ದಿಗಂತ್ ಹಾಗೂ ಅನಂತ್ ನಾಗ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ತಿಮ್ಮಯ್ಯ ತಿಮ್ಮಯ್ಯ ಸಿನಿಮಾದ ಸಂದರ್ಶನ ಒಂದರಲ್ಲಿ ದಿಗಂತ್ ಮಾತನಾಡಿ ಡಿ ಬಾಸ್ ದರ್ಶನ್ ತಮಗೆ ಮಾಡಿರುವ ಸಹಾಯ ಹಾಗೂ ಅವರ ಜೊತೆ ಶೂಟಿಂಗ್ನಲ್ಲಿ ಹೇಗಿರುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಡಿ ಬಾಸ್ ದರ್ಶನ್ ರವರು ಶೂಟಿಂಗ್ ಗೆ ಹೋದ ಎಲ್ಲರಿಗೂ ಕೂಡ ಪೆಟ್ರೋಲ್ ಅನ್ನು ಅರೇಂಜ್ ಮಾಡುತ್ತಿದ್ದರು. ಡಿ ಬಾಸ್ ದರ್ಶನ್ ಅವರ ಜಿಪ್ಸಿ ಒಂದಿದೆ ಅದರಲ್ಲಿ ಸ್ಟವ್ ಊಟ ದಿನಸಿ ಸಾಮಗ್ರಿಗಳನ್ನು ತುಂಬಿರುತ್ತದೆ. ಯಾರಾದರೂ ಒಬ್ಬರಿಗೆ ಹಸಿವಾಗಿದ್ದರೂ ಕೂಡಲೆ ಡಿ ಬಾಸ್ ದರ್ಶನ್ ತಕ್ಷಣವೇ ಗಾಡಿಯನ್ನು ಪಕ್ಕದಲ್ಲಿ ನಿಲ್ಲಿಸಿ ಕುಕ್ ಬಂದು ಬ್ರೆಡ್ ಆಮ್ಲೆಟ್ ಹಾಗೂ ಹಲವಾರು ರೀತಿಯ ಅಡುಗೆಗಳನ್ನು ಮಾಡಿಕೊಡುತ್ತಿದ್ದರು. ಡಿ ಬಾಸ್ ದರ್ಶನ್ ತಮ್ಮ ಸಿನಿಮಾ ಸೆಟ್ನಲ್ಲಿ ಯಾರಿಗಾದರೂ ಹೊಟ್ಟೆ ಹಸಿವು ಅಂದರೆ ತಕ್ಷಣ ಊಟ ಕೂಡ ನೀಡುತ್ತಿದ್ದರು ಯಾರ ಹಸಿವನ್ನು ಕೂಡ ಸಹಿಸುತ್ತಿರಲಿಲ್ಲ.
ಡಿ ಬಾಸ್ ದರ್ಶನ್ ರವರ ಜೊತೆಗೆ ಚೌಕ ಸಿನಿಮಾದಲ್ಲಿ ನಟಿಸಿದ್ದೇನೆ ಮಂಡ್ಯ ಎನ್ನುವ ಸಿನಿಮಾದಲ್ಲೂ ಕೂಡ ಅವರ ತಮ್ಮನಾಗಿ ನಟಿಸಿದ್ದೆ. ಮಂಡ್ಯ ಚಿತ್ರವನ್ನು ಓಂ ಪ್ರಕಾಶ್ ಸರ್ ನಿರ್ದೇಶಿಸಿದ್ದರು ಫೈಟ್ ಸೀನ್ಗಳು ಕೂಡ ಇದ್ದವು ನಾನು ಫೈಟ್ ಮಾಡುತ್ತಿದ್ದೇನೆ ಆಗ ನನಗೆ ಸುಸ್ತಾಗುತ್ತದೆ ನನಗೆ ಆಗ ಕೇಡಿಗಳನ್ನು ಒಡೆಯಲು ಸಾಧ್ಯವಾಗುತ್ತಿಲ್ಲ ಆಗ ಡಿ ಬಾಸ್ ದರ್ಶನ್ ಬಂದು ನನ್ನ ಅಣ್ಣನ ಕ್ಯಾರೆಕ್ಟರಿನಲ್ಲಿ ನನಗೆ ಸಹಾಯ ಮಾಡುವಂತೆ ಅವರ ಜೊತೆ ಫೈಟ್ ಕೂಡ ಮಾಡುತ್ತಾರೆ.
ನಾನು ನನ್ನ ಸ್ನೇಹಿತರಿಗೆಲ್ಲ ಬಿಲ್ಡಪ್ ಕೊಟ್ಟು ಬರೋ ಸಿನಿಮಾ ಹಾಗಿದೆ ಈಗಿದೆ ಎಂದು ಕರೆದುಕೊಂಡು ಹೋಗಿದ್ದೆ ಆದರೆ ಸಿನಿಮಾದಲ್ಲಿ ನನ್ನದು ಒಂದೇ ಒಂದು ಡೈಲಾಗ್ ಮಾತ್ರ ಇತ್ತು. ಆದರೆ ಈ ಘಟನೆಯಿಂದ ನನಗೆ ಬೇಜಾರಿಲ್ಲ ಆ ಸಮಯದಿಂದನೇ ದರ್ಶನ್ ಸರ್ ನನಗೆ ಫ್ರೆಂಡ್ ಆಗಿದ್ದರು.
ಡಿ ಬಾಸ್ ದರ್ಶನ್ ರವರು ಬೈಕ್ ರೈಡ್ ಮಾಡಲು ಪ್ಲಾನ್ ಮಾಡಿದರೆ ನನಗೆ ಮೊದಲು ಕಾಲ್ ಮಾಡುತ್ತಾರೆ. ಡಿ ಬಾಸ್ ದರ್ಶನ್ ರವರಿಗೆ ಪ್ರಾಣಿ ಹಾಗೂ ಪಕ್ಷಿಗಳು ತುಂಬಾ ಇಷ್ಟ ಅವರು ವೈಲ್ಡ್ ಲೈಫ್ ಫೋಟೋಗ್ರಾಫ್ ಎಂದು ಕೂಡ ಮಾಡುತ್ತಾರೆ. ಅವರು ತುಂಬಾ ಅದ್ಭುತವಾಗಿ ಫೋಟೋಗಳನ್ನು ತೆಗೆದಿದ್ದಾರೆ. ತುಂಬಾ ಪೇಷನ್ಸ್ ಇಂದ ಫೋಟೋಗಳನ್ನು ತೆಗೆಯುತ್ತಾರೆ. ಯಾವುದೋ ಒಂದು ಪಕ್ಷಿಗಾಗಿ 12 ದಿನಗಳ ಕಾಲ ಕಾದು ತದನಂತರ ಅದು ಬಂದಾಗ ಫೋಟೋವನ್ನು ತೆಗೆದುಕೊಂಡಿದ್ದಾರೆ. ಡಿ ಬಾಸ್ ದರ್ಶನ್ ರವರಿಗೆ ವನ್ಯಜೀವಿಗಳ ಮೇಲೆ ಇರುವ ಪ್ರೀತಿಯನ್ನು ನಾನು ಬೇರೆ ಯಾವ ಮನುಷ್ಯನಲ್ಲೂ ಕೂಡ ಕಾಣಲೇ ಇಲ್ಲ ಎಂದರು.
ಪೆಟ್ರೋಲ್ ಬಂಕ್ ಗೆ ಹೋದಾಗ ಪೆಟ್ರೋಲ್ ಆದ್ರೂ ನಮ್ಮ ದುಡ್ಡಿನಲ್ಲಿ ಹಾಕಿಕೊಂಡು ಹೋಗುತ್ತಿದ್ದೆವು ಆದರೆ ಅಲ್ಲಿಗೂ ಕೂಡ ಡಿ ಬಾಸ್ ದರ್ಶನ್ ರವರು ಬಂದು “ಯಾವನಾದರೂ ಪಾಕೆಟ್ ಗೆ ಕೈ ಹಾಕಿದರೆ ಒದೆ ತಿಂತಿರಾ” ಎಂದು ನಮಗೆಲ್ಲ ಅವಾಜ್ ಹಾಕಿ ಹತ್ತು ಹನ್ನೆರಡು ಬೈಕುಗಳಿದ್ದರೂ ಕೂಡ ಅವಕ್ಕೆಲ್ಲ ಪೆಟ್ರೋಲ್ ತುಂಬಿಸುತ್ತಿದ್ದರು. ಎಲ್ಲವು ಕೂಡ ಸೂಪರ್ ಬೈಕ್ ಆಗಿದ್ದು ಅವು ಸುಮಾರು ಲೀಟರ್ ಪೆಟ್ರೋಲ್ ಕುಡಿಯುತ್ತವೆ ಆದರೆ ಡಿ ಬಾಸ್ ದರ್ಶನ್ ಆ ಎಲ್ಲಾ ಗಾಡಿಗಳಿಗೂ ಕೂಡ ಪೆಟ್ರೋಲ್ ತುಂಬಿಸುತ್ತಿದ್ದರು ಅಂತಹ ವ್ಯಕ್ತಿತ್ವವನ್ನು ನಾನು ಇಂದಿಗೂ ಕೂಡ ನೋಡಿಲ್ಲ ಎಂದರು