Adhiti prabhudeva marriage: ನಟಿ ಆದಿತಿ ಪ್ರಭುದೇವ ಹಾಗೂ ಉದ್ಯಮಿ ಯಶಸ್ ರವರ ವಿವಾಹ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನ ಗಾಯಿತ್ರಿ ವಿಹಾರದಲ್ಲಿ ನೆನ್ನೆಯಷ್ಟೇ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ನ ಹಲವಾರು ಗಣ್ಯರು ಆಗಮಿಸಿ ನವದಂಪತಿಗಳಿಗೆ ಶುಭ ಕೋರಿದರು ಅದಿತಿ ಪ್ರಭುದೇವ ಕಳೆದ ವರ್ಷವಷ್ಟೇ ತಮ್ಮ ಎಂಗೇಜ್ಮೆಂಟ್ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದರು ಇದೀಗ ಅವರು ಮದುವೆ ಆಗುತ್ತಿದ್ದು ಅವರ ಮದುವೆಗೆ ಹಾಸ್ಯ ನಟ ಚಿಕ್ಕಣ್ಣ ಕೂಡ ಬಂದಿದ್ದರು ಹಾಗೆ ಜೊತೆ ಜೊತೆಯಲಿ ದಾರಾವಾಹಿ ಖ್ಯಾತಿಯ ಮೇಘ ಶೆಟ್ಟಿ ಹಾಗೂ ಡಾರ್ಲಿಂಗ್ ಕೃಷ್ಣ ಮಿಲನ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಲವ್ ಮೊಕ್ ಟೇಲ್ ಚಿತ್ರದ ಖ್ಯಾತಿಯ ರಚನಾ ಇಂದರ್ ಕೂಡ ಆಗಮಿಸಿದ್ದರು.

 

 

ನಟಿ ಅದಿತಿ ಪ್ರಭುದೇವ ಹಾಗೂ ಉದ್ಯಮಿ ಯಶಸ್ ಮದುವೆಗೆ ಸ್ಯಾಂಡಲ್ವುಡ್ ನ ಸ್ಟಾರ್ ದಂಪತಿಗಳಾದ ಯಶ್ ಹಾಗೂ ರಾಧಿಕಾ ಪಂಡಿತ್ ಕೂಡ ಆಗಮಿಸಿದ್ದರು ಅದಿತಿ ಪ್ರಭುದೇವ ರಾಧಿಕಾ ಪಂಡಿತ್ ರವರಿಗೆ ಸ್ಟೇಜ್ ಮೇಲೆ ಮುತ್ತು ಕೊಟ್ಟು ಹಗ್ ಮಾಡಿ ತಮ್ಮ ಮದುವೆಗೆ ಬಂದಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಅದಿತಿ ಪ್ರಭುದೇವ ರಾಧಿಕಾ ಪಂಡಿತ್ ಗೆ ಸ್ಟೇಜ್ ಮೇಲೆ ಹಗ್ ಮಾಡಿ ಮುತ್ತನಿಟ್ಟಿದ್ದನ್ನು ನೋಡಿದ ಮೇಘನಾ ರಾಜ್ ಕೂಡ ಮುಗುಳ್ನಗುತ್ತಾ ತಮ್ಮ ಮಗ ರಾಯನ್ ರಾಜ ಸರ್ಜಾ ಜೊತೆ ಅದಿತಿ ಪ್ರಭುದೇವರ ಮದುವೆಗೆ ಬಂದು ಶುಭಾಶಯಗಳನ್ನು ತಿಳಿಸಿದ್ದರು.ಅದಿತಿ ಪ್ರಭುದೇವ ಹಾಗೂ ಯಶಸ್ ವಿವಾಹ ಸಮಾರಂಭಕ್ಕೆ ಬಂದ ಡಿ ಬಾಸ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಗಳು ಕೂಡ ನವ ವಧು ವರರಿಗೆ ಶುಭಾಶಯಗಳನ್ನು ತಿಳಿಸಿ ಹೂವಿನ ಗುಚ್ಚ ಒಂದನ್ನು ನೀಡಿ ದುಬಾರಿ ಉಡುಗೊರೆಯನ್ನು ಕೂಡ ನೀಡಿದ್ದರು.

 

 

ಇಷ್ಟೇ ಅಲ್ಲದೆ ಅದಿತಿ ಪ್ರಭುದೇವರ ಬಹುಕಾಲದ ಗೆಳತಿಯಾದ ಕನ್ನಡತಿ ಧಾರವಾಹಿ ಖ್ಯಾತಿಯ ರಂಜನಿ ರಾಘವನ್ ಕೂಡ ಆಗಮಿಸಿದ್ದರು. ಅದಿತಿ ಪ್ರಭುದೇವಾ ಹಾಗೂ ಯಶಸ್ ಸ್ಯಾಂಡಲ್ವುಡ್ ನ ಸ್ಟಾರ್ ಗಳಿಗೆ ಮಾತ್ರವಲ್ಲದೆ ರಾಜಕೀಯ ವ್ಯಕ್ತಿಗಳಿಗೂ ಕೂಡ ತಮ್ಮ ಮದುವೆಯ ಆಹ್ವಾನ ಪತ್ರಿಕೆಯನ್ನು ನೀಡಿದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಕೂಡ ಆಗಮಿಸಿದ್ದರು.

 

 

ಅದಿತಿ ಪ್ರಭುದೇವ, ಗೋಲ್ಡನ್ ಸ್ಟಾರ್ ಗಣೇಶ್, ಮೇಘ ಶೆಟ್ಟಿ ,ರಚನಾ ಇಂದರ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರವು ಕಳೆದ ವಾರವಷ್ಟೇ ತೆರೆ ಕಂಡಿದ್ದು ಈ ಚಿತ್ರದಿಂದ ಅದಿತಿರವರಿಗೆ ಮೇಘ ಶೆಟ್ಟಿ ಹಾಗೂ ರಚನಾ ತುಂಬಾ ಕ್ಲೋಸ್ ಆಗಿದ್ದರು ಆದ್ದರಿಂದ ಅಧಿತಿರವರ ಮದುವೆಗೆ ಮೇಘ ಶೆಟ್ಟಿ ಹಾಗೂ ರಚನಾ ಕೂಡ ಆಗಮಿಸಿ ನವ ವಧು ವರರಿಗೆ ಶುಭಾಶಯಗಳನ್ನು ಕೋರಿ ಪ್ರೆಸ್ ಮುಂದೆ ಬಂದು ಮಾತನಾಡಿ ನಾವಿಬ್ಬರೂ ಇವತ್ತು ಯಶಸ್ ಹಾಗೂ ಆದಿತಿ ಪ್ರಭುದೇವರ ಮದುವೆಗೆ ಬಂದಿದ್ದೇವೆ ಅವರು ತಮ್ಮ ಮದುವೆಯನ್ನು ತುಂಬಾ ಗ್ರಾಂಡ್ ಆಗಿ ಮಾಡಿಕೊಳ್ಳುತ್ತಿದ್ದಾರೆ. ಊಟ ಕೂಡ ತುಂಬಾ ಚೆನ್ನಾಗಿತ್ತು ಅವರು ಯಾವಾಗಲೂ ಖುಷಿ ಖುಷಿಯಿಂದ ಜೀವನಪೂರ್ತಿ ಚೆನ್ನಾಗಿರಲಿ ಎಂದು ನಾವು ಕೂಡ ಬಯಸುತ್ತೇವೆ ಎಂದರು.

 

 

ಇದೇ ವೇಳೆ ಕನ್ನಡದ ಹಾಸ್ಯ ನಟ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಚಿಕ್ಕಣ್ಣ ಕೂಡ ಅದಿತಿ ಪ್ರಭುದೇವರ ಮದುವೆಗೆ ಆಗಮಿಸಿ ನವ ವಧು ವರರಿಗೆ ಶುಭಾಶಯಗಳನ್ನು ತಿಳಿಸಿ ನವ ವಧು ವರರಿಗೆ ಉಡುಗೊರೆಯನ್ನು ಕೂಡ ನೀಡಿದರು ಈ ವೇಳೆ ಅಧಿತಿ ಪ್ರಭುದೇವ ಚಿಕ್ಕಣ್ಣನನ್ನು ನೋಡಿ ಚಿಕ್ಕು ಎಂದು ಮಧ್ಯದಲ್ಲಿ ನಿಲ್ಲಿಸಿಕೊಂಡು ಫೋಟೋವನ್ನು ಕೂಡ ತೆಗೆಸಿಕೊಂಡರು ತದನಂತರ ಚಿಕ್ಕಣ್ಣ ಕೂಡ ಅದಿತಿ ಪ್ರಭುದೇವರ ಮದುವೆಯ ಬಗ್ಗೆ ಮಾತನಾಡಿ ಅದಿತಿ ಕಳೆದ ವಾರದವರೆಗೂ ತುಂಬಾ ಬ್ಯುಸಿ ಇದ್ದರೂ ಶರಣ್ ಸರ್ ಅಭಿನಯದ ಚು ಮಂತರ್ ಎನ್ನುವ ಚಿತ್ರವನ್ನು ಕೂಡ ಕಳೆದ ವಾರವಷ್ಟೇ ಮುಗಿಸಿಕೊಂಡು ಬಂದರು ಯಶಸ್ ತುಂಬಾ ಮುಗ್ಧ ಹುಡುಗ ಅದಿತಿ ತುಂಬಾ ಜೋರಾಗೆ ಇದ್ದಾರೆ ಇವರು ಮದುವೆಯ ನಂತರವೂ ಸಿನಿಮಾಗಳನ್ನು ಮಾಡಲಿ ಎಂದು ಆಶಿಸುತ್ತೇನೆ ಇವರಿಬ್ಬರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿ ತದನಂತರ ಸಂದರ್ಶಕರು ನಿಮ್ಮ ಮದುವೆಗೆ ನಮ್ಮನ್ನು ಕರೆಯುವುದಿಲ್ಲವೇ ಎಂದಿದ್ದಕ್ಕೆ ಚಿಕ್ಕಣ್ಣ ನಗುತ್ತಾ ನಾನು ಬೇರೆಯವರ ಮದುವೆಗೆ ಮಾತ್ರ ಬರುತ್ತೇನೆ ನಾನು ಯಾರನ್ನು ನನ್ನ ಮದುವೆಗೆ ಕರೆಯುದಿಲ್ಲ ಎಂದು ಹೇಳಿದರು

Leave a comment

Your email address will not be published. Required fields are marked *