ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಅವರ ಮಗಳು ಗೀತಾಂಜಲಿಯ ವಿವಾಹ ಮಹೋತ್ಸವದ ಭರ್ಜರಿ ತಯಾರಿ ನಡೆಯುತ್ತಿದೆ. ರವಿಚಂದ್ರನ್ ತಮ್ಮ ಮಗಳು ಗೀತಾಂಜಲಿ ವಿವಾಹವನ್ನು ಅರಮನೆ ಮೈದಾನದ ಆವರಣದಲ್ಲಿ ಮಾಡಲು ನಿಶ್ಚಯಿಸಿದ್ದಾರೆ. ರವಿಚಂದ್ರನ್ ತಮ್ಮ ಮಗಳು(crazy star Ravichandran daughter) ಗೀತಾಂಜಲಿ ಮದುವೆ ಎಂದು ಶಾಸ್ತ್ರೋತ್ತವಾಗಿ ಸಂಪ್ರದಾಯ ಬದ್ಧವಾಗಿ ನಡೆಸುತ್ತಿದ್ದು ಚಿತ್ರರಂಗದ ಹಲವಾರು ಗಣ್ಯರನ್ನು ಮದುವೆಗೆ ಆಹ್ವಾನಿಸಿದ್ದಾರೆ.
ಪ್ರೇಮಲೋಕದ ಕನಸುಗಾರ ರವಿಚಂದ್ರನ್ ತಮ್ಮ ಮಗಳು ಗೀತಾಂಜಲಿ ಮದುವೆಯ ತಯಾರಿಯನ್ನು ಭರ್ಜರಿಯಾಗಿ ನಡೆಸುತ್ತಿದ್ದು ಕ್ರೇಜಿ ಸ್ಟಾರ್ ಕುಟುಂಬದವರೆಲ್ಲರೂ ಮದುವೆಯ ಬಗ್ಗೆ ಸಂತಸ ಪಡುತ್ತಿದ್ದಾರೆ. ರವಿಚಂದ್ರನ್ ತಮ್ಮ ಮುದ್ದು ಪುತ್ರಿ ಗೀತಾಂಜಲಿಯ ಮದುವೆಯ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದರು ಅದೇ ರೀತಿ ಆ ಕನಸನ್ನು ನನಸು ಮಾಡಲು ಇದೀಗ ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಿದ್ದಾರೆ.
ತಮ್ಮ ಮಗಳ ಮದುವೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಟ್ಟುಕೊಂಡಿದ್ದು ತಮ್ಮ ಮಗಳ ಮದುವೆಗೆ ಸ್ಯಾಂಡಲ್ ವುಡ್ನ ಹಲವಾರು ಗಣ್ಯರನ್ನು ಕರೆದಿದ್ದಾರೆ. ತಮ್ಮ ಸ್ನೇಹಿತರು ನೆಂಟರು ಬಂಧು ಮಿತ್ರರು ಚಲನಚಿತ್ರ ರಂಗದ ಹಲವಾರು ಸ್ಟಾರ್ ನಟ ನಟಿಯರು ಕೂಡ ಬಂದು ವಧು ವರರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ರವಿಚಂದ್ರನ್ ತಮ್ಮ ಮಗಳು ಗೀತಾಂಜಲಿ ಮದುವೆಯಲ್ಲಿ ತಮ್ಮ ಕುಟುಂಬದ ಸದಸ್ಯರ ಜೊತೆಗೂಡಿ ಹಾಡಿಗೆ ಹೆಜ್ಜೆ ಹಾಕಿ ನೃತ್ಯ ಮಾಡಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ರವಿಚಂದ್ರನ್ ತಮ್ಮ ಗಂಡು ಮಕ್ಕಳು ಹೆಂಡತಿ ಹಾಗೂ ಕುಟುಂಬದ ಸದಸ್ಯರೊಡನೆ ಸಂಪ್ರದಾಯ ಬದ್ಧವಾಗಿ ತಮ್ಮ ಮಗಳ ಮದುವೆ ಮಾಡುತ್ತಿದ್ದು ಮಗಳ ಮದುವೆಯ ದಿನ ಸಂತೋಷದಿಂದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರವಿಚಂದ್ರನ್ ಮಗಳು ಗೀತಾಂಜಲಿ ಮದುವೆಗೆ ರವಿಚಂದ್ರನ್(Ravichandran) ರವರಿಗೆ ಆಪ್ತರಾದ ಡಿ ಬಾಸ್ ದರ್ಶನ್ ಪತ್ನಿ ವಿಜಯಲಕ್ಷ್ಮಿ(Darshan wife Vijayalakshmi) ಕೂಡ ಆಗಮಿಸಿದ್ದರು ವಿಜಯಲಕ್ಷ್ಮಿ ಕೂಡ ಕ್ರೇಜಿಸ್ಟಾರ್ ಪುತ್ರಿಯ ವಿವಾಹ ಮಹೋತ್ಸವದಲ್ಲಿ ಡ್ಯಾನ್ಸ್ ಮಾಡಿದ್ದು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್(viral video) ಆಗುತ್ತಿದೆ