ರವಿಚಂದ್ರನ್ ಎಲ್ಲವನ್ನು ಕಳೆದುಕೊಂಡು ಬಿಕಾರಿಯಾಗಿದ್ದಾನೆ ಎಂದವರಿಗೆ ರವಿಮಾಮ ಖಡಕ್ಕಾಗಿ ಉತ್ತರ ನೀಡಿದ್ದಾರೆ :ಹೊಸ ಅಧ್ಯಾಯ ಶುರು

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದಲ್ಲಿ ಪ್ರೇಮ ಲೋಕವನ್ನು ಸೃಷ್ಟಿಸಿದ್ದಾರೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ರವಿಚಂದ್ರನ್ ರವರು ಸಿನಿಮಾವನ್ನು ಮಾಡುತ್ತಿದ್ದಾರೆ ಎಂದರೆ ಅವರು ಸಿನಿಮಾವನ್ನು ನೋಡಲು ಕಾತುರತೆಯಿಂದ ಕಾಯುತ್ತಿದ್ದ ಅಭಿಮಾನಿ ಬಳಗವೇ ಇತ್ತು. ಅಷ್ಟರಮಟ್ಟಿಗೆ ರವಿಮಾಮ ತಮ್ಮ ಸಿನಿಮಾದಲ್ಲಿ ಹೊಸತನವನ್ನು ಹಾಗೂ ವೈಜ್ಞಾನಿಕತೆ ತಂತ್ರಜ್ಞಾನವನ್ನು ಸೃಷ್ಟಿಸುತ್ತಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕನ್ನಡ ಚಿತ್ರರಂಗಕ್ಕೆ ಹಲವಾರು ಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ರವಿಮಾಮನ ಚಿತ್ರಗಳು ಎಂದರೆ ಅಲ್ಲಿ ರೋಮ್ಯಾಂಟಿಕ್ ದೃಶ್ಯಗಳು ಇದ್ದೇ ಇರುತ್ತಿದ್ದವು ಇವತ್ತಿಗೂ ರವಿಚಂದ್ರನ್ ಯಾವುದಾದರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂದರೆ ಅದರಲ್ಲಿ ರೋಮ್ಯಾಂಟಿಕ್ ದೃಶ್ಯಗಳು ಇದ್ದೇ ಇರುತ್ತವೆ.

 

 

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಆ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ರವಿ ಬೋಪಣ್ಣ ಚಿತ್ರದ ಬಗ್ಗೆ ಅಭಿಮಾನಿಗಳೆಲ್ಲ ಬಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು ಈ ಚಿತ್ರ ರಾಜ್ಯದಾದ್ಯಂತ ತೆರೆಕಂಡಿತ್ತು. ರವಿ ಬೋಪಣ್ಣ ಚಿತ್ರದ ಟ್ರೈಲರ್ ಕೂಡ ಸದ್ದು ಮಾಡಿತ್ತು ಆದರೆ, ಈ ಸಿನಿಮಾ ಅಷ್ಟಾಗಿ ಚಲನಚಿತ್ರ ಮಂದಿರಗಳಲ್ಲಿ ಯಶಸ್ಸು ಕಾಣಲಿಲ್ಲ. ಹೀಗಾಗಿ ರವಿಚಂದ್ರನ್ ಎಲ್ಲಾ ಸಿನಿಮಾಗಳಲ್ಲೂ ಸೋಲುತ್ತಲೇ ಇದ್ದಾರೆ, ಈ ಸಿನಿಮಾದಲ್ಲಿ ಸೋತಿದ್ದಾರೆ ಇನ್ನು ರವಿಚಂದ್ರನ್ ಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವ ಮಾತುಗಳನ್ನು ಹಲವರು ಹೇಳುತ್ತಲೆ ಇದ್ದರು. ಹೀಗಿರುವಾಗ ಅವರ ಮಾತುಗಳಿಗೆ ರವಿಚಂದ್ರನ್ ರವರು ಎದುರೇಟು ನೀಡಿದ್ದಾರೆ.

 

 

ಸದ್ಯಕ್ಕೆ ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ರವಿಮಾಮ ಕಾಣಿಸಿಕೊಳ್ಳುತ್ತಿದ್ದಾರೆ ಒಮ್ಮೆ ಕಾಮಿಡಿ ಕಿಲಾಡಿ ವೇದಿಕೆ ಮೇಲೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾತನಾಡಿ ನಾನು ನನ್ನ ಬಳಿ ಇರುವ ಎಲ್ಲ ದುಡ್ಡನ್ನು ಕಳೆದುಕೊಂಡೆ ನನ್ನ ಮನೆಯನ್ನು ಕೂಡ ಮಾರಿದೆ ಎಂದು ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ನಾನು ದುಡ್ಡನ್ನು ಕಳೆದುಕೊಂಡಿದ್ದು ಇವತ್ತಲ್ಲ ನಾನು ಮೂವತ್ತು ವರ್ಷಗಳಿಂದ ಸತತವಾಗಿ ಹಣವನ್ನು ಕಳೆದುಕೊಳ್ಳುಟ್ಟಿದ್ದೇನೆ. ಹಣವನ್ನು ಕಳೆದುಕೊಂಡರು ಕೂಡ ನಗುತ್ತಲೇ ಬದುಕಿದ್ದೇನೆ ಆದರೆ ಈವರೆಗೂ ನಿಮಗೆ ಯಾರಿಗೂ ಅರ್ಥವಾಗಿಲ್ಲ ನಾನು ಕಳೆದುಕೊಂಡಿರುವ ಹಣವೆಲ್ಲ ನನಗಾಗಿ ಅಲ್ಲ ನಿಮಗಾಗಿ ಎಂದು ನಾನು ನನ್ನ ಹಣವನ್ನೆಲ್ಲ ಕಳೆದುಕೊಂಡಿದ್ದು ನಿಮ್ಮ ಮನಸ್ಸನ್ನು ಗೆಲ್ಲುವುದಕ್ಕಾಗಿ ಎಲ್ಲವನ್ನು ಕಳೆದುಕೊಂಡು ಬಿಟ್ಟಿದ್ದೇನೆ ಆದರೂ ನನಗೆ ಬೇಸರವಿಲ್ಲ ನಾನು ನಿಮ್ಮ ಮನಸ್ಸನ್ನು ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೇನೆ.

ನನಗೆ ಆ ಆವೇಶ ಮಾತ್ರ ಎಂದಿಗು ಕಡಿಮೆ ಆಗುವುದಿಲ್ಲ. ಎಂದಿಗೂ ಕೂಡ ಕಡಿಮೆ ಆಗಿಲ್ಲ ಯಾರು ಏನೇ ಮಾತನಾಡಲಿ, ನನ್ನ ಬಗ್ಗೆ ಏನೇ ಕೆಟ್ಟದಾಗಿ ಪ್ರಚಾರ ಮಾಡಲಿ ಅದರ ಬಗ್ಗೆ ನನಗೆ ಚಿಂತೆ ಇಲ್ಲ. ನಾನು ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೇನೆ ಎಂಬ ನಂಬಿಕೆ ನನಗೆ ಇದ್ದೇ ಇದೆ. ನೀವು ಕೂಡ ನನ್ನನ್ನು ಗೆಲ್ಲಿಸುತ್ತೀರಾ ಎಂಬ ನಂಬಿಕೆಯು ಕೂಡ ನನ್ನಲ್ಲಿದೆ. ನಾನು ರವಿಚಂದ್ರನ್, ರವಿಚಂದ್ರನ್ ನನ್ನೆ ಗೆಲ್ಲುವುದಕ್ಕೆ ಆಗುತ್ತಿಲ್ಲ ನಾನು ಗೆಲ್ಲುವುದು ಇನ್ಯಾರಿಗೋಸ್ಕರ ಅಲ್ಲ. ನಾನು ಬೇರೆಯವರನ್ನು ಗೆಲ್ಲಬೇಕಾಗಿಯೂ ಇಲ್ಲ ನಾನು ನನ್ನನ್ನೇ ಮತ್ತೆ ಮತ್ತೆ ಗೆಲ್ಲಬೇಕಿದೆ.

ನಾನು ಹೆಚ್ಚಾಗಿ ದುಡ್ಡನ್ನು ದುಡಿದೆ ಇಲ್ಲ ನನಗೆ ಈಗ ಅವಶ್ಯಕತೆಗೆ ದುಡ್ಡು ಬೇಕಾಗಿಯು ಇಲ್ಲ ಆದರೆ, ನನಗೆ ದುಡ್ಡು ಬೇಕಾಗಿರುವುದು ಸಿನಿಮಾ ಮಾಡುವುದಕ್ಕಾಗಿ ಸಿನಿಮಾ ಮಾಡುವ ಕಾರಣ ಒಂದಿಟ್ಟುಕೊಂಡು ನನಗೆ ಹಣವು ಬೇಕಾಗಿದೆ. ಅದೊಂದೇ ಕಾರಣಕ್ಕೆ ಇವತ್ತಿಗೂ ನಾನು ಇಲ್ಲಿ ಬಂದು ಕುಳಿತುಕೊಂಡಿದ್ದೇನೆ ನಾನು ಸಂಪಾದನೆ ಮಾಡುವುದು ರಾಯಲ್ ಆಗಿ ಬದುಕುವುದಕ್ಕಲ್ಲ ರಾಯಲ್ ಆಗಿ ಸಿನಿಮಾ ಮಾಡುವುದಕ್ಕೆ ಎಂದಿದ್ದಾರೆ.

 

ಇನ್ನು ಕೇವಲ ಒಂದು ತಿಂಗಳಲ್ಲಿ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು ಅನಿಸುತ್ತಿದೆ ಸಿನಿಮಾ ಸೋತಿದ್ದರಿಂದ ನನಗೆ ಬೇಜಾರಾಯ್ತು ಅಂತ ನಿಮಗೆ ಅನ್ನಿಸಿರಬಹುದು ಅದು ಸುಳ್ಳು ನಾನು ನಿಮ್ಮನ್ನು ಮೆಚ್ಚಿಸಲು ಆಗಲಿಲ್ಲ, ನಿಮ್ಮನ್ನು ಗೆಲ್ಲಲು ಆಗಲಿಲ್ಲ ಎಂಬುದೇ ನನ್ನ ದೊಡ್ಡ ಬೇಸರವಾಗಿದೆ. ಈ ದಶಕಗಳ ಹಿಂದೆ ನಾನು ಮಾಡಿದ ಸಿನಿಮಾಗಳೆಂದರೆ, ಅಭಿಮಾನಿಗಳು ಚಲನಚಿತ್ರ ಮಂದಿರಕ್ಕೆ ನುಗ್ಗಿ ಬರುತ್ತಿದ್ದರು ಆದರೆ, ಅಂತಹ ದೃಶ್ಯವನ್ನು ನಾನು ಈಗ ನೋಡಲು ಸಾಧ್ಯವಾಗುತ್ತಿಲ್ಲ. ಒಂದಲ್ಲ ಒಂದು ದಿನ ನೀವೆಲ್ಲರೂ ನನ್ನ ಸಿನಿಮಾಕ್ಕೆ ಚಲನಚಿತ್ರ ಮಂದಿರದಲ್ಲಿ ನುಗ್ಗಿ ಮತ್ತೆ ಬರುತ್ತೀರಿ ಎಂಬುವ ಭರವಸೆ ನನ್ನಲ್ಲಿದೆ ಆ ಭರವಸೆಯನ್ನು ಇಟ್ಟುಕೊಂಡೇ ಈ ಮಾತುಗಳನ್ನು ಆಡುತ್ತಿದ್ದೇನೆ. ಇದು ನಾನು ನಿಮಗೆ ಕೊಡುವ ಮಾತಾಗಿದೆ ಇದನ್ನು ಒಂದಲ್ಲ ಒಂದು ದಿನ ನಾನು ಮಾಡುತ್ತೇನೆ.

 

 

ನಾನು ಯಾರಿಗೆಲ್ಲ ಇಷ್ಟು ದಿನಗಳ ಕಾಲ ಸಂಬಳವನ್ನು ಕೊಟ್ಟು ನನ್ನ ಬಳಿಯೇ ಕೆಲಸಕ್ಕೆ ಇಟ್ಟುಕೊಂಡಿದ್ದೆ ಅವರೆಲ್ಲ ಇಂದು ದೊಡ್ಡವರಾಗಿ ಬೆಳೆದಿದ್ದಾರೆ. ಅವರೇ ನನಗೆ ಒಂದುವರೆ ಕೋಟಿ ಕೊಟ್ಟು ಅವರ ಸಿನಿಮಾದಲ್ಲಿ ನಟಿಸುವಂತೆ ಕೇಳುವಷ್ಟು ದೊಡ್ಡ ಮಟ್ಟಕ್ಕೆ ನನ್ನ ಜೊತೆಯಲ್ಲೇ ಇದ್ದವರು ಬೆಳೆದಿದ್ದಾರೆ ಆದರೆ, ನಾನು ಮಾತ್ರ ಇಲ್ಲೇ ಇದ್ದೇನೆ. ರವಿಚಂದ್ರನ್ ರವರು ಮಾತನಾಡಲು ಶುರು ಮಾಡಿದರೆ ಸಾಕು ಪ್ರೇಮಲೋಕ ಮತ್ತು ರಣಧೀರದ ಬಗ್ಗೆ ಮಾತನಾಡುತ್ತಾರೆ. ಇನ್ನೇನು ಮಾತನಾಡುವುದಿಲ್ಲ ಅಂತ ನನಗೆ ಎಷ್ಟೋ ಜನ ಹೇಳಿದ್ದಾರೆ. ಆದರೆ ಹುಟ್ಟಿಸಿದ ಅಪ್ಪ ಅಮ್ಮನ ಯಾರಾದರೂ ಬದಲಾಯಿಸಲು ಸಾಧ್ಯ ಆಗುತ್ತದೆಯೆ, ಅದೇ ರೀತಿ ನಾನು ಮಾಡಿದ ಸಿನಿಮಾಗಳನ್ನ ಬದಲಾಯಿಸಲು ಕೂಡ ಸಾಧ್ಯವಾಗುವುದಿಲ್ಲ. ಆ ಸಿನಿಮಾಗಳೆ ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದು ನಿಲ್ಲಿಸಿದ್ದಾವೆ.

 

 

ಅಷ್ಟೇ ಅಲ್ಲದೆ ನನ್ನ ಜೀವನದಲ್ಲಿ ಭಯ ಅನ್ನೋದು ಎಂದಿಗೂ ಬರಲಿಲ್ಲ ಆದರೆ, ಮೊದಲ ಬಾರಿಗೆ ನನಗೆ ಭಯ ಎನ್ನುವುದು ಕಾಣುತ್ತಿದೆ. ನಾನು ಹಣವನ್ನು ಸಂಪಾದಿಸಿಲ್ಲ, ನಾನು ಒಂದು ಒಳ್ಳೆಯ ಸಿನಿಮಾ ಮಾಡಿಲ್ಲ ಎಂದು ಈ ಭಯ ಕಾಡುತ್ತಿದೆ. ನಾನು ನನ್ನ ಮಕ್ಕಳಿಗೆ ಏನು ಮಾಡಿಲ್ಲ ಎನ್ನುವ ಭಯ ಕಾಡುತ್ತಿದೆ. ದುಡ್ಡು ಎಷ್ಟು ಬೇಕಾದರೂ ಮಾಡಬಹುದು ಆದರೆ,ಆಗ ನನಗೆ ಸಿನಿಮಾವೇ ಪ್ರಪಂಚವಾಗಿತ್ತು ಸಿನಿಮಾವನ್ನು ಮಾಡಬೇಕೆಂದು ಹುಚ್ಚು ನನ್ನಲ್ಲಿತ್ತು. ನೀವು ನನ್ನ ಮುಖ ಮತ್ತು ಮನಸ್ಸು ನೋಡಿ ನನ್ನನ್ನು ಪ್ರೀತಿ ಮಾಡಿ ನನ್ನ ಆಸ್ತಿ ಹಣವನ್ನು ನೋಡಿ ನನ್ನ ಯೋಗ್ಯತೆ ಅಳೆಯಬೇಡಿ ಅಲ್ಲದೆ, ನನ್ನ ಮುಖ ಮತ್ತು ಮನಸ್ಸು ನೋಡಿ ಪ್ರೀತಿ ಮಾಡಿದವರಿಗೆ ಜೀವನ ಪೂರ್ತಿ ನಿಮ್ಮ ಕಾಲಡಿಯಲ್ಲೇ ಬಿದ್ದಿರುತ್ತೇನೆ ಎಂದು ರವಿಮಾಮ ಖಡಕ್ಕಾಗಿ ವಾರ್ನಿಂಗ್ ಕೊಟ್ಟು ಭಾವುಕರಾಗಿದ್ದಾರೆ.

Be the first to comment

Leave a Reply

Your email address will not be published.


*