IPS Ravi D Channannavar: ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಕೆಯೋನಿಕ್ಸ್) ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ (IPS Ravi D Channannavar) ಅವರ ವರ್ಗಾವಣೆಗೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (CAT) ತಡೆ ನೀಡಿದೆ.
ಚನ್ನಣ್ಣನವರ್ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ (ನಿವೃತ್ತ) ಎಸ್.ಸುಜಾತಾ (ಸದಸ್ಯ-ನ್ಯಾಯಾಂಗ) ಮತ್ತು ರಾಕೇಶ್ ಕುಮಾರ್ ಗುಪ್ತಾ (ಸದಸ್ಯ-ಆಡಳಿತಾತ್ಮಕ) ಅವರನ್ನೊಳಗೊಂಡ ನ್ಯಾಯಪೀಠದ ಬೆಂಗಳೂರು ಪೀಠವು ಮಧ್ಯಂತರ ಆದೇಶವನ್ನು ನೀಡಿದೆ. ಜು.7ರಂದು ಸರಕಾರ ಹೊರಡಿಸಿದ್ದ ವರ್ಗಾವಣೆ ಮತ್ತು ಪೋಸ್ಟಿಂಗ್ ಆದೇಶವನ್ನು ಪ್ರಶ್ನಿಸಿದ್ದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸದಸ್ಯ-ಕಾರ್ಯದರ್ಶಿ ಹುದ್ದೆಯಿಂದ ಕಿಯೋನಿಕ್ಸ್ ಎಂಡಿ ಹುದ್ದೆಗೆ ಐಎಫ್‌ಎಸ್ ಅಧಿಕಾರಿ ಗಿರೀಶ್ ಎಚ್‌ಸಿ ಅವರ ಹುದ್ದೆಗೆ ನ್ಯಾಯಮಂಡಳಿ ತಡೆ ನೀಡಿದೆ.
ಸೇವಾ ನಿಯಮದ ಪ್ರಕಾರ ಕನಿಷ್ಠ ಎರಡು ವರ್ಷಗಳ ಸೇವಾವಧಿಯನ್ನು ಖಾತ್ರಿಪಡಿಸಿ ಆರು ತಿಂಗಳ ಹಿಂದೆಯಷ್ಟೇ ಕೆಯೋನಿಕ್ಸ್ ಎಂಡಿ ಆಗಿ ನಿಯೋಜನೆಗೊಂಡಿದ್ದ ಅವರ ವರ್ಗಾವಣೆ ಅವಧಿಗೂ ಮುನ್ನವೇ ಆಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅಲ್ಲದೆ, ವರ್ಗಾವಣೆಯು ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಥವಾ ಆಡಳಿತಾತ್ಮಕ ಅಗತ್ಯಕ್ಕಾಗಿ ಅಲ್ಲದಲ್ಲದೆ, ವರ್ಗಾವಣೆ ಮತ್ತು ಪೋಸ್ಟಿಂಗ್‌ನ ಮೇಲಿನ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ವಿರುದ್ಧವಾಗಿದೆ ಎಂದು ವಾದಿಸಲಾಯಿತು.