮಾಡುತ್ತೇನೆ ಅವರನ್ನು ಹೀಗೆ ರಂಜಿಸುತ್ತಾ ಹೋಗುತ್ತೇನೆ. ನಾನು ಈ ಭೂಮಿಯಿಂದ ಹೋಗುವಾಗ ನನ್ನ ಅಭಿಮಾನಿಗಳ ಪ್ರೀತಿಯನ್ನು ಮಾತ್ರ ತೆಗೆದುಕೊಂಡು ಹೋಗಲು ಇಷ್ಟಪಡುತ್ತೇನೆ ಎಂದರು.

 

 

ಡಿ ಬಾಸ್ ದರ್ಶನ್ ರವರ ಸಿನಿಮವಾದ ಕ್ರಾಂತಿ ಸಿನಿಮಾದಲ್ಲಿ ರಚಿತಾ ರಾಮ್ ರವರು ನಟಿಯಾಗಿ ನಟಿಸುತ್ತಿದ್ದು ಡಿ ಬಾಸ್ ದರ್ಶನ್ ರವರನ್ನು ಈ ಹಿಂದೆ ಮೀಡಿಯಾದವರು ಬ್ಯಾನ್ ಮಾಡಿದ್ದರು ಹೀಗಾಗಿ ಅವರ ಅಭಿಮಾನಿಗಳೇ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ. ಇದರ ಕುರಿತು ಮಾತನಾಡಿದ ಡಿ ಬಾಸ್ ದರ್ಶನ್ ರವರು ಅಭಿಮಾನಿಗಳಿಗೆ ನಾನೇನೂ ಮಾಡಲೇ ಇಲ್ಲವಲ್ಲ ಎಂದು ಗಿಲ್ಟಿ ಫೀಲ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಹಾಗೆ ನಾನಿರುವಷ್ಟು ದಿನದಲ್ಲಿ ಅಭಿಮಾನಿಗಳಿಗಾಗಿ ಏನನ್ನಾದರೂ ಮಾಡುತ್ತೇನೆ. ಅವರು ನನಗಾಗಿ ಏನೇನೆಲ್ಲ ಮಾಡುತ್ತಿದ್ದಾರೆ ಈ ಪ್ರೀತಿಗೆ ನಾನು ಚಿರಋಣಿ ಎಂದು ಭಾವುಕರಾಗಿದ್ದಾರೆ.

Be the first to comment

Leave a Reply

Your email address will not be published.


*