ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟ ಹಾಗೂ ಹೊಸ ನಟರ ಜೊತೆಗೆ ಉತ್ತಮ ಸ್ನೇಹಿತರಾಗಿ ಕೆಲಸ ಮಾಡುತ್ತಿದ್ದರು ಅಜಾತಶತ್ರುವಾಗಿ ಎಲ್ಲರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು ಅಪ್ಪು ಯಾರೊಂದಿಗೂ ಕೂಡ ದ್ವೇಷವನ್ನು ಬಯಸಿರಲಿಲ್ಲ ಇವರ ಅಗಲಿಕೆಯ ವಿಚಾರವನ್ನು ಇಂದಿಗೂ ಕೂಡ ಅವರ ಅಭಿಮಾನಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಪುನೀತ್ ರವರ ಜೀವನದಲ್ಲಿ ಇಂತಹದೊಂದು ಕೆಟ್ಟ ಘಟನೆ ಬರುತ್ತದೆ ಎಂದು ಯಾರಿಗೂ ಕೂಡ ತಿಳಿದಿರಲಿಲ್ಲ ಅವರ ಕುಟುಂಬದವರೆಲ್ಲರೂ ಎಂದಿಗೂ ಕೂಡ ದುಃಖದಲ್ಲಿ ಇದ್ದಾರೆ. ಪುನೀತ್ ಹಾಗು ದರ್ಶನ್ ಉತ್ತಮ ಸ್ನೇಹಿತರಾಗಿದ್ದರು ದರ್ಶನ್ ರವರ ಪ್ರತಿ ವರ್ಷದ ಹುಟ್ಟುಹಬ್ಬಕ್ಕೂ ಕೂಡ ಅಪ್ಪು ಕಾಲ್ ಮಾಡಿ ವಿಶ್ ಮಾಡುತ್ತಿದ್ದರು.
ಆದರೆ ಈ ವರ್ಷ ದರ್ಶನ್ ರವರ ಹುಟ್ಟು ಹಬ್ಬದ ದಿನ ಅಪ್ಪು ನಮ್ಮ ಜೊತೆ ಇರಲಿಲ್ಲ ಈ ವರ್ಷ ದರ್ಶನ್ ರವರ ಹುಟ್ಟುಹಬ್ಬದ ದಿನ ಅಪ್ಪು ಮಗಳು ದ್ರೋಹಿ ಕರೆ ಮಾಡಿ ಹ್ಯಾಪಿ ಬರ್ತಡೆ ಅಂಕಲ್ ಪ್ರತಿ ವರ್ಷ ನನ್ನ ಅಪ್ಪಾಜಿ ನಿಮಗೆ ಕರೆ ಮಾಡಿ ಹುಟ್ಟು ಹಬ್ಬಕ್ಕೆ ಶುಭಾಶಯಗಳು ಎಂದು ತಿಳಿಸಿದರು ಆದರೆ ಈ ವರ್ಷ ಅಪ್ಪ ನಮ್ಮ ಜೊತೆಗಿಲ್ಲ ಆದರೆ ಅಪ್ಪನ ಪರವಾಗಿ ನಾನು ನಿಮಗೆ ವಿಶ್ ಮಾಡುತ್ತೇನೆ ಎಂದಿದ್ದಾರೆ.
ಅಪ್ಪನ ಪರವಾಗಿ ಮಗಳು ಧೃತಿ ದರ್ಶನ್ ಗೆ ಕರೆ ಮಾಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಕ್ಕೆ ದರ್ಶನ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಉತ್ತರಿಸಿದ ದರ್ಶನ್ ಅಪ್ಪು ಎಲ್ಲೂ ಹೋಗಿಲ್ಲ ಅವರು ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಕೂಡ ಜೀವಿಸುತ್ತಿದ್ದಾರೆ. ಎಂದು ಹೇಳಿ ಅಪ್ಪು ಮಗಳು ದೃತಿಗೆ ಸಮಾಧಾನ ಪಡಿಸಿದ್ದಾರೆ.