ಮಗ ರಾಯನ್ ರಾಜ್ ಸರ್ಜಾನನ್ನು ಬಿಟ್ಟು ಪ್ರಾಣ ಸ್ನೇಹಿತರ ಜೊತೆ ನಟಿ ಮೇಘನಾ ರಾಜ್ ವಿದೇಶಕ್ಕೆ ಹಾರಿದ್ದಾರೆ

Meghna Raj: ನಟಿ ಮೇಘನಾ ರಾಜ್ ರವರು ತಮ್ಮ ಪತಿ ಚಿರಂಜೀವಿ ಸರ್ಜಾ ರವರನ್ನು ಕಳೆದುಕೊಂಡು ಬಳಲಿ ಬೆಂಡಾಗಿದ್ದರು. ಇದೀಗ ಸಿನಿರಂಗದಲ್ಲಿ ಮತ್ತೊಂದು ಇನ್ನಿಂಗ್ಸ್ ಅನ್ನು ಮೇಘನಾ ರಾಜ್ ರವರು ಶುರು ಮಾಡಿದ್ದಾರೆ. ಜಾಹೀರಾತುಗಳು ರಿಯಾಲಿಟಿ ಶೋಗಳು ಎಂದು ತುಂಬಾ ಬಿಸಿಯಾಗಿದ್ದಾರೆ. ಇದೀಗ ಮೇಘನಾ ರಾಜ್ ಅವರು ತಮ್ಮ ಮಗ ರಾಯನ್ ರಾಜ್ ಸರ್ಜಾ ನನ್ನು ಭಾರತದಲ್ಲಿ ಬಿಟ್ಟು ವಿದೇಶಕ್ಕೆ ಹಾರಿದ್ದಾರೆ. ತಮ್ಮ ಪತಿಯನ್ನು ಕಳೆದುಕೊಂಡ ದಿನದಿಂದ ಬೇಸರದಲ್ಲಿದ್ದ ನಟಿ ಮೇಘನಾ ರಾಜ್ ರವರು ತಾವು ತಾಯಿಯಾಗಿ ಬಡ್ತಿ ಪಡೆದ ದಿನದಿಂದ ತಮ್ಮ ಮಗನ ಲಾಲನೆ ಪಾಲನೆಯಲ್ಲಿ ಬಿಸಿಯಾಗಿದ್ದರು.

 

 

ಆದರೆ ಇದೀಗ ಇದೆಲ್ಲದಕ್ಕೂ ಬ್ರೇಕ್ ನೀಡಿ ತಮ್ಮ ಪ್ರಾಣ ಸ್ನೇಹಿತರ ಜೊತೆ ವಿದೇಶಕ್ಕೆ ಟ್ರಿಪ್ ಹೋಗಿದ್ದಾರೆ. ಸುತ್ತಲೂ ಸಮುದ್ರ, ತಂಪು ನೀಡುವ ಗಾಳಿ, ತೆಂಗಿನ ಮರಗಳು ಹಾಗೂ ಅದ್ದೂರಿ ರೆಸಾರ್ಟ್ ಗಳ ನಗರಿಗೆ ನಟಿ ಮೇಘನ ರಾಜ್ ತಮ್ಮ ಪ್ರಾಣ ಸ್ನೇಹಿತರ ಜೊತೆ ಹೋಗಿದ್ದಾರೆ. ಇತ್ತೀಚಿಗಷ್ಟೇ ಸಿನಿಮಾಗಳು ರಿಯಾಲಿಟಿ ಶೋಗಳು ಎಂದು ಬಿಸಿಯಾಗಿದ್ದ ಮೇಘನಾ ರಾಜ್ ರವರು ತಮ್ಮ ಅಭಿಮಾನಿಗಳಿಗೆ ದೊಡ್ಡದೊಂದು ಶಾಕ್ ನೀಡಿದ್ದಾರೆ. ಹಲವಾರು ಸಂದರ್ಶನಗಳಲ್ಲಿ ತಮ್ಮ ಮಗನ ಮುಂದಿನ ಭವಿಷ್ಯದ ಬಗ್ಗೆ ಅದನ್ನು ರೂಪಿಸುವ ಕುರಿತು ಹಲವಾರು ಮಾತುಗಳನ್ನಾಡಿದ ಮೇಘನಾ ರವರು ತಮ್ಮ ಈ ಬಿಜಿ ಷೆಡ್ಯೂಲ್ ನಲ್ಲಿಯೂ ಕೂಡ ತಮ್ಮ ಮಗನನ್ನು ಇಲ್ಲಿಯೇ ಬಿಟ್ಟು ಸಮಯ ಹೊಂದಿಸಿಕೊಂಡು ತನ್ನ ಪ್ರಾಣ ಸ್ನೇಹಿತರ ಜೊತೆಗೆ ವಿದೇಶಕ್ಕೆ ಟ್ರಿಪ್ ಹೋಗಿದ್ದಾರೆ.

 

 

ಕೋಸ್ಟಲ್ ಬೆಸ್ಟ್ ಪ್ಲೇಸ್ ಎನಿಸಿರುವ ಥೈಲ್ಯಾಂಡ್ ಗೆ ಮೇಘನಾ ರಾಜ್ ರವರು ತಮ್ಮ ಆಪ್ತ ಸ್ನೇಹಿತರ ಜೊತೆಗೆ ಫ್ರೀ ಟೈಮ್ ಅನ್ನು ಸ್ಪೆಂಡ್ ಮಾಡಲು ಹಾಗೂ ಚಿಲ್ ಮಾಡಲು ಹೋಗಿದ್ದಾರೆ. ತಮ್ಮ ಸ್ನೇಹಿತರ ಜೊತೆ ಪಾಸ್ಪೋರ್ಟ್ ಅನ್ನು ಹಿಡಿದು ಏರ್ಪೋರ್ಟ್ ನಲ್ಲಿ ನಿಂತಿರುವ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೇಘನಾ ರಾಜ್ ರವರು ಹಂಚಿಕೊಂಡಿದ್ದರು.

 

 

ನಟಿ ಮೇಘನಾ ರಾಜ್ ರವರು ಏರ್ಪೋರ್ಟ್ ನಲ್ಲಿ ನಿಂತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅದಕ್ಕೆ ಬೀಚ್ ಡೇ ಎಂದು ಕ್ಯಾಪ್ಷನ್ ಅನ್ನು ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ವಿಮಾನದ ವಿಂಡೋ ಸೀಟ್, ಏರ್ಪೋರ್ಟ್ ನ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಪ್ರತಿ ವರ್ಷ ಥೈಲ್ಯಾಂಡ್ ಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಕಳೆದ ಕರೋನದಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು ಇದೀಗ ಕರೋನ ತಗ್ಗಿದ ಸಮಯದಿಂದ ಥೈಲ್ಯಾಂಡ್ ಗೆ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿಯೇ ಇದೆ.

 

 

ಎರಡು ಸಾವಿರದ ಹದಿನೆಂಟರಲ್ಲಿ ಥೈಲ್ಯಾಂಡ್ ಗೆ 2.7 ಬಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದರು. ಇದೀಗ ನಟಿ ಮೇಘನ ರಾಜ್ ಕೂಡ ತಮ್ಮ ಪ್ರಾಣ ಸ್ನೇಹಿತರ ಜೊತೆ ತಮ್ಮ ದುಃಖಗಳನ್ನು ಮರೆಯಲು ಪ್ರವಾಸ ಹೋಗಿದ್ದಾರೆ. ಈ ಪ್ರವಾಸ ಮೇಘನಾ ರಾಜ್ ಅವರು ತಮ್ಮ ಮಗನನ್ನು ಬಿಟ್ಟು ತೆರಳುತ್ತಿರುವ ಎರಡನೇ ಪ್ರವಾಸವಾಗಿದ್ದು ತಮ್ಮ ಜೀವನದ ಹಲವು ಕಹಿ ನೆನಪುಗಳನ್ನು ಮರೆಯಲು ತಮ್ಮ ಸ್ನೇಹಿತರ ಜೊತೆ ಈ ಟ್ರಿಪ್ಪನ್ನು ಮೇಘನಾ ರಾಜ್ ಅವರು ಕೈಗೊಂಡಿದ್ದಾರೆ.

Be the first to comment

Leave a Reply

Your email address will not be published.


*