ಸಿನಿಮಾ ಮತ್ತು ಕ್ರೀಡೆಗೆ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಕ್ರಿಕೆಟ್ ಮತ್ತು ಸಿನಿಮಾಕ್ಕೆ. ಕ್ರಿಕೆಟ್ ಟೂರ್ನಮೆಂಟ್ ಗಳಿಗೆ ಸಿನಿಮಾ ಸೆಲೆಬ್ರಿಟಿಗಳನ್ನು ಆಹ್ವಾನಿಸಿದ ಉದಾಹರಣೆಗಳು ಸಾಕಷ್ಟಿವೆ. ಈ ಸಿನಿಮಾಗಳ ಕೆಲವು ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಗಳಾಗಿ ಕ್ರಿಕೆಟಿಗರೂ ಆಗಮಿಸಿದ್ದಾರೆ. ಕ್ರಿಕೆಟಿಗರು, ಸಿನಿಮಾ ನಟರು ಕಾರ್ಯಕ್ರಮದಲ್ಲಷ್ಟೇ ಅಲ್ಲ ಖುದ್ದು ಭೇಟಿಯಾದ ಸಂದರ್ಭಗಳೂ ಇವೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಯಾಂಡಲ್ ವುಡ್ ಸಿನಿ ಎಲೈಟ್ ಕೆಸಿಸಿ ಟೂರ್ನಮೆಂಟ್ ನಡೆಯುತ್ತಿದೆ. ಈ ಪಂದ್ಯಗಳಲ್ಲಿ ನಟ ಯಶ್ ಭಾಗವಹಿಸಿರಲಿಲ್ಲ. ಆದರೆ, ಯಶ್ ಕ್ರಿಕೆಟಿಗರಿಂದ ದೂರವಾಗಿಲ್ಲ. ಇದಕ್ಕೆ ತಾಜಾ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ.

ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ನಟ ಯಶ್ ಅವರನ್ನು ಭೇಟಿಯಾಗಿದ್ದಾರೆ. ಯಶ್ ಜೊತೆಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆರ್ಸಿಬಿ ಆಟಗಾರರೂ ಆಗಿರುವ ದಿನೇಶ್ ಕಾರ್ತಿಕ್ ಅವರು ತಮ್ಮ ಹಾಗೂ ನಟ ಯಶ್ ಇರುವ ಫೋಟೋಗೆ ‘ಸಲಾಮ್ ರಾಕಿ ಭಾಯ್’ ಎಂದು ಶೀರ್ಷಿಕೆ ನೀಡಿದ್ದಾರೆ.
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂತರಾಷ್ಟ್ರೀಯ ಕ್ರಿಕೆಟಿಗರೊಬ್ಬರು ಕನ್ನಡದ ನಟರನ್ನು ಭೇಟಿ ಮಾಡಿದ ಫೋಟೋ ಪೋಸ್ಟ್ ಮಾಡಿದ್ದು, ರಾಕಿಂಗ್ ಸ್ಟಾರ್ ಯಶ್ ಸಾಹಸಕ್ಕೆ ಕನ್ನಡಿಯಾಗಿದೆ.
ಯಶ್ ನ ಭೇಟಿಯಾಗಿ ಸಾಲಾಂ ಎಂದ ಕ್ರಿಕೇಟಿಗ ದಿನೇಶ್ ಕಾರ್ತಿಕ್