ಸ್ಯಾಂಡಲ್ ವುಡ್ ನ ಸಾಹಸಸಿಂಹ ಎದೆ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ದಾದಾ ಡಾಕ್ಟರ್ ವಿಷ್ಣುವರ್ಧನ್(Dr vishnuvardhan) ರವರ ಹಳೆ ಮನೆ ಇದ್ದ ಜಾಗದಲ್ಲೇ ಇದೀಗ ಹೊಸ ಬಂಗಲೆ ಒಂದನ್ನು ಅದ್ದೂರಿಯಾಗಿ ಕಟ್ಟಿಸಿದ್ದು ಅದರ ಗೃಹಪ್ರವೇಶ ಸಮಾರಂಭವು ಕೂಡ ನಟಿ ಅದಿತಿ ಪ್ರಭುದೇವ(Aditi Prabhu Deva) ಹಾಗೂ ಉದ್ಯಮಿ ಯಶಸ್ವಿರವರ ಮದುವೆಯ ದಿನವೇ ಅದ್ದೂರಿಯಾಗಿ ನಡೆದಿದೆ. ವಿಷ್ಣುವರ್ಧನ್ ರವರ ಮನೆ ಗೃಹಪ್ರವೇಶಕ್ಕೆ ಹಲವಾರು ಗಣ್ಯರು ಆಗಮಿಸಿದ್ದು ವಿಷ್ಣುವರ್ಧನ್ ರವರನ್ನು ನೆನೆದು ಭಾವುಕರಾಗಿದ್ದಾರೆ.
ನಟ ವಿಷ್ಣುವರ್ಧನ್ ತಾವು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಂತರ ಬೆಂಗಳೂರಿನ ಶಂಕರಪುರಂ ಎಂಬಲ್ಲಿ ಒಂದು ಬಾಡಿಗೆ ಮನೆಯಲ್ಲಿ ಜೀವಿಸುತ್ತಿದ್ದರು. ತದನಂತರ ಇವರು ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿ ಸೈಟ್ ಒಂದನ್ನು ಖರೀದಿಸಿ ಅಲ್ಲಿ ತಮಗೆ ಬೇಕಾದಂತೆ ಮನೆಯನ್ನು ಕೂಡ ಕಟ್ಟಿಸಿದರು ವಿಷ್ಣುವರ್ಧನ್ ರವರ ಅಳಿಯ ಅನಿರುದ್ಧ (Anirudh)ಇದೀಗ 2019ರಲ್ಲಿ ವಿಷ್ಣುವರ್ಧನ್ ರವರ ಮನೆಯನ್ನು ಕೆಡವಿ ಹೊಸ ಬಂಗಲೆ ಒಂದನ್ನು ನಿರ್ಮಾಣ ಮಾಡಿದ್ದಾರೆ.
ಡಾಕ್ಟರ್ ವಿಷ್ಣುವರ್ಧನ್ ರವರು ತಮ್ಮ ಮನೆಯನ್ನು ನವೀಕರಣ ಮಾಡಬೇಕು ಎನ್ನುವ ಕನಸನ್ನು ಹೊಂದಿದ್ದರು. ಇದೀಗ ಅವರ ಪತ್ನಿ ಭಾರತಿ ವಿಷ್ಣುವರ್ಧನ್ (Bharati vishnuvardhan)ರವರು ತಮ್ಮ ಹಳೆ ಮನೆಯನ್ನು ವಿನ್ಯಾಸಗೊಳಿಸಿದ್ದು ದಾದರವರ ಕನಸನ್ನು ಈಡೇರಿಸಿದ್ದಾರೆ. ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿರುವ ವಿಷ್ಣುವರ್ಧನ್ ರವರ ಮನೆಗೆ “ವಲ್ಮಿಕ” ಎಂದು ಹೆಸರನ್ನು ಇಟ್ಟಿದ್ದು ಬಂಗಲೆಯ ಮುಂಭಾಗದ ಗೇಟ್ ನಲ್ಲಿ ಸಿಂಹದ ಮುಖದ ಲಾಂಛನವನ್ನು ಕೂಡ ಇರಿಸಲಾಗಿದೆ.
ವಿಷ್ಣುವರ್ಧನ್ ಹಾಗೂ ಭಾರತಿ ವಿಷ್ಣುವರ್ಧನ್ ದಂಪತಿಗಳ ಮಕ್ಕಳಾದ ಕೀರ್ತಿ ಹಾಗೂ ಚಂದನ ಸೇರಿದಂತೆ ಅವರ ಅಳಿಯ ಅನಿರುದ್ಧ ಮೊಮ್ಮಕ್ಕಳು ಮುಂತಾದವರು ಗೃಹಪ್ರವೇಶದಲ್ಲಿ ಭಾಗಿಯಾಗಿ ಗೃಹಪ್ರವೇಶವನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ ಈ ಹಿನ್ನೆಲೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತೋತಾಪುರಿ ಚಿತ್ರದ ಖ್ಯಾತಿಯ ನಟ ಜಗ್ಗೇಶ್ ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ಅನುಸಿರಿ ಮನೆ ಮುಂತಾದ ಗಣ್ಯರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ವಿಷ್ಣು ದಾದಾ ರವರ ಮೊಮ್ಮಕ್ಕಳು ಕೂಡ ಗೃಹಪ್ರವೇಶ ಸಮಾರಂಭದಲ್ಲಿ ಮಿಂಚಿದ್ದು ವಿಡಿಯೋ ಒಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಷ್ಣುವರ್ಧನ್ ಗೃಹಪ್ರವೇಶದ ಹಿನ್ನೆಲೆಯಲ್ಲಿ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ(basava Raja bommai) ಅವರು ಕೂಡ ಹೊಸ ಮನೆಗೆ ಭೇಟಿ ನೀಡಿ ಹಾರೈಸಿದ್ದಾರೆ. ಮನೆಯನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಭಾರತೀಯ ವಿಷ್ಣುವರ್ಧನ್ ಹಾಗೂ ಅನಿರುದ್ರವರ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ. ಹಾಗೆಯೇ ವಿಷ್ಣುವರ್ಧನ್ ರವರು ತುಂಬಾ ಕಷ್ಟಪಟ್ಟು ಈ ಮನೆಯನ್ನು ಕಟ್ಟಿದ್ದಾರೆ. ಮೈಸೂರಿನಲ್ಲಿ ದಿವಂಗತ ನಟ ವಿಷ್ಣುವರ್ಧನ್ ರವರ ಸ್ಮಾರಕ ಮತ್ತು ಮ್ಯೂಸಿಯಂ ಅನ್ನು ಕೂಡ ನಿರ್ಮಾಣ ಮಾಡುತ್ತೇವೆ ಎಂದು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಆಶ್ವಾಸನೆಯನ್ನು ನೀಡಿದ್ದಾರೆ.
View this post on Instagram
ವಿಷ್ಣುವರ್ಧನ್ ರವರ ಮನೆಯ ಪ್ರವೇಶದ ಹಿನ್ನೆಲೆಯಲ್ಲಿ ಮಂಡ್ಯ ಸಂಸದ ಸುಮಲತಾ(sumalatha Ambarish) ಕೂಡ ಗೃಹಪ್ರವೇಶ ಸಮಾರಂಭಕ್ಕೆ ಭೇಟಿ ನೀಡಿದ್ದರು ಈ ವೇಳೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿ ನಟ ಅಂಬರೀಶ್ ರವರ ಕುಚುಕು ಗೆಳೆಯ ವಿಷ್ಣುವರ್ಧನ್ ರವರ ಕನಸಿನ ಅರಮನೆ ಇದೀಗ ವಿನ್ಯಾಸಗೊಂಡು ಬಂಗಲೆಯಾಗಿ ತಲೆಯೆತ್ತಿದೆ. ಈ ಮನೆಗೆ ವಲ್ಮೀಕ ಎಂದು ಹೆಸರಿಟ್ಟಿದ್ದು ಹೊಸ ಮನೆಯ ಗೃಹಪ್ರವೇಶಕ್ಕೆ ನಾನು ಕೂಡ ಹೋಗಿದ್ದೆ ಮನೆಯಲ್ಲಿ ಸದಾ ಸಂಭ್ರಮವೇ ತುಂಬಿರಲಿ ಎಂದು ಆಶಿಸುತ್ತೇನೆ ಅಂಬರೀಶ್‍ರವರ ಪರವಾಗಿಯೂ ಕೂಡ ಭಾರತಿ ಅಮ್ಮನವರಿಗೆ ಹೊಸ ಮನೆಯ ಗೃಹಪ್ರವೇಶದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.