Chor Bazar Kannada Movie: ಕಲಾನಭ ಫಿಲ್ಮ್ ಫ್ಯಾಕ್ಟರಿ ನಿರ್ಮಿಸಿರುವ, ಸುದರ್ಶನ್ ಚಕ್ರ ನಿರ್ದೇಶಿಸಿರುವ ಚೋರ್ ಬಜಾರ್ ಚಲನಚಿತ್ರ.
ನಾಯಕನಾಗಿ ಚೇತನ್ ಗಂಧರ್ವ , ನಾಯಕಿಯಾಗಿ ವಿರಾಣಿಕ ಶೆಟ್ಟಿ ಮತ್ತು ಹಾಸ್ಯ ನಟನಾಗಿ ಸೂರಜ್, ನಟ ಅಜಯ್ ಮೈಲಾರ ಹಾಗೂ ಧನು ಇವರು ಅಭಿನಯಿಸುತ್ತಿರುವ ಚಿತ್ರ ಚೋರ್ ಬಜಾರ್. ಇದು ನಿಜ ಜೀವನವನ್ನು ಆಧರಿಸಿದ ಕಾಮಿಡಿ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದೆ. ಕಿರಣ್ ಗೌಡ ಮತ್ತು ನೇತ್ರಾ ಕಿರಣ್ ಈ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದಾರೆ, ಸಜ್ಜು ಕೇವಿ ಮತ್ತು ರಾಹುಲ್ ದಿವಾಕರ್ ಸಿನೆಮಾ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ವಿಕಾಸ್ ವಸಿಷ್ಠ ಅವರ ಸಂಗೀತವಿದ್ದು ಮೂರು ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ.
ಈ ಚಿತ್ರದ ಸಾಹಿತ್ಯವನ್ನು ನಿರ್ದೇಶಕ ಸುದರ್ಶನ್ ಚಕ್ರ ಬರೆದಿದ್ದಾರೆ. , ಹಲವು ವರ್ಷಗಳ ಕಾಲ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿರುವ ಚಕ್ರ ಈ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ಸಾಹಿತ್ಯದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ವಿಕ್ರಮ್ ಮೋರ್ ಸಾಹಸಗಳನ್ನು ಮಾಡಿದ್ದಾರೆ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇತ್ತೀಚೆಗೆ ಚಿತ್ರದ ಕೊನೆಯ ಹಂತವನ್ನು ಪೂರ್ಣಗೊಳಿಸಿದ್ದಾರೆ, ಚೋರ್ ಬಜಾರ್ ಕೆಲವೇ ದಿನಗಳಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಮತ್ತು ಕೆಲವೇ ತಿಂಗಳುಗಳಲ್ಲಿ ಚಿತ್ರಮಂದಿರಕ್ಕೆ ಬರಲು ಚಿತ್ರತಂಡ ಸಜ್ಜಾಗಿದೆ.